ಬಂಟ್ವಾಳ: SSLC ಪರೀಕ್ಷೆಯಲ್ಲಿ 625 ರಲ್ಲಿ 576 ಅಂಕ ಗಳಿಸಿದ ಕಡೇಶ್ವಾಲ್ಯ ಶಾಲೆಯ ವಾಕ್ ಮತ್ತು ಶ್ರವಣ ಸಮಸ್ಯೆಯನ್ನು ಹೊಂದಿರುವ ವಿದ್ಯಾರ್ಥಿನಿ, ಕೆದಿಲ ನಿವಾಸಿ, ಯಶಸ್ವಿ.ಕೆ ಇವರ ಮನೆಗೆ ಭೇಟಿ ನೀಡಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕಿಯಾದ ಶಕುಂತಲಾ ಶೆಟ್ಟಿ ಮತ್ತು ಜಿಲ್ಲಾ ಪಂಚಾಯತ್ ಸದಸ್ಯರಾದ ಮಂಜುಳಾ ಮಾಧವ ಮಾವೆ ಅಭಿನಂದಿಸಿದರು. ಈ ಸಂದರ್ಭದಲ್ಲಿ, ವಿಟ್ಲ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ರಮಾನಾಥ ವಿಟ್ಲ, ಕೆದಿಲ ವಲಯ ಅಧ್ಯಕ್ಷರಾದ ಸುಲೈಮಾನ್, ಧನಂಜಯ, ವಿದ್ಯಾರ್ಥಿನಿಯ ಹೆತ್ತವರಾದ ತಿಮ್ಮಪ್ಪ ಮೂಲ್ಯ ಮತ್ತು ಯಶೋದ ಮೊದಲಾದವರು ಉಪಸ್ಥಿತರಿದ್ದರು.
