ಬಂಟ್ವಾಳ: ರಾಜ್ಯದಲ್ಲಿ ಗುರುತಿಸಲ್ಪಟ್ಟ ಕಲ್ಲಡ್ಕ ಕ್ರೀಡೋತ್ಸವಕ್ಕೆ ಈ ಬಾರಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕರಾದ ಡಾ.ಮೋಹನ್ ಭಾಗವತ್ ಅವರು ಭಾಗವಹಿಸಲಿದ್ದಾರೆ ಎಂದು ಅಧಿಕೃತವಾಗಿ ಶಾಲೆಯ ಮಾಹಿತಿ ಪ್ರಕಟಿಸಿದೆ.
ಡಿ.7 ರಂದು ಸಂಜೆ 5.30 ರಿಂದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಹೊನಲು ಬೆಳಕಿನ ಕಲ್ಲಡ್ಕ ಕ್ರೀಡೋತ್ಸವ 2024 ರ ಕಾರ್ಯಕ್ರಮ ನಡೆಯಲಿದೆ.
ಅಡ್ವಾಣಿ ಸಹಿತ ಕೇಂದ್ರದ ಅನೇಕ ಸಚಿವರು ಸಂಸದರು ,ರಾಜ್ಯದ ಮುಖ್ಯಮಂತ್ರಿ ಸಹಿತ ಅನೇಕ ಶಾಸಕ ಸಚಿವರುಗಳು ಇಲ್ಲಿನ ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಹಬ್ಬಾಸ್ ಎಂದು ಹೇಳಿದ್ದಾರೆ.
ಈ ಬಾರಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರು ,ಹಿರಿಯರಾದ ಡಾ.ಮೋಹನ್ ಭಾಗವತ್ ಅವರು ಭಾಗವಹಿಸುತ್ತಾರೆ ಎಂಬುದು ಖಚಿತವಾಗಿದೆ.
ಆರ್.ಎಸ್.ಎಸ್.ಪ್ರಮುಖರಾದ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಅವರ ಮುಂದಾಳತ್ವದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆಯುವ ವಾರ್ಷಿಕ ಕ್ರೀಡೋತ್ಸವ ಕಾರ್ಯಕ್ರಮ ಪ್ರಸಿದ್ದಿಯನ್ನು ಪಡೆದಿದೆ..