Saturday, January 31, 2026

“ಅಬಕಾರಿ ಉದ್ಯಮ ಉಳಿಸಿ” ಅಭಿಯಾನ

ಮಂಗಳೂರು: ರಾಜ್ಯ ಪೆಡರೇಷನ್ ಆಪ್ ವೈನ್ ಮರ್ಚಂಟ್ಸ್ ಅಸೋಸಿಯೇಷನ್ಸ್(ರಿ) ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಆಯೋಜಿಸಿದ್ದ “ಅಬಕಾರಿ ಉದ್ಯಮ ಉಳಿಸಿ “ ಅಭಿಯಾನವು ಇಂದು ದ.ಕ. ಜಿಲ್ಲಾ ವೈನ್ ಮರ್ಚೆಂಟ್ಸ್ ಅಸೋಸಿಯೇಶನ್‌ ವತಿಯಿಂದ ಮಂಗಳೂರು ಕ್ಲಾಕ್ ಟವರ್ ಮುಂಬಾಗದ ಮಿನಿ ವಿದಾನ ಸೌಧ ಮುಂಬಾಗದಲ್ಲಿ ಜಿಲ್ಲೆಯ ಸನ್ನದುದಾರರ ಬಾಗವಹಿಸುವಿಕೆಯೊಂದಿಗೆ ನಡೆಯಿತು.

ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಜಿಲ್ಲಾ ಪ್ರದಾನ ಕಾರ್ಯದರ್ಶಿ ಸಿ ಎನ್ ಅಪ್ಪಚ್ಚು ಎಲ್ಲರನ್ನೂ ಸ್ವಾಗತಿಸಿ, ಅದ್ಯಕ್ಷರಾದ ಎಂ ಗಣೇಶ್ ಶೆಟ್ಟಿಯವರು ಸನ್ನದುದಾರರು ಅನುಭವಿಸುತ್ತಿರುವ ಭವಣೆಗಳ ಬಗ್ಗೆ ವಿವರಿಸಿ ನಮ್ಮ ಕಾನೂನಾತ್ಮಕ ಬೇಡಿಕೆಗಳ ಬಗ್ಗೆ ಗಮನ ಹರಿಸಿ ಪರಿಹರಿಸುವತ್ತ ಸರಕಾರವು ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸ ವ್ಯಕ್ತ ಪಡಿಸಿದರು.

ಉಪಾದ್ಯಕ್ಷ ಲೂಯಿಸ್ ಜೋಕಿಮ್ ಪಿಂಟೋ ಮಾತನಾಡಿ ನಮ್ಮವರ ನೈಜ ಸ್ಥಿತಿ ವಿಭಿನ್ನವಾಗಿದ್ದರೂ ಮದ್ಯಮಾರಾಟಗಾರರು ಎಂದರೆ ಸಿರಿವಂತರು ಎಂದು ಬಾವಿಸದೇ ನಾವೂ ಕೂಡಾ ಘನತೆಯ ವ್ಯಾಪಾರಸ್ಥರು ಎಂದು ಪರಿಗಣಿಸಿ ನೀಡುತ್ತಿರುವ ನ್ಯಾಯೋಚಿತ ಬೇಡಿಕೆಗಳನ್ನು ಈಡೇರಿಸಿ ರಾಜಸ್ವವನ್ನು ಹೆಚ್ಚಿಸುವಲ್ಲಿ ನಮ್ಮ ಸಲಹೆಗಳನ್ನೂ ಆಲಿಸಿ ಕಷ್ಟ ನಷ್ಟಗಳಿಂದ ನಮ್ಮ ಉದ್ಯಮವನ್ನು ಪಾರು ಮಾಡುವಂತೆ ಕೋರಿದರು.

ದ.ಕ. ಜಿಲ್ಲಾ ವೈನ್ ಮರ್ಚೆಂಟ್ಸ್ ಅಸೋಸಿಯೇಶನ್‌ನ ಉಪಾದ್ಯಕ್ಷರುಗಳಾದ ನಾರಾಯಣ ಪಿ ಎಂ ಮೂಡಬಿದ್ರಿ, ವಿನೋದ್ ಪುತ್ತೂರು, ಜೊತೆ ಕಾರ್ಯದರ್ಶಿ ಓಂಪ್ರಸಾದ್ ಬಾರ್ದಿಲಾ ಬಂಟ್ವಾಳ, ಮಂಗಳೂರು ತಾಲೂಕು ಪದಾದಿಕಾರಿಗಳಾದ ದಿನೇಶ್ ಕೆ. ಅಂಚನ್, ಎಚ್. ನಾಗೇಶ್ ಶೆಟ್ಟಿ, ಅಜಿತ್ ಶೆಟ್ಟಿ, ಟಿ. ರಘುರಾಮ್ ಶೆಟ್ಟಿ, ಯು. ರಾಜೇಶ್, ಶಶಿಕುಮಾರ್ ಬೈಕಂಪಾಡಿ, ಸದಾನಂದ ಶೆಟ್ಟಿ ರಂಗೋಲಿ ಬಂಟ್ವಾಳ, ಸಂತೋಷ್ ನಾಯಕ್ ಪುತ್ತೂರು, ಸುಂದರ್ ರಾವ್ , ಗಣೇಶ್ ಆಳ್ವಾ ಸುಳ್ಯ, ಪ್ರಶಾಂತ್ ಬೆಳ್ತಂಗಡಿ, ಮತ್ತಿತರರು ಉಪಸ್ಥಿತರಿದ್ದರು.

ಮನವಿಯನ್ನು ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆೆ ಸಲ್ಲಿಸಲಾಯಿತು.

More from the blog

ವಿಕಾಸ್ ಪುತ್ತೂರು ಅವರಿಗೆ ನೀಡಿದ ನೋಟಿಸ್ ಇಲಾಖೆಯ ಕಣ್ಣು ತಪ್ಪಿನಿಂದ ಆಗಿದ್ದಂತೆ!!!!

ಬಂಟ್ವಾಳ: ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಜೆಪಿ ಯುವ ನಾಯಕ ವಿಕಾಸ್ ಪುತ್ತೂರು ಅವರಿಗೆ ದ್ವೇಷ ಭಾಷಣದ ಆರೋಪದ ಮೇಲೆ ಪೋಲೀಸ್ ಇಲಾಖೆ ನೀಡಿದ ನೋಟಿಸ್ ನ ವಿರುದ್ದ ಅಧಿವೇಶನದಲ್ಲಿ ವಿಧಾನ ಪರಿಷತ್ತು ಸದಸ್ಯ...

ಮಂಗಳೂರು : ಸ್ಟ್ರೀಟ್ ಫುಡ್ ಫೆಸ್ಟ್ ಗೆ ಚಾಲನೆ

ಮಂಗಳೂರು : ಕರಾವಳಿ ಉತ್ಸವದ ಅಂಗವಾಗಿ 3 ದಿನಗಳ ಸ್ಟ್ರೀಟ್ ಫುಡ್ ಫೆಸ್ಟ್ ಗೆ ಶುಕ್ರವಾರ ಚಾಲನೆ ನೀಡಲಾಯಿತು. ನಗರದ ಕದ್ರಿ ಪಾರ್ಕ್ ಮುಖ್ಯ ರಸ್ತೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಖ್ಯಾತ ಚೆಫ್ ಶ್ರೀಯಾ...

Bantwal : ಫೆ.1ರಂದು ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ

ಬಂಟ್ವಾಳ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ ಹಾಗೂ ವಿಶ್ರಾಂತ ಸರಕಾರಿ ನೌಕರರು ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭ ಬಿ.ಸಿ.ರೋಡಿನ ಸರಕಾರಿ ನೌಕರರ ಸಭಾಭವನದಲ್ಲಿ ಫೆ.1ರಂದು ಭಾನುವಾರ ನಡೆಯಲಿದೆ. 2023-24...

ಫೆ.3ರಿಂದ 07ರವರೆಗೆ ಕಶೆಕೋಡಿ ಶ್ರೀ ಲಕ್ಮೀವೆಂಕಟರಮಣ ದೇವಸ್ಥಾನದ ಜಾತ್ರೆ ಹಾಗೂ ಬ್ರಹ್ಮರಥೋತ್ಸವ

ಬಂಟ್ವಾಳ: ಕಶೆಕೋಡಿ ಶ್ರೀ ಲಕ್ಮೀವೆಂಕಟರಮಣ ದೇವಸ್ಥಾನದ ಜಾತ್ರಮಹೋತ್ಸವ ಹಾಗೂ ಬ್ರಹ್ಮರಥೋತ್ಸವ ಬ್ರಹ್ಮ ಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತ್ರತ್ವದಲ್ಲಿ ಫೆ.3 ರಿಂದ 07 ರವರೆಗೆ ನಡೆಯಲಿದೆ ಎಂದು ಸುಧಾಕರ ಶೆಣೈ ಮರೋಳಿ...