ಶಂಕಿತ ಉಗ್ರ ಶಾರೀಕ್ ಮೈಸೂರಿನಲ್ಲಿ ವಾಸವಾಗಿದ್ದ ಬಾಡಿಗೆ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಬಾಂಬ್ ತಯಾರಿಕೆಯ ಕಚ್ಛಾ ವಸ್ತುಗಳು ಲಭಿಸಿಸಿವೆ. ಇದೇ ವೇಳೆ ಪೊಲೀಸರ ತಂಡ ಇಬ್ಬರನ್ನು ವಶಕ್ಕೆ ಪಡೆದಕೊಂಡಿದೆ.


ಬಂಧಿತರ ಪೈಕಿ ಮಂಗಳೂರು ಮೂಲದ ನಿವಾಸಿ ಎಂದು ವರದಿಯಾಗಿದೆ. ಮತ್ತೋರ್ವ ಶಂಕಿತ ಉಗ್ರ ಶಾರೀಕ್ಗೆ ಮೊಬೈಲ್ ನೀಡಿದ್ದನು. ಈ ಹಿನ್ನೆಲೆ ಆತನನ್ನು ಸಹ ಬಂಧಿಸಲಾಗಿದೆ ಎನ್ನಲಾಗಿದೆ.
ಮೈಸೂರಿನ ಮೆಟಗಾನಹಳ್ಳಿಯಲ್ಲಿ ಲೋಕನಾಯಕ ನಗರದ 10ನೇ ಕ್ರಾಸ್ನಲ್ಲಿರುವ ಮೋಹನ್ ಕುಮಾರ್ ಎಂಬವರ ಮನೆಯಲ್ಲಿ ಶಾರೀಕ್ ರೂಂ ಬಾಡಿಗೆ ಪಡೆದುಕೊಂಡಿದ್ದನು. ಬಾಡಿಗೆ ಪಡೆಯುವ ವೇಳೆ ಪ್ರೇಮ್ರಾಜ್ ಹೆಸರಿನ ನಕಲಿ ಆಧಾರ್ ಕಾರ್ಡ್ ನೀಡಿ, ಮೊಬೈಲ್ ರಿಪೇರಿ ತರಬೇತಿ ಪಡೆಯಲು ಬಂದಿರೋದಾಗಿ ಹೇಳಿದ್ದನು.
ಶಾರೀಕ್ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ನಿವಾಸಿಯಾಗಿದ್ದು. ಮಂಗಳೂರು ಆಟೋ ಬ್ಲಾಸ್ಟ್ ಹಿಂದೆ ಶಾರೀಕ್ ಪಾತ್ರ ಇರೋ ಹಿನ್ನೆಲೆಯಲ್ಲಿ ತೀರ್ಥಹಳ್ಳಿಯ ನಾಲ್ಕು ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ಎರಡು ವರ್ಷಗಳ ಹಿಂದೆ ಮಂಗಳೂರಿನ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್ಮೆಂಟ್ ಗೋಡೆ ಮೇಲೆ ಉಗ್ರ ಸಂಘಟನೆ ಲಷ್ಕರ್ ಪರವಾಗಿ ಬರಹ ಬರೆಯಲಾಗಿತ್ತು. ಈ ಪ್ರಕರಣದಲ್ಲಿ ಮಾಝ್ ಮುನೀರ್ ಜೊತೆ ಶಾರೀಕ್ನನ್ನು ಬಂಧಿಸಲಾಗಿತ್ತು.












