ಜೆಸಿಐ ಮಡಂತ್ಯಾರು ಇದರ 2025ನೆ ಸಾಲಿನ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.. 34 ವರ್ಷಗಳ ಇತಿಹಾಸವುಳ್ಳ ಮಡಂತ್ಯಾರು ಜೆಸಿಐ ಸಂಸ್ಥೆಯಲ್ಲಿ ಪ್ರಪ್ರಥಮ ಬಾರಿಗೆ ಮಹಿಳೆಗೆ ಅಧಿಕಾರವನ್ನು ನೀಡುವ ಮೂಲಕ 35 ನೇ ವರ್ಷದ ಅಭ್ಯರ್ಥಿಯನ್ನು ಘೋಷಣೆ ಮಾಡಲಾಯಿತು.
ಪ್ರಸ್ತುತ ಮಡಂತ್ಯಾರಿನಲ್ಲಿ ಪ್ರೀತ್ ಇಂಟರ್ನೆಟ್ ಹಾಗೂ ಪ್ರೀತ್ ಬ್ಯೂಟಿ ಪಾರ್ಲರ್ ಮಾಲಕರಾದ ಜೇಸಿ ಅಮಿತಾ ಅಶೋಕ್ ಗುಂಡಿಯಲ್ಕೆ ರವರನ್ನು 2025 ರ ಸಾಲಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ನಿಕಟಪೂರ್ವಾಧ್ಯಕ್ಷರಾದ ಜೇಸಿ ಅಶೋಕ್ ಗುಂಡಿಯಲ್ಕೆ, ಅಧ್ಯಕ್ಷರಾದ ಜೇಸಿ ವಿಕೇಶ ಮಾನ್ಯ ಹಾಗೆ ಪೂರ್ವಾಧ್ಯಕ್ಷರುಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.