Tuesday, April 9, 2024

ಮೇ.14: ಮಲ್ಲೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶಾಭಿಷೇಕ

ಮಂಗಳೂರು: ಮಲ್ಲೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದಗಳೊಂದಿಗೆ, ಬ್ರಹ್ಮಶ್ರೀ ವೇದಮೂರ್ತಿ ದೇರೆಬೈಲು ವಿಠಲದಾಸ ತಂತ್ರಿ ಅವರ ನೇತೃತ್ವದಲ್ಲಿ ಮೇ.13ರಂದು 7.10ಕ್ಕೆ ಶ್ರೀದೇವರ ಬಿಂಬ ಪ್ರತಿಷ್ಠೆ, ಮೇ.14ರಂದು ಬೆಳಗ್ಗೆ 8.10ಕ್ಕೆ ಬ್ರಹ್ಮಕಲಶಾಭಿಷೇಕ ಮಹೋತ್ಸವ ನೆರವೇರಲಿದೆ.

ಉತ್ಸವ ಪ್ರಯುಕ್ತ ಮೇ.12ರಿಂದ 14ರವರೆಗೆ ಪ್ರತಿದಿನ ವೈದಿಕ ಕಾರ್ಯಕ್ರಮ, ಧಾರ್ಮಿಕ ಸಭೆ ನಡೆಯಲಿದೆ. ಮೇ.12ರಂದು ಬೆಳಗ್ಗೆಯಿಂದ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ಸಾಯಂಕಾಲ 3.30ಕ್ಕೆ ಹೊರಕಾಣಿಕೆ ಮೆರವಣಿಗೆ ಕ್ಷೇತ್ರಕ್ಕೆ ಆಗಮಿಸಲಿದೆ. ಸಾಯಂಕಾಲ 6ಗಂಟೆಗೆ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಮೇಶ್ ಆಳ್ವ, ಕಜೆ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಬಳಿಕ ಶ್ರೀಕೃಷ್ಣ ಸಂಧಾನ-ಹರಿದಾಸರಾದ ಶರತ್ ಶೆಟ್ಟಿ ಪಡುಪಳ್ಳಿ ಅವರಿಂದ ಹರಿಕಥಾ ಸತ್ಸಂಗ ನಡೆಯಲಿದೆ. ಮೇ.13ರಂದು ಮಧ್ಯಾಹ್ನ 2.30ರಿಂದ ಮರೋಳಿ ಶ್ರೀಸೂರ್ಯನಾರಾಯಣ ಮಹಿಳಾ ಯಕ್ಷಗಾನ ಮಂಡಳಿಯಿಂದ ಭಾರ್ಗವ ವಿಜಯ ಯಕ್ಷಗಾನ ನಡೆಯಲಿದೆ. ಸಾಯಂಕಾಲ 6ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಪೊಳಲಿ ರಾಮಕೃಷ್ಣ ತಪೋವನದ ಶ್ರೀ ವಿವೇಕಾಚೈತನ್ಯಾನಂದ ಸ್ವಾಮೀಜಿ ಆಶೀರ್ವಚನ ನೀಡಲಿರುವ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಭಾಶ್ ಶೆಟ್ಟಿ ದೆಮ್ಮಲೆ ವಹಿಸಲಿದ್ದಾರೆ. ಬಳಿಕ 8 ಗಂಟೆಗೆ ಮಂಗಳಾದೇವಿ ಯಕ್ಷಗಾನ ಮಂಡಳಿಯವರಿಂದ ಶ್ರೀಮಂಗಳಾದೇವಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಮೇ.14ರಂದು ಬೆಳಗ್ಗೆ ಬ್ರಹ್ಮಕಲಶಾಭಿಷೇಕ ಸಹಿತ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಮಧ್ಯಾಹ್ನ 1ಗಂಟೆಯಿಂದ ಪ್ರತಿಭಾ ಸುವರ್ಣ ಅವರಿಂದ ಭಕ್ತಿ ಸಂಗೀತ ನಡೆಯಲಿದೆ. ಮಧ್ಯಾಹ್ನ 2.30ರಿಂದ ವಿಠಲ್ ನಾಯಕ್ ಕಲ್ಲಡ್ಕ ಬಳಗದಿಂದ ಗೀತಾ-ಸಾಹಿತ್ಯ-ಸಂಭ್ರಮ ಕಾರ್ಯಕ್ರಮವಿದೆ. ಸಾಯಂಕಾಲ 6ಗಂಟೆಗೆ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನಂನ ಶ್ರೀಗುರುದೇವಾನಂದ ಸ್ವಾಮೀಜಿ, ಬ್ರಹ್ಮಶ್ರೀ ದೇರೆಬೈಲು ವಿಠಲದಾಸ ತಂತ್ರಿ, ನಡುಬೊಟ್ಟು ಶ್ರೀಉದ್ಭವ ರೌದ್ರನಾಥೇಶ್ವರ ಕ್ಷೇತ್ರದ ಧರ್ಮದರ್ಶಿ ರವಿ.ಎನ್ ಆಶೀರ್ವಚನ ನೀಡಲಿದ್ದಾರೆ. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಡಾ.ಮಂಜಯ್ಯ ಶೆಟ್ಟಿಗುಂಡಿಲಗುತ್ತು ಅಧ್ಯಕ್ಷತೆ ವಹಿಸಲಿದ್ದು, ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ. ಬಳಿಕ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ 10ಗಂಟೆಯಿಂದ ಚಾ ಪರ್ಕ ತಂಡದ ಕಲಾವಿದರಿಂದ `ಪನಿಯರೆ ಆವಂದಿನ’ ತುಳು ಹಾಸ್ಯಮಯ ನಾಟಕ ನಡೆಯಲಿದೆ.

More from the blog

ದಕ್ಷಿಣ ಕನ್ನಡ: ಪಕ್ಷೇತರ ಅಭ್ಯರ್ಥಿ ನಾಮಪತ್ರ ವಾಪಸ್‌ : 9 ಅಭ್ಯರ್ಥಿಗಳು ಕಣದಲ್ಲಿ

ಮಂಗಳೂರು: ಲೋಕಸಭಾ ಚುನಾವಣೆಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಬ್ಬ ಅಭ್ಯರ್ಥಿ ನಾಮಪತ್ರ ಹಿಂಪಡೆದಿದ್ದು, ಒಟ್ಟು ಒಂಬತ್ತು ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದ 11 ಮಂದಿಯ ಪೈಕಿ 10 ಅಭ್ಯರ್ಥಿಗಳ...

ಪ್ರಕೃತಿಯಲ್ಲಿ ಒಂದಿಲ್ಲೊಂದು ವಿಸ್ಮಯ : ಈ ರೀತಿಯ ಕಿತ್ತಾಳೆ ಹಣ್ಣು ನೋಡಿದ್ದೀರಾ…

ಬಂಟ್ವಾಳ: ಪಕೃತಿಯಲ್ಲಿ ಆಗೊಮ್ಮೆ ಈಗೊಮ್ಮೆ ವಿಚಿತ್ರ ಸಂಗತಿಗಳು ಕಾಣಸಿಗುತ್ತವೆ. ಹಾಗೇಯೆ ಇಲ್ಲೊಂದು ಕಿತ್ತಾಳೆ ಹಣ್ಣು ತನ್ನ ರೂಪದಲ್ಲಿ ಸ್ವಲ್ಪ ಮಟ್ಟಿಗೆ ವಿಚಿತ್ರ ಕಂಡಿದೆ. ಮಾಮೂಲಿಯಾಗಿ ಕಿತ್ತಾಳೆ ಬಣ್ಣ ಮತ್ತು ಆಕಾರದಲ್ಲಿ ಒಂದೇ ಆಗಿರುತ್ತದೆ. ಆದರೆ...

ಭಕ್ತರೇ ಗಮನಿಸಿ…. ಈ ದಿನ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಆಗೇಲು ಸೇವೆ ಇರುವುದಿಲ್ಲ

ಬಂಟ್ವಾಳ ತಾಲೂಕು ಸಜೀಪಮೂಡ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಏ.12, 14, 16 ರಂದು ಆಗೇಲು ಸೇವೆ ಇರುವುದಿಲ್ಲ. ಏ. 19ರಿಂದ ಆಗೇಲು ಸೇವೆ ನಡೆಯುತ್ತದೆ ಹಾಗೂ ಏ.21 ರಂದು ಆಗೇಲು ಸೇವೆ...

ಲೋಕಸಭಾ ಚುನಾವಣೆ : ಅಕ್ರಮ ವ್ಯವಹಾರಿಗಳಿಗೆ ರಹದಾರಿಯಾದ ಸಾಲೆತ್ತೂರು ಬಳಿಯ ಕೂಡುರಸ್ತೆ ಚೆಕ್ ಪೋಸ್ಟ್

ವಿಟ್ಲ: ಲೋಕಸಭಾ ಚುನಾವಣೆಗೆ ಈಗಾಗಲೇ ದಿನ ನಿಗದಿಯಾಗಿದ್ದು, ಜಿಲ್ಲಾಡಳಿತ ಸರ್ವ ಸನ್ನದ್ದವಾಗಿದೆ. ಅಕ್ರಮಗಳನ್ನು ತಡೆಗಟ್ಟುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತವು ಗಡಿಪ್ರದೇಶ ಸೇರಿದಂತೆ ಜಿಲ್ಲೆಯಲ್ಲಿ 23 ಕಡೆಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿದೆ. ಆದರೆ...