ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ ಸರ್ಕಾರದ ವತಿಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ರಾಜ್ಯ ಮಟ್ಟದ 17 ರ ವಯೋಮಾನದ 45 ಕೆ.ಜಿ ವಿಭಾಗದ ಕರಾಟೆ ಸ್ಪರ್ಧೆಯಲ್ಲಿ ಚಿನ್ಮಯ್ ಎಳ್ತಿಮಾರ್ ಕಲ್ಲಡ ಅವರು ಚಿನ್ನದ ಪದಕವನ್ನು ಗೆದ್ದು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.



ಕೇಶವ ನಯನ ದಂಪತಿಗಳ ಪುತ್ರ ಕುಮಾರ್ ಚಿನ್ಮಯ್, ಎಳ್ತಿಮಾರ್ ಕಲ್ಲಡ. ಇವರು ಉರ್ವ ಮಣ್ಣಗುಡ್ಡೆ ಕೆನರಾ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಯಾಗಿದ್ದು, ಶಿಹಾನ್ ಶರತ್ ಕುಮಾರ್ ಮತ್ತು ವಿಕಾಸ್.ಎಸ್.ಕುಮಾರ್ ಇವರ ತರಬೇತಿಯಲ್ಲಿ ಸಾಧನೆಯನ್ನು ಮಾಡಿದ್ದಾರೆ.












