Tuesday, November 12, 2024

ಮಾಣಿ ವಲಯ ಬಂಟರ ಸಂಘದ 12ನೇ ವರ್ಷದ ವಾರ್ಷಿಕ ಕ್ರೀಡಾಕೂಟ

ಮಾಣಿ ವಲಯ ಬಂಟರ ಸಂಘದ ಹನ್ನೆರಡನೇ ವರ್ಷದ ವಾರ್ಷಿಕ ಕ್ರೀಡಾಕೂಟ ಮಾಣಿಯ ಕರ್ನಾಟಕ ಪ್ರೌಢ ಶಾಲೆಯ ಕ್ರೀಡಾಂಗಣದಲ್ಲಿ ನಡೆಯಿತು.

ಬಂಟ್ವಾಳ ತಾಲೂಕು ಬಂಟರ ಸಂಘದ ಮಾಜಿ ಉಪಾಧ್ಯಕ್ಷೆ ಪ್ರಫುಲ್ಲ.ಆರ್.ರೈ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ ಉಮೇಶ್ ಶೆಟ್ಟಿ ಸಾಗು ಹೊಸಮನೆ ಕ್ರೀಡಾಕೂಟವನ್ನು ಉದ್ಘಾಟಿಸಿದರು.

ವಲಯ ಬಂಟರ ಸಂಘದ ಅಧ್ಯಕ್ಷ ಮಾಧವ ರೈ ಅಮೈ ಭಂಡಸಾಲೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಬಂಟ್ವಾಳ ತಾಲೂಕು ಬಂಟರ ಸಂಘದ ಸ್ಥಾಪಕಾಧ್ಯಕ್ಷ ಕಿರಣ್ ಹೆಗ್ಡೆ ಅನಂತಾಡಿ, ಮಹಿಳಾ ವಿಭಾಗದ ಕಾರ್ಯದರ್ಶಿ ಸುಮಾ.ಎನ್. ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ವಿಶೇಷ ಆಹ್ವಾನಿತರಾಗಿ ಮುಂಬಯಿ ಬಂಟ್ಸ್ ಸಂಘದ ಸದಸ್ಯ ನವೀನ್ ಹೆಗ್ಡೆ, ಬೆಂಗಳೂರು ಬಂಟ್ಸ್ ಸಂಘದ ಸದಸ್ಯರಾದ ಅಜಿತ್ ಆಳ್ವ ಮತ್ತು ವೀಣಾ ಅಜಿತ್ ಆಳ್ವ ಉಪಸ್ಥಿತರಿದ್ದರು.

ದೇಹದಾರ್ಢ್ಯ ಸ್ಪರ್ಧೆಯಲ್ಲಿ ಮಿ. ದಕ್ಷಿಣ ಕನ್ನಡ ಪ್ರಶಸ್ತಿಯನ್ನು ಗಳಿಸಿದ ಯಕ್ಷಿತ್ ಶೆಟ್ಟಿ ಸಾಗು ಇವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಬಂಟ್ವಾಳ ತಾಲೂಕು ಮಟ್ಟದ ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ಸಜಿಪ ವಲಯ ಪ್ರಥಮ ಮತ್ತು ಮಾಣಿ ವಲಯ ದ್ವಿತೀಯ ಹಾಗೂ ಮಹಿಳೆಯರ ತ್ರೋಬಾಲ್ ಪಂದ್ಯಾಟದಲ್ಲಿ ಸರಪಾಡಿ ವಲಯ ಪ್ರಥಮ ಮತ್ತು ಮಾಣಿ ವಲಯ ದ್ವಿತೀಯ ಸ್ಥಾನವನ್ನು ಗಳಿಸಿತು.

ವಲಯ ಮಟ್ಟದಲ್ಲಿ ಮೂರರಿಂದ ಎಪ್ಪತ್ತು ವರ್ಷ ವಯಸ್ಸಿನವರೆಗೆ ಬೇರೆ ಬೇರೆ ವಿಭಾಗದಲ್ಲಿ ವೈಯಕ್ತಿಕ ಮತ್ತು ಗುಂಪು ವಿಭಾಗದಲ್ಲಿ ಸ್ಪರ್ಧೆಗಳನ್ನು

ಆಯೋಜಿಸಲಾಗಿತ್ತು.

ಸಾಯಂಕಾಲ ಜರುಗಿದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ.ಡಿ.ಶೆಟ್ಟಿ ರಂಗೋಲಿ, ಕಾರ್ಯದರ್ಶಿ ಜಗನ್ನಾಥ ಚೌಟ ಬದಿಗುಡ್ಡೆ, ಬೆಳ್ತಂಗಡಿ ತಾಲೂಕು ಬಂಟರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ ಭಂಡಾರಿಗುಡ್ಡೆ, ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರ ಸಚಿನ್ ರೈ ಮಾಣಿಗುತ್ತು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕ್ರೀಡಾಕೂಟದ ಸಂಚಾಲಕ ಗಂಗಾಧರ ರೈ ತುಂಗೆರೆಕೋಡಿ, ಸಂಘದ ಮಾಜಿ ಅಧ್ಯಕ್ಷರಾದ ಬಾಲಕೃಷ್ಣ ಆಳ್ವ ಕೊಡಾಜೆ, ಉಮಾನಾಥ ಶೆಟ್ಟಿ ಪೆರ್ನೆ, ಪ್ರವೀಣ್ ರೈ ಕಲ್ಲಾಜೆ, ಗೌರವ ಸಲಹೆಗಾರರಾದ ಬಾಲಕೃಷ್ಣ ಶೆಟ್ಟಿ ಪಾಂಡಿಬೆಟ್ಟು, ಪುಷ್ಪರಾಜ ಹೆಗ್ಡೆ ಸತ್ತಿಕಲ್ಲು, ನಿಕಟಪೂರ್ವಾಧ್ಯಕ್ಷ ಗಂಗಾಧರ ರೈ ವಡ್ಯದಗಯ, ಉಪಾಧ್ಯಕ್ಷೆ ವಿಜಯಲಕ್ಷ್ಮಿ.ವಿ.ಶೆಟ್ಟಿ, ಕ್ರೀಡಾ ಕಾರ್ಯದರ್ಶಿ ಹರೀಶ್ ಆಳ್ವ ಮಾದೇಲು, ಸಂಘಟನಾ ಕಾರ್ಯದರ್ಶಿ ಚೇತನ್ ಶೆಟ್ಟಿ ಕರಿಂಕ, ಜೊತೆ ಕಾರ್ಯದರ್ಶಿ ಶರ್ಮಿಳಾ ಶೆಟ್ಟಿ, ಮಹಿಳಾ ಸಂಚಾಲಕಿ ಕಸ್ತೂರಿ.ಪಿ.ಶೆಟ್ಟಿ, ಯುವ ವಿಭಾಗದ ಸಂಚಾಲಕ ವಿನಿತ್ ಶೆಟ್ಟಿ ಪೆರಾಜೆ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷ ಗಂಗಾಧರ ಆಳ್ವ ಅನಂತಾಡಿ ಸ್ವಾಗತಿಸಿದರು. ಕೋಶಾಧಿಕಾರಿ ಸುಧಾಕರ ಶೆಟ್ಟಿ ವಾರಾಟ, ವಿಜೇತ್ ರೈ ಬಿಳಿಯೂರು ಮತ್ತು ಸಜಿತ್ ಶೆಟ್ಟಿ ಜಡ್ತಿಲ ಸ್ಪರ್ಧಾ ವಿಜೇತರ ಪಟ್ಟಿಯನ್ನು ವಾಚಿಸಿದರು. ಸಂಘದ ಕಾರ್ಯದರ್ಶಿ ನಿರಂಜನ್ ರೈ ಕುರ್ಲೆತ್ತಿಮಾರು ವಂದಿಸಿದರು.

More from the blog

ನಿಯಂತ್ರಣ ಕಳೆದುಕೊಂಡ ಕಾರು ಪಲ್ಟಿ : ಬೈಕ್ ಸವಾರನಿಗೆ ಗಾಯ

ವಿಟ್ಲ: ಕಂಬಳಬೆಟ್ಟು ಮುಖ್ಯ ರಸ್ತೆಗೆ ಒಮ್ಮಿಂದೊಮ್ಮೆಲೆ ನುಗ್ಗಿದ ಬೈಕನ್ನು ತಪ್ಪಿಸುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಬೈಕ್ ಗಳಿಗೆ ಡಿಕ್ಕಿಯಾಗಿ ಮಣ್ಣಿನ ದಿಬ್ಬದ ಮೇಲೆ ಮಗುಚಿ ಬಿದ್ದಿದ್ದು, ಬೈಕ್ ಸವಾರ ಅರ್ಕೆಜಾಲು...

ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ : ನ.16-17: ಸ್ವಸ್ತಿಕ್ ಇಂಡಿಯಾ ಕಪ್ ಗೋಲ್ಡ್ ಮೆಡಲ್ ಕಬಡ್ಡಿ ಉತ್ಸವ

ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಇದರ ೪೦ನೇ ವರ್ಷದ ಕಬಡ್ಡಿ ಪಂದ್ಯಾಟ ಪ್ರಯುಕ್ತ ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ಅಂತಾರಾಜ್ಯ ಮಟ್ಟದ ಹೊನಲು ಬೆಳಕಿನ ಸಸ್ವಸ್ತಿಕ್ ಇಂಡಿಯಾ ಕಪ್ ಗೋಲ್ಡ್...

ಜೆಸಿಐ ಮಡಂತ್ಯಾರು ಅಧ್ಯಕ್ಷರಾಗಿ ಚುಕ್ಕಾಣಿ ಹಿಡಿದ ಪ್ರಥಮ ಮಹಿಳೆ ಜೇಸಿ ಅಮಿತಾ ಅಶೋಕ್ ಗುಂಡಿಯಲ್ಕೆ

ಜೆಸಿಐ ಮಡಂತ್ಯಾರು ಇದರ 2025ನೆ ಸಾಲಿನ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.. 34 ವರ್ಷಗಳ ಇತಿಹಾಸವುಳ್ಳ ಮಡಂತ್ಯಾರು ಜೆಸಿಐ ಸಂಸ್ಥೆಯಲ್ಲಿ ಪ್ರಪ್ರಥಮ ಬಾರಿಗೆ ಮಹಿಳೆಗೆ ಅಧಿಕಾರವನ್ನು ನೀಡುವ ಮೂಲಕ 35 ನೇ ವರ್ಷದ ಅಭ್ಯರ್ಥಿಯನ್ನು...

ಬಂಟ್ವಾಳ ಪುರಸಭೆ ಉಪಚುನಾವಣೆ : ಬಿಜೆಪಿ ಅಭ್ಯರ್ಥಿಯಿಂದ ನಾಮಪತ್ರ ಸಲ್ಲಿಕೆ

ಬಂಟ್ವಾಳ ಪುರಸಭೆಯ ವಾರ್ಡ್ ಸಂಖ್ಯೆ 2 ರ ನಡೆಯುವ ಉಪಚುನಾವಣೆಗೆ ಬಿಜೆಪಿಯಿಂದ ಇಂದ್ರೇಶ್ ಪೂಜಾರಿ ಅವರು ಇಂದು ನಾಮಪತ್ರ ಸಲ್ಲಿಸಿದರು. ಬಿಜೆಪಿ ಕಾರ್ಯಕರ್ತರೊಂದಿಗೆ ಪುರಸಭೆಗೆ ಆಗಮಿಸಿದ ಆಭ್ಯರ್ಥಿ ಇಂದ್ರೇಶ್ ಅವರು ಬಿಜೆಪಿಯ ಪ್ರಮುಖರಾದ...