ಬಂಟ್ವಾಳ: ಎಸ್ಕೆಎಸ್ಸೆಸ್ಸೆಫ್ ಆಲಡ್ಕ ಶಾಖೆಯ ನೂತನ ಅಧ್ಯಕ್ಷರಾಗಿ ಹನೀಫ್ ಹಾಸ್ಕೋ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಶಾಖಾ ಕಛೇರಿ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರಿನಲ್ಲಿ ನಡೆದ ಶಾಖಾ ಮಹಾಸಭೆಯಲ್ಲಿ ಕೇಂದ್ರ ಸಮಿತಿ ಸದಸ್ಯ ಬಶೀರ್ ಮಜಲ್ ನೇತೃತ್ವದಲ್ಲಿ ಈ ಆಯ್ಕೆ ಪ್ರಕಿಯೆ ನಡೆದಿದೆ. ಅಬ್ದುಲ್ಲಾ ರಬ್ಬಾನಿ ಸಭೆಯನ್ನು ಉದ್ಘಾಟಿಸಿದರು. ಶಾಖಾಧ್ಯಕ್ಷ ಅಬೂಬಕ್ಕರ್ ಎನ್.ಬಿ. ಅಧ್ಯಕ್ಷತೆ ವಹಿಸಿದ್ದರು.


ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಬಶೀರ್ ಬೇಕರಿ, ಕೋಶಾಧಿಕಾರಿಯಾಗಿ ಇಸಾಕ್ ಫೇಶನ್‍ವೇರ್, ಸಂಘಟನಾ ಕಾರ್ಯದರ್ಶಿಯಾಗಿ ಮಹಮ್ಮದ್ ಶಫೀಕ್, ಗೌರವಾಧ್ಯಕ್ಷರಾಗಿ ಹಾಜಿ ಅಬ್ದುಲ್ ಖಾದರ್ ಬೋಗೋಡಿ ಹಾಗೂ ಕ್ಲಸ್ಟರ್ ಕೌನ್ಸಿಲ್ ಮತ್ತು ಎಸ್ಕೆಎಸ್ಸೆಸ್ಸೆಫ್ ಇದರ 7 ವಿಭಾಗದ ಪ್ರಧಾನ ಕಾರ್ಯದರ್ಶಿಗಳನ್ನು ಆರಿಸಲಾಯಿತು. ಬಶೀರ್ ಬೇಕರಿ ಲೆಕ್ಕಪತ್ರ ಹಾಗೂ ವಾರ್ಷಿಕ ವರದಿ ವಾಚಿಸಿದರು. ಖಲೀಲ್ ದಾರಿಮಿ ಸ್ವಾಗತಿಸಿ, ಮುಹಮ್ಮದ್ ಶಫೀಕ್ ಕಾರ್ಯಕ್ರಮ ನಿರೂಪಿಸಿದರು.