Saturday, April 6, 2024

ಶೌಚಾಲಯ ಇಲ್ಲದ ನೂತನ ಮಣಿನಾಲ್ಕೂರು ಸಂತೆಕಟ್ಟೆ

ಬಂಟ್ವಾಳ: ರೂ. 17.22 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾದ ಗ್ರಾಮೀಣ ಭಾಗದಲ್ಲಿ ಸಂತೆಕಟ್ಟೆಗೆ ಶೌಚಾಲಯ ಹಾಗೂ ವಿದ್ಯುತ್ ಸಂಪರ್ಕ ಇಲ್ಲದೇ ವ್ಯಾಪಾರಸ್ಥರೂ ಹಾಗೂ ಗ್ರಾಹಕರು ಸಮಸ್ಯೆಗೆ ಬಿದ್ದಿದ್ದಾರೆ.
ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸೆಪ್ಟಂಬರ್ 18 ರಂದು ಬಂಟ್ವಾಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ರೂ.17.22 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಮುಚ್ಚು ಹರಾಜುಕಟ್ಟೆಯ ಕಟ್ಟಡ ಮಣಿನಾಲ್ಕೂರು ಗ್ರಾಮ ಪಂಚಾಯತ್‌ಗೆ ಹಸ್ತಾಂತರಗೊಂಡಿರುತ್ತದೆ. ಕಳೆದ ನಾಲ್ಕು ವಾರಗಳಲ್ಲಿ ಹರಾಜು ಕಟ್ಟೆಯಲ್ಲಿ ವಾರದ ಸಂತೆ ಪ್ರಾರಂಭಾವಾಗಿದೆ. ಮೊದಮೊದಲಿಗೆ ಕೆಲವೇ ಸಂತೆ ವ್ಯಾಪಾರಿಗಳು ಬಂದಿದ್ದು, ಈಗ ವಾರದಿಂದ ವಾರಕ್ಕೆ ಸಂತೆಕಟ್ಟೆಯಲ್ಲಿ ಮಾರಾಟ ಮಾಡುವವರ ಸಂಖ್ಯೆಯು ಹೆಚ್ಚುತ್ತಾ ಹೋಗಿದೆ. ಸ್ಥಳೀಯವಾಗಿ ಮಂಗಳವಾರ ಯಾವುದೇ ಸಂತೆ ಇಲ್ಲದಿರುವುದರಿಂದ ಸಂತೆ ವ್ಯಾಪಾರಿಗಳಿಗೆ ಅನುಕೂಲವಾಗಲೇಂದೇ ನಿಗದಿ ಪಡಿಸಲಾಗಿದೆ.
ಉಪ್ಪಿನಂಗಡಿ, ಬೆಳ್ತಂಗಡಿ, ಪುತ್ತೂರು, ಕಲ್ಲಡ್ಕ, ಸುಳ್ಯ, ವಾಮದಪದವು, ಮೂಡಬಿದ್ರೆ, ಹೀಗೆ ನಾನಾ ಕಡೆಗಳಿಂದ ಬರುವ ಸಂತೆ ವ್ಯಾಪಾರಿಗಳು ಮಣಿನಾಲ್ಕೂರು ಸಂತೆ ಕಟ್ಟೆಯಲ್ಲಿ ಠಿಕಾಣಿ ಹೂಡಿ ವ್ಯಾಪಾರಕ್ಕೆ ನಿರತರಾಗಿರತ್ತಾರೆ. ಈಗ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಗ್ರಾಮೀಣ ಭಾಗದ ಜನರು ಸಾಮಾಗ್ರಿಗಳನ್ನು ಪಡೆದುಕೊಳ್ಳಲು ಬರುತ್ತಿದ್ದು ಮಧ್ಯಾಹ್ನ ನಂತರ ಗ್ರಾಹಕರ ಸಂಖ್ಯೆ ಕಡಿಮೆ ಕಾಣುತ್ತಿದೆ.
ಶೌಚಾಲಯ ಮತ್ತು ವಿದ್ಯುತ್ ಸಂಪರ್ಕ ಇಲ್ಲ: ಸುಸಜ್ಜಿತವಾಗಿ ನಿರ್ಮಾಣವಾದ 17.22 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಮುಚ್ಚು ಹರಾಜು ಸಂತೆಯಲ್ಲಿ ಶೌಚಾಲಯದ ಕೊರತೆ ಎದ್ದು ಕಾಣುತ್ತಿದೆ. ದೂರದೂರಿಂದ ಬರುವ ಮಾರಾಟಗಾರರಿಗೆ ತಮ್ಮ ಬಹಿರ್ದೆಸೆಗೆ ಗುಡ್ಡ ಪ್ರದೇಶ ಇಲ್ಲವೇ ಬಯಲು ಪ್ರದೇಶವನ್ನು ಅವಲಂಬಿಸಬೇಕಾದ ಪರಿಸ್ಥಿತಿ ಎದುರಾಗಿದೆ. ದೂರದ ಊರಿನ ಅವರಿಗೆ ಈ ಊರಿನ ಪರಿಚಯವೂ ಇಲ್ಲದೆ ಇರುವುದರಿಂದ ಅವರು ಮುಜುಗರಕ್ಕೆ ಒಳಗಾಗುವ ಸಂತೆಕಟ್ಟೆಗೆ ವಿದ್ಯುತ್ ಸಂಪರ್ಕವೂ ಇದುವರೆಗೂ ಆಗಿಲ್ಲ. ವಗ್ಗ ಸಂತೆ ಕಟ್ಟೆಯ ನಂತರ ಇರುವುದು ಉಪ್ಪಿನಂಗಡಿ ಸಂತೆಕಟ್ಟೆ. ಹಾಗಾಗಿ ಮಣಿನಾಲ್ಕೂರು, ಅಲ್ಲಿಪಾದೆ, ಸರಪಾಡಿ, ಉಳಿ, ಅಜಿಲಮೊಗರು ಹೀಗೆ ಕೆಲವು ಭಾಗದಲ್ಲಿ ಸಂತೆ ಇಲ್ಲದಿರುವುದರಿಂದ ಮಣಿನಾಲ್ಕೂರು ಸಂತೆಯಿಂದ ಸುತ್ತಲಿನ ಹಳ್ಳಿಯ ನಿವಾಸಿಗಳಿಗೆ ಸಂತೆಕಟ್ಟೆಯಿಂದ ಪ್ರಯೋಜನವಾದೀತು.
ಆದರೆ ಪ್ರಯೋಜನವಿದ್ದರೂ ಸರಿಯಾದ ವ್ಯವಸ್ಥೆ ಇಲ್ಲದೆ ಇರುವುದರಿಂದ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ. ಯಾವುದೇ ಹೊಸ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತರುವಾಗ ಅದನ್ನು ವ್ಯವಸ್ಥಿತವಾಗಿ ಮಾಡಿ ಜನರ ಉಪಯೋಗಕ್ಕೆ ಸಿಗುವಂತೆ ಮಾಡಬೇಕು. ಅದರ ಬದಲು ಆಗಬಹುದಾದ ವ್ಯವಸ್ಥೆ ಮಾಡಿ ಮತ್ತೆ ಜನರಿಗೆ ತೊಂದರೆಯಾದ ಮೇಲೆ ಅದರ ಬಗ್ಗೆ ಚಿಂತೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ.

More from the blog

ರಾಜ್ಯದಲ್ಲಿ 60 ಮಂದಿಯ ನಾಮಪತ್ರ ತಿರಸ್ಕೃತ

ಬೆಂಗಳೂರು: ಲೋಕಸಭಾ ಚುನಾವಣೆಗೆ ರಾಜ್ಯದ ಮೊದಲ ಹಂತದ 14 ಕ್ಷೇತ್ರಗಳಲ್ಲಿ 358 ಅಭ್ಯರ್ಥಿಗಳು 492 ನಾಮಪತ್ರ ಸಲ್ಲಿಸಿದ್ದು, ಇದರಲ್ಲಿ 13 ಕ್ಷೇತ್ರದಲ್ಲಿ ಪರಿಶೀಲನೆ ಕಾರ್ಯ ಮುಗಿದಿದೆ. 276 ನಾಮಪತ್ರಗಳು ಕ್ರಮಬದ್ಧವಾಗಿದ್ದು, 60 ನಾಮಪತ್ರಗಳು...

ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌ : ವಾರಾಂತ್ಯದಲ್ಲಿ ಚಿನ್ನದ ದರ ತುಸು ಇಳಿಕೆ…

ಬೆಂಗಳೂರು: ಚಿನ್ನದ ದರದಲ್ಲಿ ಮತ್ತೆ ಹಾವು ಏಣಿಯಾಟ ಶುರುವಾಗಿದೆ. ಕಳೆದೆರಡು ದಿನಗಳಿಂದ ನಿರಂತರ ಏರಿಕೆ ಕಂಡಿದ್ದ ಬಂಗಾರದ ಬೆಲೆ ಇದೀಗ ಇಳಿಕೆಯಾಗಿದೆ. ನಿನ್ನೆಯ ದರಕ್ಕೆ ಹೋಲಿಸಿದರೆ 10ಗ್ರಾಂ ಚಿನ್ನದ ಮೇಲೆ 450 ರೂ...

ನೀತಿ ಸಂಹಿತೆ ಇರುವಾಗ ಆಶ್ಲೇಷ ಬಲಿ ಮಂಟಪ ಕಾಮಗಾರಿ ಆರಂಭ ಸಮರ್ಪಕವಲ್ಲ- ಹರೀಶ್ ಇಂಜಾಡಿ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ಹಿಂದಿನ ಆಡಳಿತ ಮಂಡಳಿಯ ಕೊನೇ ದಿನಗಳಲ್ಲಿ ದಾನಿಗಳು ಕ್ಷೇತ್ರದಲ್ಲಿ ಆಶ್ಲೇಷ ಬಲಿ ಮಂಟಪ ನಿರ್ಮಿಸಲು ಮುಂದೆ ಬಂದರು. ಇದು ಸ್ವಾಗತಾರ್ಹ ಬೆಳವಣಿಗೆ. ಆದರೆ...

ಪ್ರಧಾನಿ ಮೋದಿ ಕರೆ : ಪ್ರತಿಯೊಬ್ಬರ ಕೈ ಮೇಲೆ ಕಮಲದ ಹಚ್ಚೆ ಹಾಕಿ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ  ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಪ್ರತಿಯೊಬ್ಬರ ಕೈ ಮೇಲೆ ಕಮಲದ ಹಚ್ಚೆ ಹಾಕಿ “ಮೆಹಂದಿ ಅಭಿಯಾನ" ನಡೆಸುವಂತೆ ಸೂಚನೆ ನೀಡಿದ್ದಾರೆ. ಜತೆಗೆ ಮೋದಿ...