Friday, January 30, 2026

ಹತ್ರಾಸ್ ಅತ್ಯಾಚಾರ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಿ ಮತ್ತು ಕಠಿಣ ಕಾನೂನು ರಚಿಸಿ: ಅ.ಭಾ.ವಿ.ಪ. ಒತ್ತಾಯ

ಬಂಟ್ವಾಳ: ಉತ್ತರ ಪ್ರದೇಶದಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರಕ್ಕೆ ಸಂಬಂಧಿಸಿದ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಅಗ್ರಹಿಸಿ ಮತ್ತು ಅತ್ಯಾಚಾರಿಗಳಿಗೆ ಕಠಿಣ ಕಾನೂನು ರಚಿಸುವಂತೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ಚಾಳ ಘಟಕದ ವತಿಯಿಂದ ಬಿಸಿರೋಡು ಮಿನಿವಿಧಾನ ಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದ ದಲಿತ ವಿದ್ಯಾರ್ಥಿ ನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಖಂಡಿಸುತ್ತದೆ ಹಾಗೂ ದೇಶದಲ್ಲಿ ಮುಂದೆ ಈ ರೀತಿಯ ಘಟನೆಗಳು ಮರುಕಳಿಸದಿರಲು ಅತ್ಯಾಚಾರಿಗಳಿಗೆ ಕಠಿಣ ಕಾನೂನನ್ನು ಜಾರಿಗೊಳಿಸಬೇಕು ಎಂದು ಅ.ಭಾ.ವಿ.ಪ.ಆಗ್ರಹಿಸುತ್ತದೆ.


ಹಾಗೂ ಉತ್ತರ ಪ್ರದೇಶದ ಘಟನೆಯನ್ನು ಫಾಸ್ಟ್ ಟ್ರಾಕ್ ನ್ಯಾಯಲಯದ ಮೂಲಕ ತನಿಖೆ ನಡೆಸಿ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ವಿದ್ಯಾರ್ಥಿ ಪರಿಷತ್ ಆಗ್ರಹಿಸುತ್ತದೆ ಎಂದು ಪ್ರತಿಭಟನೆಕಾರರು ಆಗ್ರಹಿಸದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ತಾಲೂಕು ಸಂಚಾಲಕ ಹರ್ಷಿತ್ ಕೊಯಿಲ ಸೇರಿದಂತೆ ಸಂಘಟನೆಯ ಪ್ರಮುಖರು ಉಪಸ್ಥಿತಿ ರಿದ್ದರು.

More from the blog

ಜ.31ರಂದು ಲಯನ್ಸ್ ಇಂಟರ್ನ್ಯಾಷನಲ್ ಪ್ರಾಂತ್ಯ-6ರ ಪ್ರಾಂತೀಯ ಸಮ್ಮಿಲನ ಕಾರ್ಯಕ್ರಮ

ಬಂಟ್ವಾಳ: ಲಯನ್ಸ್ ಇಂಟರ್ನ್ಯಾಷನಲ್ ಪ್ರಾಂತ್ಯ-6ರ ಪ್ರಾಂತೀಯ ಸಮ್ಮಿಲನ ಕಾರ್ಯಕ್ರಮವು ಜ.31ರಂದು ಪ್ರಾಂತೀಯ ಅಧ್ಯಕ್ಷ ಉದ್ಯಮಿ ಬಾಲಕೃಷ್ಣ ಶೆಟ್ಟಿ ಪಿ. ಇವರ ಅಧ್ಯಕ್ಷತೆಯಲ್ಲಿ ಜ.31ರಂದು ಬಜಾರ್ ಆಡಿಟೋರಿಯಂ ಕಂದೂರು ಸಜಿಪಮೂಡದಲ್ಲಿ ನಡೆಯಲಿದೆ ಎಂದು ಸಮ್ಮೇಳನ...

ಕಟೀಲು 7 ಮೇಳಗಳ ಜ.30ರ ಸೇವೆಯಾಟಗಳ ವಿವರ ಇಲ್ಲಿದೆ..

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇದರ 7 ಮೇಳಗಳ ಜ.30ರ ಸೇವೆಯಾಟಗಳ ವಿವರ ಈ ಕೆಳಗಿನಂತಿವೆ.. ಜ.30ರ ಸೇವೆಯಾಟಗಳ ವಿವರ : ವಾಸು ಶೆಟ್ಟಿ, 'ಶ್ರೀದೇವಿ ಕೃಪಾ, 7ನೇ...

ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆ ಪ್ರಯುಕ್ತ ಗೊನೆ ಮುಹೂರ್ತ

ಬಂಟ್ವಾಳ : ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆಯು ಫೆ.5 ಗುರುವಾರ ರಾತ್ರಿ ಭಂಡಾರಯೇರಿ, ಮರುದಿನ ಫೆ.6 ಶುಕ್ರವಾರ ಬೆಳಿಗ್ಗೆ ಗಂಟೆ 10ರಿಂದ ಜರುಗಲಿದೆ. ಆ ಪ್ರಯುಕ್ತ ಗೊನೆಮುಹೂರ್ತವು ಗ್ರಾಮದ...

ಕರಾವಳಿ ಜಿಲ್ಲೆಗಳ ಬೆಳೆ ವಿಮೆ ಬಾಕಿ ಮೊತ್ತ ಬಿಡುಗಡೆ ಎಂ.ಎಲ್.ಸಿ ಕಿಶೋರ್ ಕುಮಾರ್ ಪುತ್ತೂರು ಆಗ್ರಹ

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಾವಿರಾರು ರೈತರಿಗೆ ಬೆಳೆ ವಿಮೆಯ ದೊಡ್ಡ ಮೊತ್ತ ಇನ್ನೂ ಪಾವತಿಯಾಗದೆ ಬಾಕಿ ಇರುವುದು ಸಾಬೀತಾಗಿದೆ. ರಾಜ್ಯಾದ್ಯಂತ ಕೃಷಿಕರು ಸಂಕಷ್ಟದಲ್ಲಿದ್ದರೂ ಸಹ, ವಿಮಾ ಕಂಪನಿಗಳು ಮತ್ತು...