Sunday, January 25, 2026

ಅನಾಥ ಕುಟುಂಬಕ್ಕೆ ನೆರವಾದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್: ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ

ಬಂಟ್ವಾಳ: ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾದ ಅನಾಥ ಕುಟುಂಬವೊಂದಕ್ಕೆ ಸಕಾಲದಲ್ಲಿ ನೆರವು ನೀಡುವ ಭರವಸೆಯ ಮೂಲಕ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಲಾಕ್ ಡೌನ್ ಬಳಿಕ ಮನೆ ಕಳೆದುಕೊಂಡು ಕೆಲಸವಿಲ್ಲದೆ ಊಟಕ್ಕೂ ಗತಿಯಿಲ್ಲದೆ  ಬೀದಿಯಲ್ಲಿದ್ದ ಕುಟುಂಬಕ್ಕೆ ಆಸರೆಯಾಗಿ ನಿಂತ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ನಡೆ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಮೂಲತಃ ಬಂಟ್ವಾಳ ತಾಲೂಕಿನ  ಬಡಗಬೆಳ್ಳೂರು ಮುಟ್ಟಿಕಲ್ಲು ಎಂಬಲ್ಲಿನ  ಕುಟುಂಬ ವಗ್ಗದ ಕುಜಿಲಬೆಟ್ಟು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಗಂಡ ಮೇಸ್ತ್ರಿ ಕೆಲಸ ಸಹಾಯಕರಾಗಿ ದುಡಿದು ಹೆಂಡತಿ ಮತ್ತು ಎರಡು ವರ್ಷದ ಮಗುವಿನೊಂದಿಗೆ ಜೀವನ ಮಾಡುತ್ತಿದ್ದರು.

ದಿನ ದುಡಿದರೆ ಮಾತ್ರ ಒಂದು ಹೊತ್ತು ಊಟ ಎಂಬ ಸ್ಥಿತಿಯಲ್ಲಿ ದ್ದ ಕುಟುಂಬಕ್ಕೆ ಕೊರೊನಾ ಲಾಕ್ ಡೌನ್ ಸಿಡಿಲು ಬಡಿದಂತಾಗಿದೆ.  ಕೆಲಸ ಇಲ್ಲದ ಕುಟುಂಬ ಮನೆ ಬಾಡಿಗೆಕೊಡಲು ಕೈಯಲ್ಲಿ ಡುಡ್ಡಿಲ್ಲ, ಊಟಕ್ಕೆ ಗತಿಯಲ್ಲಿ ಎಂಬ ಸ್ಥಿತಿಯಲ್ಲಿ ಬಾಡಿಗೆ ಮನೆ ಬಿಟ್ಟು ಹೊರಗೆ ಬರಬೇಕಾಯಿತು. ದಾರಿ ಯಾವುದಯ್ಯ, ದಾರಿ ತೊರಿಸಯ್ಯ ಎಂಬಂತೆ ಮನೆ ಬಿಟ್ಟು ಬೀದಿಗೆ ಬಂದ ಎರಡು ವರ್ಷದ ಎಳೆಯ ಕಂದಮ್ಮನ ಜೊತೆಯಲ್ಲಿ ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಕುಳಿತುಕೊಂಡಿದ್ದರು.

ಈ ಕುಟುಂಬದ ಅಸಾಯಕತೆಯ ಪರಿಸ್ಥಿತಿಯನ್ನು ನೋಡಿದ ಕರ್ಪೆ ಗ್ರಾಮದ ಅಡಂಗಾಜೆ ನಿವಾಸಿ ಪ್ರಶಾಂತ್ ಶಾಂತಿ ಅವರು ಕುಟುಂಬವನ್ನು ತನ್ನ  ಮನೆಗೆ  ಕರೆದುಕೊಂಡು ಬಂದು ವಾಸ್ತವ್ಯ  ಸಮೇತ ಊಟೋಪಚಾರ ವ್ಯವಸ್ಥೆ ಮಾಡಿದ್ದರು.

ಇವತ್ತು ಸಂಜೆ ಕರ್ಪೆ ಗ್ರಾಮದಲ್ಲಿ ತಾತ್ಕಾಲಿಕವಾಗಿ ಆಸರೆ ಪಡೆದ ಕುಟುಂಬದ ಸದಸ್ಯೆ ವಿಮಲ ಅವರು  ತನ್ನ ಕುಟುಂಬ ಪರಿಸ್ಥಿತಿಯನ್ನು ವಾಟ್ಸಪ್ ನಲ್ಲಿ ವೀಡಿಯೋ ಮೆಸೇಜ್ ಮುಲಕ ತಿಳಿಸುತ್ತಾ, ತನ್ನ ಅಳಲನ್ನು ತೋಡಿಕೊಂಡಿರುವ ವಿಷಯವು  ಸಾಮಾಜಿಕ ಜಾಲತಾಣಗಳ ಮುಖಾಂತರ ಹರಿಯಲು ಬಿಟ್ಟಿದ್ದರು.

ನಾವು ಕೂಲಿ ಕಾರ್ಮಿಕರು. ನಮಗೆ ಮನೆಯಿಲ್ಲ. ಊಟಕ್ಕೆ ಗತಿಯಿಲ್ಲ‌. ಸಾಧ್ಯವಾದವರು ಸಹಾಯ ಮಾಡಿ. ಬಂಟ್ವಾಳ ಶಾಸಕರಿಗೆ ಮುಟ್ಟುವರೆಗೆ ಶೇರ್ ಮಾಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ ವೀಡಿಯೋ ಕಂಡ ಬಂಟ್ವಾಳ  ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಕುಟುಂಬಕ್ಕೆ ತಕ್ಷಣವೇ ಸ್ಪಂದಿಸಿದರು.

ಶಾಸಕರ ವಾರ್ ರೂಮ್ ಸದಸ್ಯರು ಹಾಗೂ ಸ್ಥಳೀಯ ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಮತ್ತು ಬಿಜೆಪಿ ನಾಯಕ ರತ್ನಕುಮಾರ್ ಚೌಟರ ಮೂಲಕ ಮನೆಗೆ ಭೇಟಿ ಮಾಡಿಸಿ ನೊಂದ ಮಹಿಳೆಯೊಂದಿಗೆ ಶಾಸಕರು ದೂರವಾಣಿ ಮಾತಾಡಿ, ನಾಳೆಯಿಂದಲೇ ಸಕಲ  ವ್ಯವಸ್ಥೆಯನ್ನು ಪೂರೈಸುವುದಾಗಿ ತಿಳಿಸಿದರು.

ಯಾವ ಕೆಲಸ ಮಾಡುವುದಾದರೂ ಅವರಿಗೆ ವ್ಯವಸ್ಥೆ ಮಾಡಿಕೊಡುವ ಜೊತೆಗೆ ತಾತ್ಕಾಲಿಕವಾಗಿ ಅವರಿಗೆ ಮನೆ ಹಾಗೂ ದೈನಂದಿನ ಬಳಕೆಗೆ ಬೇಕಾಗುವ ಸಾಮಗ್ರಿಗಳನ್ನು ನೀಡುವ ವ್ಯವಸ್ಥೆ ಕಲ್ಪಿಸಿದ್ದಾರೆ.

ಈ ಸಂದರ್ಭದಲ್ಲಿ ಶಾಸಕರ  ವಾರ್ ರೂಮ್ ಸದಸ್ಯ ದಿನೇಶ್ ಶೆಟ್ಟಿ ದಾಂಬೆದರ್, ಉಮೇಶ್ ಗೌಡ, ತೇಜಸ್ ಕರ್ಪೆ ಹಾಗೂ  ಮತ್ತಿತರರು  ಉಪಸ್ಥಿತರಿದ್ದರು.

More from the blog

ವಿಟ್ಲ : ಜಾತ್ರೆಯ ಪ್ರಯುಕ್ತ ನೇಮೋತ್ಸವ..

ವಿಟ್ಲ : ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಇದರ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆಯ ಪ್ರಯುಕ್ತ ಅರಸು ಮುಂಡಾಲತ್ತಾಯ, ಮಲರಾಯ ದೈವ, ಕೊಡಮಣಿತ್ತಾಯ ಹಾಗೂ ಪಿಲಿಚಾಮುಂಡಿ ದೈವಕ್ಕೆ ದೇವಸ್ಥಾನದ ಎದುರು ನೇಮೋತ್ಸವ...

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ, ದಕ್ಷಿಣ...

ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟ – ಕೆ.ಪಿ.ಎಸ್ ಪ್ರೌಢಶಾಲೆ ದೈಹಿಕ ಶಿಕ್ಷಣ ಶಿಕ್ಷಕಿ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ :ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ ದಕ್ಷಿಣ ಕನ್ನಡ...

ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ..

ಬಂಟ್ವಾಳ: ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವವು ಶತರುದ್ರಾಭಿಷೇಕ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ತಂತ್ರಿಗಳಾದ ದಿನೇಶ್‌ಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಾರ್ಥನೆ, ಪುಣ್ಯಾಹ, ಗಣಹೋಮ, ಶತರುದ್ರಾಭಿಷೇಕ, ನವಕ ಕಲಶಾಭಿಷೇಕ, ವೀರಾಂಜನೇಯ...