ವಿಟ್ಲ: ವಾಹನ ಹಿಂದಿಕ್ಕುವ ಸಂದರ್ಭ ದ್ವಿಚಕ್ರ ನಡುವೆ ಅಪಘಾತ ತಪ್ಪಿಸಲು ಹೋದ ಕಾರೊಂದು ಮಗುಚಿ ಬಿದ್ದ ಘಟನೆ ಕಲ್ಲಡ್ಕ – ಕಾಂಞಂಗಾಡು ಹೆದ್ದಾರಿಯ ಉಕ್ಕುಡ – ಅಪ್ಪೆರಿಪಾದೆ ಮಧ್ಯ ನಡೆದಿದೆ.


ದ್ವಿಚಕ್ರವಾಹನ ಸವಾರ ಮುಳಿಯ ತಾಳಿಪಡ್ಪು ನಿವಾಸಿ ರತ್ನಾಕರ ಶೆಟ್ಟಿ (43) ಗಾಯಾಳು. ಪೆರ್ಲ ಕಡೆಯಿಂದ ವಿಟ್ಲಕ್ಕೆ ಹೋಗುತ್ತಿದ್ದ ಬೆಲೆನೊ ಕಾರೊಂದು ಟಿಪ್ಪರ್ ಅನ್ನು ಹಿಂದಿಕ್ಕಲು ಹೋದ ಸಂದರ್ಭದಲ್ಲಿ ಮುಂಭಾಗದಿಂದ ರತ್ನಾಕರ ಶೆಟ್ಟಿ ಅವರು ದ್ವಿಚಕ್ರವಾಹನ ಚಲಾಯಿಸಿಕೊಂಡು ಬಂದಿದ್ದಾರೆ. ದ್ವಿಚಕ್ರಕ್ಕೆ ಡಿಕ್ಕಿಹೊಡೆಯುವುದನ್ನು ತಪ್ಪಿಸಲು ಹೋದ ಕಾರು ಟಿಪ್ಪರ್ ಗೆ ಡಿಕ್ಕಿಯಾಗಿ ದ್ಚಿಚಕ್ರವಾಹನಕ್ಕು ಡಿಕ್ಕಿಯಾಗಿ ರಸ್ತೆಯ ಬಲಭಾಗದ ಮಣ್ಣಿನ ದಿಬ್ಬದ ಮೇಲೆ ಉರುಳಿ ಬಿದ್ದಿದೆ. ಕಾರಿನಲ್ಲಿ ಇಬ್ಬರು ಪ್ರಯಾಣಿಕರಿದ್ದು ಅಪಾಯದಿಂದ ಪಾರಾಗಿದ್ದಾರೆ. ವಿಟ್ಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

