ಮೊಹಲ್ಲಾ ಲೀಡರ್ಸ್ ಮೀಟ್ ಕಾರ್ಯಕ್ರಮ

ವಿಟ್ಲ: ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ವಿಟ್ಲ ರೀಜಿನಲ್ ಇದರ ವತಿಯಿಂದ ಮೊಹಲ್ಲಾ ಲೀಡರ್ಸ್ ಮೀಟ್ ಕಾರ್ಯಕ್ರಮ ಒಕ್ಕೆತ್ತೂರು ಮದ್ರಸ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಎಂ ಎ ವಿಟ್ಲ ರಿಜೀನಲ್ ಅಧ್ಯಕ್ಷ ಅಬ್ದುಲ್ ಹಕೀಮ್ ಶಾಂತಿನಗರ ವಹಿಸಿದ್ದರು.‌ ವಾಲೆಮುಂಡೋವು ಉಸ್ತಾದ್ ಪ್ರಾರ್ಥನೆಗೆ ನೇತೃತ್ವ ನೀಡಿದರು. ಕಾರ್ಯಕ್ರಮವನ್ನು ಎಸ್ ಎಂ ಎ ರಾಜ್ಯ ಕೋಶಾಧಿಕಾರಿ ಹಾಜಿ ಹಮೀದ್ ಕೋಡಂಗಾಯಿ ಉದ್ಘಾಟಿಸಿದರು.ಸಭೆಯಲ್ಲಿ ಬದುರುದ್ದೀನ್ ಅಹ್ಸನಿ ವಿಷಯ ಮಂಡನೆ ನಡೆಸಿದರು.
ಎಸ್ಎಂಎ ರಾಜ್ಯ ಅಧ್ಯಕ್ಷ ಇಸ್ಮಾಯಿಲ್ ತಂಙಳ್ ಉಜಿರೆ, ಪ್ರಧಾನ ಕಾರ್ಯದರ್ಶಿ ರಹ್ಮಾನ್ ಮದನಿ ಜಪ್ಪು, ಕೋಶಾಧಿಕಾರಿ ಹಾಜಿ ಹಮೀದ್ ಕೊಡಂಗಾಯಿ ಮತ್ತು ಪತ್ರಕರ್ತ ಮಹಮ್ಮದ್ ಅಲಿ ವಿಟ್ಲ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಎಸ್ ಎಂ ಎ ಜಿಲ್ಲಾ ಅಧ್ಯಕ್ಷ ಸಾದತ್ ತಂಙಳ್, ಜಿಲ್ಲಾ ಕೋಶಾಧಿಕಾರಿ ಯೂಸುಫ್ ಸಾಜ , ಸುನ್ನಿ ಕೊಡಿನೇಷನ್ ಅಧ್ಯಕ್ಷ ಇಬ್ರಾಹಿಂ ಮದನಿ ಕಂಬಳಬೆಟ್ಟು, ಹಾಫಿಳ್ ಶರೀಫ್ ಸಖಾಫಿ, ಒಕ್ಕೆತ್ತೂರು ಮಸೀದಿ ಅಧ್ಯಕ್ಷರಾದ ಉಮ್ಮರ್ , ಕಾರ್ಯದರ್ಶಿ ಇಕ್ಬಾಲ್ ಚಂದಳಿಕೆ, ಇಸ್ಮಾಯಿಲ್ ಸೂಪರ್, ಅಶ್ರಫ್ ಒಕ್ಕೆತ್ತೂರು, ಎಸ್ ಎಂ ಎ ಝೋನ್ ಕೋಶಾಧಿಕಾರಿ ಉಮ್ಮರ್ ವಿಟ್ಲ, ಪ್ರಧಾನ ಕಾರ್ಯದರ್ಶಿ ಕಾಸಿಂ ಸಖಾಫಿ, ಎಸ್ ಜೆ ಎಂ ರೇಂಜ್ ಅಧ್ಯಕ್ಷ ಶರೀಫ್ ಮದನಿ ಹಾಗೂ ಎಲ್ಲಾ ಜಮಾಹತಿನ ಖತೀಬ್ ಉಸ್ತಾದರು ಹಾಗೂ ಆಡಳಿತ ಮಂಡಳಿ ಸದಸ್ಯರು ಭಾಗವಹಿಸಿದ್ದರು.

ಎಸ್ ಎಂ ಎ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಮದನಿ ಪ್ರಸ್ತಾವನೆ ಮಾಡಿದರು. ಎಸ್ ಎಂ ಎ ವಿಟ್ಲ ರೀಜನಲ್ ಪ್ರಧಾನ ಕಾರ್ಯದರ್ಶಿ ಸ್ವಾದಿಕ್ ಸಖಾಫಿ ಸ್ವಾಗತಿಸಿದರು. ಹಾರಿಸ್ ಮದನಿ ಶಾಂತಿನಗರ ವಂದಿಸಿದರು