ಪುತ್ತೂರು: ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಡಬ್ಬಲ್ ಚೋಲ್ ಧಾರಣೆ 500 ರೂ. ಗಡಿ ದಾಟಿ ಮುನ್ನುಗ್ಗಿದೆ. ಜತೆಗೆ ಸಿಂಗಲ್ ಚೋಲ್ ಧಾರಣೆಯೂ ಏರಿಕೆ ಕಂಡಿದೆ.
ಕ್ಯಾಂಪ್ಕೋಗೆ ಹೋಲಿಸಿದರೆ ಹೊರ ಮಾರುಕಟ್ಟೆಯಲ್ಲಿ ಡಬ್ಬಲ್ ಚೋಲ್, ಸಿಂಗಲ್ ಚೋಲ್ ಧಾರಣೆ ಹೆಚ್ಚಿತ್ತು. ಸೆ. 11ರಂದು ಕ್ಯಾಂಪ್ಕೋ ಮಾರುಕಟ್ಟೆ ಯಲ್ಲಿ ಸಿಂಗಲ್ ಚೋಲ್ ಕೆ.ಜಿ.ಗೆ 420 ರೂ. ಇದ್ದರೆ, ಡಬ್ಬಲ್ ಚೋಲ್ 500 ರೂ. ಇತ್ತು. ಹೊರ ಮಾರುಕಟ್ಟೆಯಲ್ಲಿ ಸಿಂಗಲ್ ಚೋಲ್ 425 ರೂ. ಇದ್ದರೆ, ಡಬ್ಬಲ್ ಚೋಲ್ 505 ರೂ. ತನಕ ಇತ್ತು. ಹೊಸ ಅಡಿಕೆ ಧಾರಣೆ 330 ರೂ.ಗಳಿಂದ 340 ರೂ. ತನಕ ಕಂಡುಬಂದಿದೆ.
ಕೆಲವು ತಿಂಗಳುಗಳ ಹಿಂದೆ ಹಸಿ ಕೊಕ್ಕೊ ಧಾರಣೆ ಕೆ.ಜಿ.ಗೆ 300 ರೂ. ಗಡಿ ದಾಟಿತ್ತು. ಆದರೆ ಪ್ರಸ್ತುತ 90 100 ರೂ. ಆಸುಪಾಸಿನಲ್ಲಿದೆ. 1,000 ರೂ. ತಲುಪಿದ್ದ ಒಣ ಕೊಕ್ಕೊ ಧಾರಣೆ 550 ರೂ.ನಲ್ಲಿದೆ. ಕಾಳುಮೆಣಸು ಧಾರಣೆಯು 615 ರೂ. ಇದ್ದು, ಕಳೆದ ಆರು ತಿಂಗಳಿನಿಂದ ಸ್ಥಿರವಾಗಿದೆ.