ಬಂಟ್ವಾಳ: ಸರಕಾರಿ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಾಹನ ಸವಾರರು ಗಾಯಗೊಂಡು ಆಸ್ಪತ್ರೆ ಗೆ ದಾಖಲಾದ ಘಟನೆ ಜಕ್ರಿಬೆಟ್ಟು ಎಂಬಲ್ಲಿ ಸಂಜೆ ನಡೆದಿದೆ.

ಬಂಟ್ವಾಳದ ಜಕ್ರಿಬೆಟ್ಟುವಿನಲ್ಲಿ ಸಂಜೆ ೬.೪೦ರ ಸುಮಾರಿಗೆ ಈ ಘಟನೆ ನಡೆದಿದೆ.

ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರರ ಕಾರಿನಲ್ಲಿ ಗಾಯಾಳುಗಳನ್ನು ಬಿಸಿರೋಡ್ ಆಸ್ಪತ್ರೆಗೆ ರವಾಣೆ ಮಾಡಲಾಗಿತ್ತು.
ಸಮಯ ಪ್ರಜ್ಞೆಯ ಜತೆ ಮಾನವೀಯತೆ ಮೆರೆದ ಮಾಜಿ ಶಾಸಕರ ಕಾರು ಚಾಲಕ ನೌಶಾದ್ ಕೈಕಂಬ ಅವರು.
ಮಾಜಿ ಶಾಸಕರ ಕಾರನ್ನು ನೌಶಾದ್ ಕೈಕಂಬ ಮಂಗಳೂರಿಗೆ ಕೊಂಡೊಯ್ಯುತ್ತಿದ್ದ ವೇಳೆ ಜಕ್ರಿಬೆಟ್ಟು ಬಳಿ ಘಟನೆ ನಡೆಯಿತು.
ಮಂಗಳೂರು ವಿಮಾನ ನಿಲ್ದಾಣದಿಂದ ಮಾಜಿ ಶಾಸಕರನ್ನು ಕರೆದುಕೊಂಡು ಬರಲು ತೆರಳುತ್ತಿದ್ದ ವೇಳೆ ಜಕ್ರಿಬಟ್ಟುವಿನಲ್ಲಿ ಘಟನೆ ನಡೆದ ಸಂದರ್ಭದಲ್ಲಿ ಶಾಸಕರ ಕಾರು ಚಾಲಕ ನೌಶಾದ್
ರಕ್ತದ ಮಡುವಿನಲ್ಲಿ ಬಿದ್ದ ಗಾಯಾಳು ದಂಪತಿಯನ್ನು ತಕ್ಷಣ ಕಾರಿನಲ್ಲಿ ಬಿಸಿ ರೋಡ್ ಆಸ್ಪತ್ರಗೆ ದಾಖಲಿಸಿದ್ದಾರೆ.
ಮಂಗಳೂರು ಕಡೆಗೆ ಹೋಗುತ್ತಿದ್ದ ಬಸ್ ಎದುರಿನಿಂದ ಬಂದ ಆಕ್ಟಿವಾಗೆ ಡಿಕ್ಕಿ ಹೊಡೆದಿದೆ.
ಬಸ್ ಚಾಲಕನನ್ನು ಕಾರಿನಲ್ಲಿ ಕುಳ್ಳಿರಿಸಿ ಗಾಯಾಳನ್ನು ಆಸ್ಪತ್ರೆಗೆ ಸಾಗಿಸಿ ದಾಖಲು ಮಾಡಿದ ನೌಶಾದ್ .
ಘಟನಾ ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಎಸ್.ಐ.ಮಂಜುನಾಥ್ ಬೇಟಿ ನೀಡಿದ್ದಾರೆ

