Friday, November 22, 2024

ಪುರಸಭೆಯಲ್ಲಿ ತೆರವಾದ 1 ಸ್ಥಾನಕ್ಕೆ, ಗ್ರಾ.ಪಂ.ಗಳಲ್ಲಿ ತೆರವಾದ 11 ಸ್ಥಾನಗಳಿಗೆ ಉಪಚುನಾವಣೆ ಘೋಷಣೆ : ನ. 23ರಂದು ಮತದಾನ

ಬಂಟ್ವಾಳ: ಬಂಟ್ವಾಳ ಪುರಸಭೆಯಲ್ಲಿ ತೆರವಾಗಿರುವ ಒಂದು ಸ್ಥಾನಕ್ಕೆ ಹಾಗೂ ಗ್ರಾ.ಪಂ.ಗಳಲ್ಲಿ ತೆರವಾದ 11 ಸ್ಥಾನಗಳಿಗೆ ರಾಜ್ಯ ಚುನಾವಣಾ ಆಯೋಗ ಉಪಚುನಾವಣೆ ಘೋಷಣೆ ಮಾಡಿದ್ದು, ನ. 23ರಂದು (ನಾಳೆ) ಮತದಾನ ನಡೆಯಲಿದೆ. ಚುನಾವಣಾ ಕಾರ್ಯದ ಮುನ್ನ ದಿನವಾದ ಇಂದು ಬಿಸಿರೋಡಿನ ಆಡಳಿತ ಸೌಧದ ಕಚೇರಿಯಲ್ಲಿ ಚುನಾವಣಾ ಮಸ್ಟರಿಂಗ್ ಕಾರ್ಯ ನಡೆಯಿತು.

ಮತಗಟ್ಟೆಗಳು ಎಷ್ಟು?

ಒಟ್ಟು 12 ಉಪಚುನಾವಣೆಯ ಮತಗಟ್ಟೆಗಳಾಗಿದ್ದು, ಇದರಲ್ಲಿ ಗ್ರಾ.ಪಂ.ನ 11 ಕಡೆ ಹಾಗೂ ಪುರಸಭೆಗೆ ಸಂಬಂಧಿಸಿದಂತೆ ವ್ಯಾಪ್ತಿಯಲ್ಲಿ ಒಂದು ಮತಗಟ್ಟೆಗಳಿವೆ. ಚುನಾವಣಾ ಕಾರ್ಯಕ್ಕಾಗಿ 12 ಮತಗಟ್ಟೆಗಳಿಗೆ ಡಿ.ಗ್ರೂಪ್ ನೌಕರರು ಸೇರಿದಂತೆ ಒಟ್ಟ 65 ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ.

13 ಮತಗಟ್ಟೆ ಅಧಿಕಾರಿ,13 ಮತಗಟ್ಟೆ ಸಹಾಯಕ ಅಧಿಕಾರಿ, 26 ಮತದಾನ ಸಹಾಯಕ ಅಧಿಕಾರಿ ಹಾಗೂ 13 ಡಿ.ಗ್ರೂಪ್ ನೌಕರರನ್ನು ಕರ್ತವ್ಯಕ್ಕೆ ಕಳುಹಿಸಿಕೊಡಲಾಗಿದೆ ಎಂದು ಚುನಾವಣಾ ಶಾಖೆಯ ಉಪತಹಶೀಲ್ದಾರ್ ನವೀನ್ ಬೆಂಜನಪದವು ತಿಳಿಸಿದ್ದಾರೆ.

ಮತಗಟ್ಟೆ ಹೆಸರು

ಮತಗಟ್ಟೆ ಸಂಖ್ಯೆ 73 ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಬಡಗಬೆಳ್ಳೂರು, ಮತಗಟ್ಟೆ ಸಂಖ್ಯೆ 135 ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ನಗ್ರಿ ಸಜೀಪಮೂಡ, ಮತಗಟ್ಟೆ ಸಂಖ್ಯೆ 129 ದ.ಕ.ಜಿ. ಹಿರಿಯ ಪ್ರಾಥಮಿಕ ಶಾಲೆ ಆಲಾಡಿ ಸ.ಮುನ್ನೂರು. ಮತಗಟ್ಟೆ ಸಂಖ್ಯೆ 127 ದ.ಕ.ಜಿ. ಹಿರಿಯ ಪ್ರಾಥಮಿಕ ಶಾಲೆ ನಂದಾವರ ಸ.ಮುನ್ನೂರು. ಮತಗಟ್ಟೆ ಸಂಖ್ಯೆ 59 ದ.ಕ.ಜಿ. ಸರಕಾರಿ ಉನ್ನತೀಕರಿಸಿದ ಹಿ. ಪ್ರಾಥಮಿಕ ಶಾಲೆ ನಲ್ಕೆಮಾರ್ ಅಮ್ಟಾಡಿ, ಮತಗಟ್ಟೆ ಸಂಖ್ಯೆ 53 ಸರಕಾರಿ ಪ್ರೌಡ ಶಾಲೆ ಪಂಜಿಕಲ್ಲು, ಮತಗಟ್ಟೆ ಸಂಖ್ಯೆ 127 a ದ..ಕ.ಜಿಲ್ಲಾ ಪಂ.ಹಿರಿಯ ಪ್ರಾಥಮಿಕ ಶಾಲೆ ನಂದಾವರ ಸ.ಮುನ್ನೂರು, ಮತಗಟ್ಟೆ ಸಂಖ್ಯೆ14 ದ.ಕ.ಜಿಲ್ಲಾ ಪಂ.ಕಿರಿಯ ಪ್ರಾಥಮಿಕ ಶಾಲೆ ಕುಡಂಬೆಟ್ಟು, ಮತಗಟ್ಟೆ ಸಂಖ್ಯೆ 164 ಸರ್ಕಾರಿ ಪ್ರೌಢ ಶಾಲೆ ಕುಕ್ಕಾಜೆ ಮಂಚಿ, ಮತಗಟ್ಟೆ ಸಂಖ್ಯೆ 54 ದ.ಕ.ಜಿಲ್ಲಾ ಪಂ.ಹಿ.ಪ್ರಾಥಮಿಕ ಶಾಲೆ ಆಚಾರಿಪಲ್ಕೆ ಪಂಜಿಕಲ್ಲು, ಮತಗಟ್ಟೆ ಸಂಖ್ಯೆ 3 ದ.ಕ.ಜಿಲ್ಲಾ ಪಂ.ಕಿರಿಯ ಪ್ರಾಥಮಿಕ ಶಾಲೆ ಮಂಡಾಡಿ ಬಿ.ಕಸ್ಬಾ ಹಾಗೂ ಮತಗಟ್ಟೆ ಸಂಖ್ಯೆ 201 ದ.ಕ.ಜಿಲ್ಲಾ ಪಂ.ಹಿ.ಪ್ರಾಥಮಿಕ ಶಾಲೆ ಬಿಳಿಯೂರು.

ಒಟ್ಟು ಎಷ್ಟು ಸ್ಥಾನಗಳಿಗೆ ಚುನಾವಣೆ

ಬಂಟ್ವಾಳ ಪುರಸಭೆಯ ವಾರ್ಡ್ 2ರ ಕಾಂಗ್ರೆಸ್ ಸದಸ್ಯರಾಗಿದ್ದ ಗಂಗಾಧರ್ ಅವರು ಲೋಕಸಭಾ ಚುನಾವಣೆಯ ಸಂದರ್ಭ ಪಕ್ಷ ತೊರೆದು ಬಿಜೆಪಿ ಸೇರಿದ್ದು, ಅವರು ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಅವರ ತೆರವಾದ ಸ್ಥಾನಕ್ಕೆ ಹಾಗೂ ವಿವಿಧ ಕಾರಣಗಳಿಗಾಗಿ ತೆರವಾಗಿರುವ ಗ್ರಾ.ಪಂ.ನ ಸದಸ್ಯ ಸ್ಥಾನಕ್ಕೆ ನಾಳೆ ಚುನಾವಣೆ ನಡೆಯಲಿದೆ.

ನ. 23ರಂದು ನಾಳೆ ಬೆಳಗ್ಗೆ 7ರಿಂದ ಸಂಜೆ 5ರ ವರೆಗೆ ತನಕ ಚುನಾವಣೆ ನಡೆದು, ನ. 25 ಅವಶ್ಯವಿದ್ದರೆ ಮರು ಮತದಾನಕ್ಕೆ ಮೀಸಲು ದಿನವಾಗಿದೆ. ನ. 26ರಂದು ತಾಲೂಕು ಕೇಂದ್ರವಾದ ಬಂಟ್ವಾಳದ ಆಡಳಿತ ಸೌಧದಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.

ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾ.ಪಂ.ನ 3 ಸ್ಥಾನ, ಪಂಜಿಕಲ್ಲು 2, ಮಂಚಿ, ಪೆರ್ನೆ, ಚೆನ್ನೆತ್ತೋಡಿ, ಸಜೀಪಮೂಡ, ಅಮ್ಟಾಡಿ, ಬಡಗಬೆಳ್ಳೂರು ಗ್ರಾ.ಪಂ.ಗಳ ತಲಾ 1 ಸ್ಥಾನಗಳಿಗೆ ಮತದಾನ ನಡೆಯಲಿದೆ.

More from the blog

ಹೊಸ ಟ್ರೆಂಡ್ ನ ಜೀನ್ಸ್‌ ಧರಿಸಿದ್ದ ಹುಡುಗನ ಪ್ಯಾಂಟ್‌ ಹೊಲಿದ ಯುವಕರು…. ವಿಡಿಯೋ ವೈರಲ್, ನೊಂದ ಯುವಕ ಆತ್ಮಹತ್ಯೆಗೆ ಯತ್ನ

ಬೆಳ್ತಂಗಡಿ: ಯುವಕನೊಬ್ಬ ತನ್ನ ವಿನೂತನ ಶೈಲಿಯ ಜೀನ್ಸ್ ಪ್ಯಾಂಟ್ ಧರಿಸಿ ಬೆಳ್ತಂಗಡಿ ಸಂತೆಕಟ್ಟೆ ಮಾರುಕಟ್ಟೆಗೆ ಬಂದಾಗ ಮೂವರು ಸೇರಿ ಆತನನ್ನು ತಡೆದು ಎರಡು ಕೈಗಳನ್ನು ಲಾಕ್‌ ಮಾಡಿ ಪ್ಯಾಂಟ್ ಗೆ ಗೋಣಿಚೀಲದ ಸೂಜಿಯಿಂದ...

ನೇರಳಕಟ್ಟೆ ಶಾಲಾ ಎಸ್ಡಿಎಂಸಿ ಅಧ್ಯಕ್ಷರಾಗಿ ಟಿ.ಕೆ.ರಶೀದ್ ಪರ್ಲೊಟ್ಟು ಆಯ್ಕೆ

ಬಂಟ್ವಾಳ : ದ.ಕ.ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ನೇರಳಕಟ್ಟೆ ಇದರ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾಗಿ ಪಿ.ಕೆ.ರಶೀದ್ ಪರ್ಲೊಟ್ಟು ಆಯ್ಕೆಯಾದರು ಬುಧವಾರ ಶಾಲಾ ಉರ್ದಿಲಗುತ್ತು ಕೆ ಇಂದುಹಾಸ ರೈ ಸಭಾಂಗಣದಲ್ಲಿ...

ಕೈಕೊಟ್ಟ ಸಿ.ಸಿ.ಕ್ಯಾಮರಾ ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗಬಹುದೇ…?

ಬಂಟ್ವಾಳ: ಕೈಕೊಟ್ಟ ಸಿಸಿ ಕೆಮರಾ ಕಾನೂನು ಸುವ್ಯವಸ್ಥೆಗೆ ಪೆಟ್ಟು ಬೀಳಬಹುದಾ? .... ಕೆಲವಡಡೆ ಸಿಡಿಲು ಬಡಿದ ಪರಿಣಾಮ ಕೆಮರಾಗಳು ಸ್ತಬ್ಧವಾದರಿಂದ , ಇನ್ನು ಕೆಲವು ಕಡೆ ತಾಂತ್ರಿಕ ದೋಷಕ್ಕೆ ಡಮಾರ್ ಆಗಿರುವ ಕ್ಯಾಮರಾಗಳು, ಒಟ್ಟಿನಲ್ಲಿ...

ಅಡಿಕೆಯಿಂದ ಆರೋಗ್ಯಕ್ಕೆ ಹಾನಿಕಾರಕವಾಗಲ್ಲ : ವಿಶ್ವ ಆರೋಗ್ಯ ಸಂಸ್ಥೆಯ ಮನವರಿಕೆಗೆ ಮನವಿ

ಅಡಿಕೆಯಿಂದ ಆರೋಗ್ಯಕ್ಕೆ ಹಾನಿಕಾರಕವಾಗಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮನವರಿಕೆಗೆ ಮನವಿ ಮಾಡುವಂತೆ ಜಿಲ್ಲೆಯ ಸಂಸದ ಕ್ಯಾ.ಬ್ರಿಜೇಶ್ ಚೌಟ ಹಾಗೂ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ...