Tuesday, January 27, 2026

ಕೆಎಸ್ಸಾರ್ಟಿಸಿ ಬಸ್- ಸ್ಕೂಟರ್ ಡಿಕ್ಕಿ: ಸ್ಕೂಟರ್ ಸವಾರ ಗಂಭೀರ

ಮಂಗಳೂರು ಹೊರವಲಯದ ತಲಪಾಡಿ ಬಳಿ ಬಸ್​ಗೆ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡಿರುವ  ಘಟನೆ ನಡೆದಿದೆ.

ಉದ್ಯಾವರ ಮಾಡ ನಿವಾಸಿ ತುಳಸಿ (35) ಗಾಯಗೊಂಡಿರುವ ವ್ಯಕ್ತಿ. ತಲಪಾಡಿಯಲ್ಲಿ ಟಯರ್ ಅಂಗಡಿ ಇಟ್ಟುಕೊಂಡಿದ್ದ ತುಳಸಿ ಅವರು ಮನೆಯಿಂದ ಸ್ಕೂಟರಿನಲ್ಲಿ ಬರುತ್ತಿದ್ದ ಸಂದರ್ಭ, ಡಿವೈಡರ್ ಇರುವ ಪ್ರದೇಶದಲ್ಲಿ ತಿರುಗಿಸುತ್ತಿದ್ದಾಗ ಮಂಗಳೂರಿನಿಂದ ಕಾಸರಗೋಡು ಮಾರ್ಗವಾಗಿ ಬರುತ್ತಿದ್ದ ಕರ್ನಾಟಕ ಸಾರಿಗೆ ಬಸ್​ಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಸ್ಕೂಟರ್ ಬಸ್ಸಿನಡಿ ಸಿಲುಕಿದ್ದಾರೆ.

ಬಸ್-ಸ್ಕೂಟರ್ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಸಂಬಂಧ ನಾಗುರಿ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ‌.

More from the blog

ಕೊಡಾಜೆ : ತರ್ಬಿಯತುಲ್ ಇಸ್ಲಾಂ ಮದ್ರಸದಲ್ಲಿ ಗಣರಾಜ್ಯೋತ್ಸವ ಆಚರಣೆ

ಬಂಟ್ವಾಳ : ಕೊಡಾಜೆ ಬದ್ರಿಯಾ ಜುಮಾ ಮಸೀದಿ ಇದರ ಅಧೀನದ ತರ್ಬಿಯತುಲ್ ಇಸ್ಲಾಂ ಮದ್ರಸದ ವತಿಯಿಂದ ಗಣರಾಜ್ಯೋತ್ಸವ ಆಚರಿಸಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಸೀದಿ ಅಧ್ಯಕ್ಷ ಅಬ್ಬಾಸ್ ನೇರಳಕಟ್ಟೆ ಧ್ವಜಾರೋಹಣ ನೆರವೇರಿಸಿದರು. ಮಸೀದಿ ಕಾರ್ಯದರ್ಶಿ ಎಸ್.ಎಂ.ರಫೀಕ್...

ಕಟೀಲು 7 ಮೇಳಗಳ ಜ.27ರ ಸೇವೆಯಾಟಗಳ ವಿವರ ಇಲ್ಲಿದೆ..

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇದರ 7 ಮೇಳಗಳ ಜ.27ರ ಸೇವೆಯಾಟಗಳ ವಿವರ ಈ ಕೆಳಗಿನಂತಿವೆ.. ಜ.27ರ ಸೇವೆಯಾಟಗಳ ವಿವರ : ಆಡಳಿತ ಮಂಡಳಿ, ಶ್ರೀ ಮಹಾಗಣಪತಿ ದೇವಸ್ಥಾನ,...

ತುಂಬೆಯಲ್ಲಿ ಪ್ರಸಕ್ತ ವರ್ಷ ನಿವೃತ್ತರಾಗುವವರಿಗೆ ಅಭಿನಂದನಾ ಸಮಾರಂಭ 

ಬಂಟ್ವಾಳ : ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದವರನ್ನು ಗೌರವಿಸಬೇಕಾದ್ದು ಅಗತ್ಯ. ಅವರ ಅರ್ಪಣಾ ಮನೋಭಾವ, ಶಿಸ್ತುಬದ್ಧ ಸೇವೆ, ವಿದ್ಯಾರ್ಥಿಗಳು ಮತ್ತು ಸಂಸ್ಥೆಯ ಏಳಿಗೆಗಾಗಿ ವಹಿಸಿದ ಪಾತ್ರ ಮತ್ತು ಕೊಡುಗೆಗಳನ್ನು ಸದಾ ಸ್ಮರಿಸಬೇಕು. ಈ ನಿಟ್ಟಿನಲ್ಲಿ...

Bantwal : ಕೃಷಿ ಭೂಮಿ, ಕೊರಗ ಸಮುದಾಯ ಭವನಕ್ಕೆ ಭೂಮಿ ಮಂಜೂರಾತಿ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ

ಬಂಟ್ವಾಳ: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ (ರಿ.) ಕರ್ನಾಟಕ ಕೇರಳ, ಕೊರಗ ಅಭಿವೃದ್ಧಿ ಸಂಘ ಬಂಟ್ವಾಳ ತಾಲೂಕು ಇವರ ಜಂಟಿ ಆಶ್ರಯದಲ್ಲಿ ಕೃಷಿ ಭೂಮಿ ಮಂಜೂರಾತಿ, ಹಾಗೂ ಕೊರಗ ಸಮುದಾಯ ಭವನ ನಿರ್ಮಾಣಕ್ಕೆ...