ಬಂಟ್ವಾಳ: ನಿಯಂತ್ರಣ ತಪ್ಪಿದ ಗ್ಯಾಸ್ ಟ್ಯಾಂಕರ್ ಒಂದು ಕೆಸ್ಸಾರ್ಟಿಸಿ ಬಸ್ ಗೆ ಉಜ್ಜಿ ಬಳಿಕ ರಸ್ತೆ ವಿಭಜಕಕ್ಕೇರಿದ ಘಟನೆ ಬಂಟ್ವಾಳ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ ತುಂಬೆಯಲ್ಲಿ ಇದೀಗ ನಡೆದಿದೆ.
ಮಂಗಳೂರಿನಿಂದ ಬಿ.ಸಿರೋಡ್ ಕಡೆಗೆ ತರಳುತ್ತಿದ್ದ ಬಸ್ ತುಂಬೆ ಬಳಿ ತಕ್ಷಣ ಬ್ರೇಕ್ ಹಾಕಿ ಬಲ ಬದಿಗೆ ಸಂಚರಿಸಿದೆ. ಪರಿಣಾಮ ಬಸ್ ಹಿಂಬದಿಯ ಬಲಬದಿಯಲ್ಲಿ ಬರುತ್ತಿದ್ದ ಗ್ಯಾಸ್ ಟ್ಯಾಂಕರ್ ನಿಯಂತ್ರಣ ತಪ್ಪಿ ಬಸ್ ಗೆ ಉಜ್ಜಿದೆ. ಬಳಿಕ ರಸ್ತೆಯ ವಿಭಜಕಕ್ಕೆ ಹತ್ತಿ ಈ ಘಟನೆ ನಡೆದಿದೆ.

ಗ್ಯಾಸ್ ಟ್ಯಾಂಕರ್ ಚಾಲಕನ ಸಮಯಪ್ರಜ್ಞೆಯಿಂದ ವಾಹನವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದು, ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ. ಘಟನೆಯಿಂದ ಯಾವುದೇ ಅಪಾಯ ಸಂಭವಿಸಿಲ್ಲ.
ಘಟನಾ ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.