Thursday, June 26, 2025

ಸಂತ ಅಲೋಶಿಯಸ್ ಕಾಲೇಜಿನಲ್ಲಿ ಸ್ಟಾನ್ ಸ್ವಾಮೀ ಹೆಸರಿನಲ್ಲಿ ಉದ್ಯಾನ ವನ – ABVP ಮಂಗಳೂರು ವಿರೋಧ , ಪ್ರತಿಭಟನೆಯ ಎಚ್ಚರಿಕೆ

ಮಂಗಳೂರಿನಲ್ಲಿರುವ ಸಂತ ಅಲೋಶಿಯಸ್ ಕಾಲೇಜ್ ಕ್ಯಾಂಪಸ್‌ನಲ್ಲಿ ನಕಲಿ ಮಾನವ ಹಕ್ಕುಗಳ ಹೋರಾಟಗಾರ, ಭಯೋತ್ಪಾದಕ, ನಗರ ನಕ್ಸಲ್ ಸ್ಟಾನ್ ಸ್ವಾಮಿಯ ಹೆಸರನ್ನು ಇಡುತ್ತಿರುವುದಕ್ಕೆ ವಿರೋಧಿಸಿ ಎಬಿವಿಪಿಯಿಂದ DCP ಮತ್ತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಹಾಗೂ ABVP ರಾಜ್ಯ ಸಹಕಾರ್ಯದರ್ಶಿ ಮಣಿಕಂಠ ಕಳಸ , VHP ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ , ಮಂಗಳೂರು ವಿ.ವಿ ಸಿಂಡಿಕೇಟ್ ಸದಸ್ಯರಾದ ರಮೇಶ್ k , ರವಿಚಂದ್ರ ಅವರು ಹಾಗೂ ಹಿಂದೂ ಜಾಗರಣ ವೇದಿಕೆಯ ಪ್ರಮುಖರು ಪತ್ರಿಕಾಗೋಷ್ಠಿ ನಡೆಸಿದರು.

 

ಕ್ಯಾಂಪಸ್‌ನಲ್ಲಿರುವ ಶಾಂತಿಯ ತೋಟಕ್ಕೆ, ಕರಾಳತೆಯ ಮುಖವಾಡದ ಫಲಕ –

ವಿದ್ಯಾರ್ಥಿ ಪರಿಷತ್ ಖಂಡನೆ

ಭಾರತದ ಅತ್ಯಂತ ಹಿರಿಯ ಭಯೋತ್ಪಾದಕ, ನಗರ ನಕ್ಸಲ್, ಈ ದೇಶದ ಅಸ್ಮಿತತೆಗೆ ಹಾಗೂ ಸಮಗ್ರತೆಗೆ ಚ್ಯುತಿ ತಂದಿರುವ ಭೀಮಾ ಕೋರೆಗಾಂವ್ ಪ್ರಕರಣದ ಪ್ರಮುಖ ಆರೋಪಿ, ಭಾರತದ ಪ್ರಧಾನ ಮಂತ್ರಿಗಳನ್ನು ಕೊಲ್ಲಲು ಸಂಚು ರೂಪಿಸಿರುವ ಪ್ರಮುಖ ಆರೋಪಿ ಸ್ಥಾನದಲ್ಲಿ ಇದ್ದು, ಬೇಲ್ ಸಿಗದೇ ಜೈಲಿನಲ್ಲಿ ಮೃತಹೊಂದಿರುವ ನಕಲಿ ಮಾನವ ಹಕ್ಕುಗಳ ಹೋರಾಟಗಾರ ಸ್ಟಾನ್ ಸ್ವಾಮೀಯ ಹೆಸರನ್ನು ಕಾಲೇಜ್ ಕ್ಯಾಂಪಸ್‌ನಲ್ಲಿ ಪ್ರಕೃತಿಯೊಂದಿಗೆ ತಾದ್ಯಾತ್ಮತೆಯನ್ನು ಹೊಂದಿರುವ ಉದ್ಯಾನವನಕ್ಕೆ ಇಂತಹ ಘಾತುಕ ವ್ಯಕ್ತಿತ್ವದ ಹಿನ್ನೆಲೆಯನ್ನು ಹೊಂದಿರುವ ಹೆಸರನ್ನು ನಾಮಕರಣ ಮಾಡುತ್ತಿರುವುದು ಅತ್ಯಂತ ಖಂಡನೀಯ ಮತ್ತು ಈ ಸಮಾಜದ ವ್ಯವಸ್ಥೆಗೆ ಅಮಾನವೀಯ ಸಂಗತಿಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಆದ ಅನನ್ಯ ಕೊಡುಗೆಯನ್ನು ನೀಡಿದ ಅತ್ಯಂತ ಹಳೆಯ ಶಿಕ್ಷಣ ಸಂಸ್ಥೆಯಾದ ಸಂತ ಅಲೋಶಿಯಸ್ ಕಾಲೇಜು ತಾನು ನಿರ್ಮಿಸಿರುವ ಉದ್ಯಾನವನಕ್ಕೆ ಸ್ಟಾನ್ ಸ್ವಾಮಿಯ ಹೆಸರನ್ನು ಇಟ್ಟಿರುವುದು ಅತ್ಯಂತ ಖೇಧಕರ, ಅಲ್ಲದೆ ಇಡೀ ರಾಷ್ಟ್ರೀಯ ಸಮಗ್ರತೆಗೆ ಪರೋಕ್ಷವಾಗಿ ಸವಾಲು ಒಡ್ಡುವ ಸಂಗತಿಯೂ ಹೌದು. ಹತ್ತಾರು ವರ್ಷಗಳಿಂದ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದಿಂದ ಕಾಲಕಾಲಕ್ಕೆ ಬೇರೆ ಬೇರೆ ರೀತಿಯಲ್ಲಿ ಅನುದಾನಗಳನ್ನು ಪಡೆಯುತ್ತ ಸರ್ಕಾರಿ ಸವಲತ್ತುಗಳನ್ನು ಇದುವರೆಗೂ ಸ್ವೀಕರಿಸುತ್ತಿರುವ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಆರೋಪಿ ಸ್ಥಾನದಲ್ಲಿದ್ದು ಜೈಲಿನಲ್ಲಿ ಸತ್ತಿರುವ ವ್ಯಕ್ತಿಯ ಹೆಸರನ್ನು ಇಡುತ್ತಿರುವುದು ಪ್ರಶ್ನಾರ್ಹವಾದ ವಿಚಾರವಾಗಿದೆ.

ಜಗತ್ತಿಗೆ ಶಾಂತಿ ಪ್ರತಿಪಾದನೆಯನ್ನು ಮಾಡಿದ ಯೇಸುವಿನ ಧರ್ಮ ಜಿಜ್ಞಾಸೆಯನ್ನು ಹೊಂದಿರುವ ಶಿಕ್ಷಣ ಸಂಸ್ಥೆಯಲ್ಲಿ, ಅಶಾಂತಿಯ, ಅಭದ್ರತೆ ಮತ್ತು ಕ್ರೌರ್ಯದ ಪ್ರತಿರೂಪದಂತಿರುವ ಸ್ಟಾನ್ ಸ್ವಾಮಿಯನ್ನು ಇಂದು ದೇವ ದೂತನಂತೆ ಪ್ರತಿಬಿಂಬಿಸಲು ಹೊರಟಿರುವ ಸಂತ ಅಲೋಶಿಯಸ್ ಕಾಲೇಜಿನ ಈ ನಡೆಯನ್ನು ಸಮಗ್ರ ಶಿಕ್ಷಣ ಪ್ರೇಮಿಗಳಿಗೆ ಹಾಗೂ ಶಾಂತಿಪ್ರಿಯ ಸಮಾಜ ಬಂಧುಗಳಿಗೆ ಅತ್ಯಂತ ದಿಗ್ಭçಮೆಯನ್ನು ಉಂಟುಮಾಡಿದೆ.

ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ಬಡಿದೆಬ್ಬಿಸಿ, ದೇಶಪ್ರೇಮಿಗಳನ್ನಾಗಿ ಪರಿವರ್ತಿಸಬೇಕಾದ ಶಿಕ್ಷಣ ಸಂಸ್ಥೆಯು ದೇಶ ವಿದ್ರೋಹಿಯನ್ನು ವಿಜ್ರಂಭಿಸುವ ನಡೆಯನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಅತ್ಯಂತ ಉಗ್ರವಾಗಿ ಖಂಡಿಸುತ್ತದೆ ಹಾಗೂ ಅಲೋಶಿಯಸ್ ಕಾಲೇಜಿನ ಈ ಚಾರಿತ್ರ್ಯಹೀನ ಕೃತ್ಯವನ್ನು ಅತ್ಯಂತ ಕಟುವಾಗಿ ಟೀಕಿಸುತ್ತಾ, ಈಗಾಗಲೇ ನಿರ್ಮಿಸಿರುವ ಉದ್ಯಾನವನಕ್ಕೆ ಇಟ್ಟಿರುವ ಸ್ಟಾನ್ ಸ್ವಾಮಿ ಎಂಬ ನಕಲಿ ಮಾನವ ಹಕ್ಕುಗಳ ಹೋರಾಟಗಾರನ ಹೆಸರನ್ನು ತೆಗೆಯಬೇಕು, ಶಿಕ್ಷಣ ಕ್ಷೇತ್ರಕ್ಕೆ, ಸಮಾಜಕ್ಕೆ ಮತ್ತು ರಾಷ್ಟçಕ್ಕೆ ಅನ್ಯನ್ಯ ಸೇವೆಯನ್ನು ನೀಡಿದ ಬಂಧುಗಳ ಹೆಸರನ್ನು ಇಟ್ಟು ಕಾಲೇಜಿನ ಘನತೆಯನ್ನು ಕಾಪಾಡಬೇಕೆಂದು ವಿದ್ಯಾರ್ಥಿ ಪರಿಷತ್ ಆಗ್ರಹಿಸುತ್ತದೆ. ಒಂದು ವೇಳೆ ಈ ಕೆಲಸವನ್ನು ಮಾಡದಿದ್ದರೆ ಎಬಿವಿಪಿ ಇದರ ವಿರುದ್ಧ ಹೋರಾಟವನ್ನು ಹಮ್ಮಿಕೊಳ್ಳುತ್ತದೆ.

More from the blog

School Holiday : ಭಾರೀ ಮಳೆ ಮುನ್ಸೂಚನೆ : ನಾಳೆ ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ರಜೆ..

ಬೆಳ್ತಂಗಡಿ: ತಾಲೂಕಿನಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯ ಹಿನ್ನಲೆ ಬೆಳ್ತಂಗಡಿ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಖಾಸಗಿ ವಿದ್ಯಾಸಂಸ್ಥೆಗಳಿಗೆ ಜೂನ್ 26ರಂದು ರಜೆ ಘೋಷಣೆ ಮಾಡಲಾಗಿದೆ. ಮುಂಜಾಗೃತ ಕ್ರಮವಾಗಿ ತಹಶೀಲ್ದಾರ್ ರವರ ತಾಲೂಕು ವಿಪತ್ತು...

Bantwal Police :ಜೂನ್ 26 ರಂದು ” ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ ” ಅಭಿಯಾನ 2025 ಕಾರ್ಯಕ್ರಮ

ಬಂಟ್ವಾಳ: ದ.ಕ.ಜಿಲ್ಲಾ ಪೋಲೀಸ್ ಇಲಾಖೆ ಹಾಗೂ ಬಂಟ್ವಾಳ ವೃತ್ತದ ಪೋಲೀಸ್ ಇಲಾಖೆಯ ವತಿಯಿಂದ ಬಿಸಿರೋಡಿನಲ್ಲಿ ಜೂನ್ 26 ರಂದು " ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ " ಅಭಿಯಾನ 2025 ಕಾರ್ಯಕ್ರಮ ನಡೆಯಲಿದೆ...

Kalladka : ಕಲ್ಲಡ್ಕ ಪ್ಲೈ ಓವರ್ ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತ..

ಬಂಟ್ವಾಳ : ಬಂಟ್ವಾಳ ತಾಲೂಕಿನ ಕಲ್ಲಡ್ಕದ ಪ್ಲೈ ಓವರ್ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಿಸಿರೋಡು - ಅಡ್ಡಹೊಳೆ ಅತೀ ಉದ್ದದ ಪ್ಲೈ ಓವರ್ ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತವಾಗಿದೆ. ಕಳೆದ 25 ದಿನಗಳ ಹಿಂದೆ...

ಇಡ್ಕಿದು ಗ್ರಾ. ಪಂ ಸಭಾಂಗಣದಲ್ಲಿ ರಾಜಕೀಯ ಸಭೆ ನಡೆಸಲು ಅನುಮತಿ ವಿಚಾರ : ಪಿಡಿಒ ಅಮಾನತು

ವಿಟ್ಲ: ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ರಾಜಕೀಯ ಸಭೆ ನಡೆಸಲು ಅವಕಾಶ ನೀಡಿದ‌ ಆರೋಪದ ಹಿನ್ನೆಲೆ ಯಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಕುಲ್ ದಾಸ್ ಭಕ್ತ ರವರನ್ನು ಅಮಾನತು...