Friday, November 22, 2024

ಹೊಸ ಟ್ರೆಂಡ್ ನ ಜೀನ್ಸ್‌ ಧರಿಸಿದ್ದ ಹುಡುಗನ ಪ್ಯಾಂಟ್‌ ಹೊಲಿದ ಯುವಕರು…. ವಿಡಿಯೋ ವೈರಲ್, ನೊಂದ ಯುವಕ ಆತ್ಮಹತ್ಯೆಗೆ ಯತ್ನ

ಬೆಳ್ತಂಗಡಿ: ಯುವಕನೊಬ್ಬ ತನ್ನ ವಿನೂತನ ಶೈಲಿಯ ಜೀನ್ಸ್ ಪ್ಯಾಂಟ್ ಧರಿಸಿ ಬೆಳ್ತಂಗಡಿ ಸಂತೆಕಟ್ಟೆ ಮಾರುಕಟ್ಟೆಗೆ ಬಂದಾಗ ಮೂವರು ಸೇರಿ ಆತನನ್ನು ತಡೆದು ಎರಡು ಕೈಗಳನ್ನು ಲಾಕ್‌ ಮಾಡಿ ಪ್ಯಾಂಟ್ ಗೆ ಗೋಣಿಚೀಲದ ಸೂಜಿಯಿಂದ ಹೊಲಿದು ಅದರ ವಿಡಿಯೋವನ್ನು ಸಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರಿಂದ ನೊಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಪಣಕಜೆ ನಿವಾಸಿ ಮುಹಮ್ಮದ್ ಹಾಯಿಫ್ ಎಂಬವರ ಪುತ್ರ ಶಾಹಿಲ್ ಆತ್ಮಹತ್ಯೆಗೆ ಯತ್ನಿಸಿದ ಯುವಕ. ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಪುತ್ರಬೈಲು ನಿವಾಸಿ ಶಬೀರ್, ಅನೀಶ್ ಪಣಕಜೆ, ಲಾಯಿಲ ಗ್ರಾಮದ ಆದರ್ಶ ನಗರ ನಿವಾಸಿ ಸಲೀಂ ಎಂಬವರು ಸೇರಿ ಈ ದುಷ್ಕ್ರತ್ಯ ನಡೆಸಿದ್ದಾರೆ ಎನ್ನಲಾಗಿದೆ

ಈತನ ವಿಡಿಯೋ ವೈರಲ್ ಆಗುತ್ತಲೇ, ತನ್ನ ಸ್ನೇಹಿತರು ಯುವಕನಿಗೆ ವಿಡಿಯೋ ಕಳುಹಿಸಿದ್ದಾರೆ. ಇದರಿಂದ ಮನನೊಂದು ಸಂಜೆ ವೇಳೆಗೆ ಆತ್ಮಹತ್ಯೆಗೆ ಯತ್ನಿಸಿ ಜೀವಣ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾ‌ನೆ ಎಂದು ತಿಳಿದು ಬಂದಿದೆ.

ನವೀನ ಮಾದರಿಯ ಜೀನ್ಸ್ ಪ್ಯಾಂಟ್ ಹರಿದ ರೀತಿಯಲ್ಲಿತ್ತು. ಅದನ್ನು ಧರಿಸಿ ನ.21 ರಂದು ಮಧ್ಯಾಹ್ನ ಬೆಳ್ತಂಗಡಿ ನಗರದಲ್ಲಿರುವ ಸಂತೆಕಟ್ಟೆ ಮಾರುಕಟ್ಟೆಗೆ ಬಂದಿದ್ದ. ಮಾರುಕಟ್ಟೆಯಲ್ಲಿದ್ದ ಪಡ್ಡೆ ಯುವಕರ ತಂಡವೊಂದು ಆತನನ್ನು ಸಾರ್ವಜನಿಕವಾಗಿ ಎರಡು ಕೈಗಳನ್ನು ಹಿಂದಕ್ಕೆ ಹಿಡಿದು ಬಲವಂತದಿಂದ ಹಿಡಿದಿಟ್ಟು ಆತನ ಪ್ಯಾಂಟನ್ನು ಗೋಣಿ ಹೊಲಿಯುವ ಸೂಜಿಯಿಂದ ಹೊಲಿದು ಜತೆಗೆ ಮೊಬೈಲ್ ನಲ್ಲಿ ವೀಡಿಯೊ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿ ಹರಿಯಬಿಟ್ಟಿದ್ದರು.

ವಿಡಿಯೋ ಮಾಡಿ ಟ್ರೋಲ್ ಮಾಡಿದರಿಂದ ಮಾನಸಿಕವಾಗಿ ನೊಂದ ಶಾಹಿಲ್ ನ.21 ರಂದು ಸಂಜೆ ಮನೆಯಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ತಕ್ಷಣ ಮನೆಯವರು ಚಿಕಿತ್ಸೆಗಾಗಿ ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿದ್ದು ಪ್ರಥಮ ಚಿಕಿತ್ಸೆಯ ನಂತರ ಚಿಂತಾಜನಕ ಸ್ಥಿತಿಯಲ್ಲಿದ್ದ ಯುವಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಆಸ್ಪತ್ರೆಗೆ ಸಾಗಿಸಿದ್ದಾರೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದೆ.

ಈ ಪುಂಡರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.

More from the blog

ಸೌತಡ್ಕ ಕ್ಷೇತ್ರದ ಸಿಬ್ಬಂದಿ ಮೇಲೆ ಯಾತ್ರಾರ್ಥಿಯಿಂದ ಹಲ್ಲೆ

ಬೆಳ್ತಂಗಡಿ: ಸ್ವಚ್ಛತೆಯ ಕೆಲಸ ನಿರ್ವಹಿಸುತ್ತಿದ್ದ ಕ್ಷೇತ್ರದ ಸಿಬ್ಬಂದಿಗೆ ಯಾತ್ರಾರ್ಥಿ ಹಲ್ಲೆ ಮಾಡಿದ ಘಟನೆ ಕೊಕ್ಕಡ ಗ್ರಾಮದ ಶ್ರೀ ಕ್ಷೇತ್ರ ಸೌತಡ್ಕದಲ್ಲಿ ನಡೆದಿದೆ ಮಹೇಂದ್ರ ಕೊಲ್ಲಾಜೆಪಳಿಕೆ ಹಲ್ಲೆಗೊಳಗಾದ ಸಿಬಂದಿ. ಮಹೇಂದ್ರ ಅವರು ಮೊಬೈಲ್‌ ಲೈಟ್‌ ಬಳಸಿ ಶೌಚಾಲಯವನ್ನು...

ನೇರಳಕಟ್ಟೆ ಶಾಲಾ ಎಸ್ಡಿಎಂಸಿ ಅಧ್ಯಕ್ಷರಾಗಿ ಟಿ.ಕೆ.ರಶೀದ್ ಪರ್ಲೊಟ್ಟು ಆಯ್ಕೆ

ಬಂಟ್ವಾಳ : ದ.ಕ.ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ನೇರಳಕಟ್ಟೆ ಇದರ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾಗಿ ಪಿ.ಕೆ.ರಶೀದ್ ಪರ್ಲೊಟ್ಟು ಆಯ್ಕೆಯಾದರು ಬುಧವಾರ ಶಾಲಾ ಉರ್ದಿಲಗುತ್ತು ಕೆ ಇಂದುಹಾಸ ರೈ ಸಭಾಂಗಣದಲ್ಲಿ...

ಕೈಕೊಟ್ಟ ಸಿ.ಸಿ.ಕ್ಯಾಮರಾ ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗಬಹುದೇ…?

ಬಂಟ್ವಾಳ: ಕೈಕೊಟ್ಟ ಸಿಸಿ ಕೆಮರಾ ಕಾನೂನು ಸುವ್ಯವಸ್ಥೆಗೆ ಪೆಟ್ಟು ಬೀಳಬಹುದಾ? .... ಕೆಲವಡಡೆ ಸಿಡಿಲು ಬಡಿದ ಪರಿಣಾಮ ಕೆಮರಾಗಳು ಸ್ತಬ್ಧವಾದರಿಂದ , ಇನ್ನು ಕೆಲವು ಕಡೆ ತಾಂತ್ರಿಕ ದೋಷಕ್ಕೆ ಡಮಾರ್ ಆಗಿರುವ ಕ್ಯಾಮರಾಗಳು, ಒಟ್ಟಿನಲ್ಲಿ...

ಅಡಿಕೆಯಿಂದ ಆರೋಗ್ಯಕ್ಕೆ ಹಾನಿಕಾರಕವಾಗಲ್ಲ : ವಿಶ್ವ ಆರೋಗ್ಯ ಸಂಸ್ಥೆಯ ಮನವರಿಕೆಗೆ ಮನವಿ

ಅಡಿಕೆಯಿಂದ ಆರೋಗ್ಯಕ್ಕೆ ಹಾನಿಕಾರಕವಾಗಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮನವರಿಕೆಗೆ ಮನವಿ ಮಾಡುವಂತೆ ಜಿಲ್ಲೆಯ ಸಂಸದ ಕ್ಯಾ.ಬ್ರಿಜೇಶ್ ಚೌಟ ಹಾಗೂ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ...