ಬಂಟ್ವಾಳ: ಬಿಜೆಪಿ ಯುವಮೋರ್ಚಾ ಬಂಟ್ವಾಳದ ವತಿಯಿಂದ ಬೀಸಿರೋಡು ಬಸ್ ನಿಲ್ದಾಣದ ಬಳಿ ಸದಸ್ಯತಾ ಅಭಿಯಾನ ಯಶಸ್ವಿಯಾಗಿ ಜರುಗಿತು. ನ್ಯಾಯವಾದಿಗಳು, ವೈದ್ಯರು, ಚಾಲಕರು, ಕೂಲಿಕಾರ್ಮಿಕರು, ಸರ್ವದರ್ಮಿಯರು ಕೂಡ ದೇಶದ ಪ್ರಧಾನಿ ನರೇಂದ್ರಮೋದಿಯವರ ನಾಯಕತ್ವವನ್ನು ಮೆಚ್ಚಿ ಸುಮಾರು 450 ಮಂದಿ ಸದಸ್ಯತ್ವವನ್ನು ಪಡೆದುಕೊಂಡರು.

ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ಮಾರ್ಗದರ್ಶನ ಮಾಡಿದರು. ಸದಸ್ಯತ್ವದ ಕ್ಷೇತ್ರ ಸಂಚಾಲಕರಾದ ದೇವಪ್ಪ ಪೂಜಾರಿ. ಸಹಸಂಚಾಲಕರಾದ ಅಭಿಷೇಕ್ ರೈ ಮತ್ತು ಜಿಲ್ಲಾಪಂಚಾಯತ್ ಸದಸ್ಯ ತುಂಗಪ್ಪ ಬಂಗೇರ ಶುಭ ಕೋರಿದರು ಯುವಮೋರ್ಚಾ ಅಧ್ಯಕ್ಷರಾದ ವಜ್ರನಾಥ ಕಲ್ಲಡ್ಕ, ಪ್ರಧಾನ ಕಾರ್ಯದರ್ಶಿ ಸಂತೋಷ್ ರಾಯಿಬೆಟ್ಟು, ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ ಸುದರ್ಶನ್ ಬಜ, ಕ್ಷೇತ್ರ ಯುವಮೋರ್ಚಾ ಕಾರ್ಯದರ್ಶಿ ಸುರೇಶ್ ಕೋಟ್ಯಾನ್, ದಿನೇಶ್ ದಂಬೆದಾರ್, ಲೋಕೇಶ್ ಭರಣಿ, ಯುವಮೋರ್ಚಾ ಸದಸ್ಯರಾದ ಕಾರ್ತಿಕ್ ಬಲ್ಲಾಳ್, ನಾರಾಯಣ ಪೂಜಾರಿ, ಪ್ರಮುಖರಾದ ಪ್ರದೀಪ್ ಅಜ್ಜಿಬೆಟ್ಟು ಉಪಸ್ಥಿತರಿದ್ದರು.