ಮಂಗಳೂರು: ಲೇಡಿಗೋಷನ್ ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಹಾರಿ ಬಾಣಂತಿಯೋರ್ವರು ಮೃತಪಟ್ಟ ಘಟನೆ ಸಂಭವಿಸಿದೆ.
ಕಾರ್ಕಳದ ರಂಜಿತಾ ಮೃತಪಟ್ಟವರು.
ರಂಜಿತಾ ಅವರು ಹೆರಿಗೆಗಾಗಿ ಕಾರ್ಕಳ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಹಲವು ಆರೋಗ್ಯ ಸಮಸ್ಯೆಯಿಂದ ಲೇಡಿಗೋಷನ್ ಗೆ ಅ.28 ರಂದು ದಾಖಲಾಗಿದ್ದರು. ಅ.30 ರಂದು ಸಿಸೇರಿಯನ್ ಹೆರಿಗೆಯಾಗಿದ್ದು, ಮಗು ಎನ್ ಐಸಿಯುನಲ್ಲಿತ್ತು. ಆದ್ರೆ ನ.3 ರಂದು ಮಗು ಮೃತಪಟ್ಟಿತ್ತು.
ಮಹಿಳೆ ಗುಣಮುಖರಾಗಿ ಸೋಮವಾರ ಡಿಸ್ಚಾರ್ಜ್ ಗೆಂದು ವೈದ್ಯರು ಸೂಚನೆ ನೀಡಿದ್ದರು. ಆದರೆ ಮಹಿಳೆ ಏಕಾಏಕಿ ನಾಲ್ಕನೇ ಮಹಡಿಯಿಂದ ಹಾರಿದ್ದಾರೆ.
ಕೂಡಲೇ ಮಹಿಳೆಯನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಕೆ ಮೃತಪಟ್ಡಿದ್ದಾರೆಂದು ಆಸ್ಪತ್ರೆಯ ವೈದ್ಯಾಧಿಕಾರಿಯವರು ತಿಳಿಸಿದ್ದಾರೆ.