ಬಂಟ್ವಾಳ: ಮಂಗಳೂರು ಧರ್ಮಸ್ಥಳ ರಸ್ತೆಯ ಪಣಕಜೆ ಎಂಬಲ್ಲಿ ಕೆ.ಎಸ್.ಆರ್.ಟಿ.ಸಿ.ಬಸ್ ಹಾಗೂ ಅಮ್ನಿ ಕಾರು ನಡುವೆ ಡಿಕ್ಕಿಯಾಗಿ ಕಾರು ಚಾಲಕ ಗಾಯಗೊಂಡು ಮಂಗಳೂರು ಆಸ್ಪತ್ರೆ ಗೆ ದಾಖಲಾದ ಘಟನೆ ಶುಕ್ರವಾರ ಮಧ್ಯಾಹ್ನ ದ ವೇಳೆ ನಡೆದಿದೆ.
ಕಾರು ಚಾಲಕ ಮಡಂತ್ಯಾರು ನಿವಾಸಿ ಪಿ.ವಿ.ಭಟ್ ಎಂದು ಹೇಳಲಾಗಿದೆ.


ರಾಜ್ಯ ಹೆದ್ದಾರಿ ಮಂಗಳೂರು ಕಡೂರು ರಸ್ತೆಯ ಮಡಂತ್ಯಾರು ಸಮೀಪದ ಪಣಕಜೆ ಎಂಬಲ್ಲಿ ಕೆ.ಎಸ್.ಆರ್.ಟಿ.ಸಿ.ಹಾಗೂ ಓಮ್ನಿ ಕಾರು ಮಧ್ಯೆ ಡಿಕ್ಕಿಯಾಗಿದೆ.
ಕಾರಿನಲ್ಲಿ ಕಾರಿನ ಮಾಲಕ ಚಾಲಕ ಪಿ.ವಿ.ಭಟ್ ಮಾತ್ರ ಇದ್ದುದರಿಂದ ಅವರಿಗೆ ಬೆನ್ನಿಗೆ ಹಾಗೂ ತಲೆಗೆ ಗಾಯಗಳಾಗಿವೆ. ಗಾಯಗೊಂಡ ಭಟ್ ಅವರನ್ನು ಕೂಡಲೇ ಬೆಳ್ತಂಗಡಿ ಸರಕಾರಿ ಆಸ್ಪತ್ರೆ ಗೆ ದಾಖಲು ಮಾಡಲಾಗಿತ್ತು.
ಆದರೆ ಇವರಿಗೆ ಹೆಚ್ಚಿನ ಚಿಕಿತ್ಸೆ ಬೇಕಾದ್ದರಿಂದ ಅವರನ್ನು ಮಂಗಳೂರು ಆಸ್ಪತ್ರೆ ಗೆ ದಾಖಲಿಸಿ ಲಾಗಿದೆ.
ಸ್ಥಳಕ್ಕೆ ಪುಂಜಾಲಕಟ್ಟೆ ಎಸ್.ಐ.ಸುನೀತಾ, ಹಾಗೂ ಸಿಬ್ಬಂದಿ ಅಬುಬಕ್ಕರ್ ಹಾಗೂ ಚಾಲಕ ಸತ್ಯಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.