ವಿಟ್ಲ: ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಸಮೀಪದ ಕುಂಡಡ್ಕದಲ್ಲಿ ನಡೆದಿದೆ.
ವಿಟ್ಲ ಸಮೀಪದ ಕುಂಡಡ್ಕ ಮರುವಾಳ ನಿವಾಸಿ ತಿಮ್ಮಪ್ಪ ಪೂಜಾರಿ (58 ವ.)ಆತ್ಮಹತ್ಯೆ ಮಾಡಿಕೊಂಡವರು.
ನ.೧೯ರಂದು ಸಾಯಂಕಾಲ ಮನೆಯಿಂದ ಹೊರಹೋದವರು ಆ ಬಳಿಕ ಮರಳಿ ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಇವರಿಗಾಗಿ ಮನೆಮಂದಿ ಹುಟುಕಾಟ ನಡೆಸಿದಾಗ ಮನೆ ಸಮೀಪದ ಗುಡ್ಡದಲ್ಲಿ ತಿಮ್ಮಪ್ಪ ಪೂಜಾರಿಯವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ.ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.