ಬಂಟ್ವಾಳ ಮಂಡಲ ಬಿಜೆಪಿ ಸಮಿತಿ ಮಾಣಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರ ನೇತೃತ್ವದಲ್ಲಿ ಸಹಕಾರ ಪ್ರಕೋಷ್ಟದ ಮಂಡಲ ಸಂಚಾಲಕರಾದ ಜಯರಾಮ ರೈ ಅವರಿಂದ ಬೋಳಂತೂರು ಗ್ರಾಮದ (ಶಕ್ತಿಕೇಂದ್ರದ) ಹಿರಿಯರೂ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶ್ರದ್ಧಾಳುಗಳು ಹಾಗೂ ಅಪಾರ ಪಕ್ಷ ಪ್ರೇಮಿಗಳೂ ಆದ ಚಿತ್ರಾಧರ ಪೂಜಾರಿ ಮಾಡದಡಿ ಅವರನ್ನು ಅವರ ಬೇಟಿ ಮಾಡಿ ಮಂಡಲ ಸಹಕಾರ ಪ್ರಕೋಷ್ಟ, ಮಾಣಿ ಮಹಾಶಕ್ತಿ ಕೇಂದ್ರ ಮತ್ತು ಬೋಳಂತೂರು ಶಕ್ತಿಕೇದ್ರದ ವತಿಯಿಂದ ಗೌರವಿಸಿದರು.
ಈ ಸಂದರ್ಭದಲ್ಲಿ ಮಾಣಿ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಅರವಿಂದ ರೈ ಮೂರ್ಜೆಬೆಟ್ಟು, ಪ್ರಧಾನ ಕಾರ್ಯದರ್ಶಿ ನಾಗೇಶ್ ಭಂಡಾರಿ, ಬೂತು ಸಮಿತಿ ಕಾರ್ಯದರ್ಶಿ ಶೇಖರ್ ಪೂಜಾರಿ ಉಪಸ್ಥಿತರಿದ್ದರು.
ಗೌರವ ಸ್ವೀಕರಿಸಿ ಬಹಳ ಖುಷಿಯಿಂದ ಮಾತನಾಡಿದ ಚಿತ್ರಾಧರ ಪೂಜಾರಿಯವರು ಅಂದಿನ ದಿನಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂಲಕ ಮಾಡಿದ್ದ ದೇಶದ ಸೇವೆಯ ಬಗ್ಗೆ ಮತ್ತು ಪಕ್ಷದ ಪರವಾಗಿ ಮಾಡಿದ ಚಟುವಟಿಕೆಯ ಬಗ್ಗೆ ನೆನಪು ಮಾಡಿಕೊಂಡರು.
“ಅಂದಿನ ದಿನಗಳಲ್ಲಿ ಬೆರಳೆಣಿಕೆಯಷ್ಟಿದ್ದ ಜನರ ಬೆಂಬಲ ಇಂದು ಬೃಹತ್ ಆಗಿದೆ.ಈಗಿನ ಯುವಕರ ಪಕ್ಷ ನಿಷ್ಟೆ ಮತ್ತು ನಿಯತ್ತಿನ ಬಗ್ಗೆ ನನಗೆ ನೆಮ್ಮದಿ ಇದೆ. ನಮ್ಮ ಪ್ರದಾನ ಮಂತ್ರಿ ಮೋದಿಯವರು ದೇಶಕ್ಕಾಗಿ ದುಡಿಯುತ್ತಿದ್ದಾರೆ ಅವರ ಸೇವೆಗೆ ನನ್ನದೊಂದು ಅಳಿಲು ಸೇವೆ ಇರಲೆಂದೇ ನಾನೂ ಬಂದು ಮತ ನೀಡಿರುವೆ” ಎಂದರು.
ಇಂದು ಪಕ್ಷ ಬೃಹತ್ ಆಗಿ ಬೆಳೆದು ನಿಲ್ಲಲು ಕಾರಣರಾದ ಎಲ್ಲರಿಗೂ ತಮ್ಮದೇ ಶೈಲಿಯಲ್ಲಿ ವಂದನೆ ಸಲ್ಲಿಸಿದರು.
ಇತ್ತೀಚಿಗೆ ನಡೆದ ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ಚುನಾವಣೆಯಲ್ಲಿ ತಮ್ಮ ಅನಾರೋಗ್ಯವನ್ನು ಲೆಕ್ಕಿಸದೇ ಬಹಳ ಮುತುವರ್ಜಿಯಿಂದ ಬಂದು ಮತದಾನ ಮಾಡಿದ ಪಕ್ಷ ನಿಷ್ಟೆಯನ್ನು ಶ್ಲಾಘಿಸಿ ಗೌರವಿಸಲಾಯಿತು.