ರಾಮ್ ಸೇನಾ ವಾಯುಪುತ್ರ ಘಟಕ ಕುಪ್ಪೆಪದವು ಇದರ ವತಿಯಿಂದ ಅಶಕ್ತರ ಚಿಕಿತ್ಸಾ ವೆಚ್ಚಕ್ಕಾಗಿ ಒಂದು ವಿಷೇಶವಾದ ಪ್ರಯತ್ನ ಕೈಕೊಂಡು ವಿಭಿನ್ನ ವೇಷ ಧರಿಸಿ 3 ನೇ ವರ್ಷದ ಭವತಿ ಭಿಕ್ಷಾಂದೇಹಿ ಎಂಬ ಪುಣ್ಯ ಕಾರ್ಯವನ್ನು ಕುಪ್ಪೆಪದವು ಶ್ರೀ ದುರ್ಗೆಶ್ವರಿ ದೇವಸ್ಥಾನದಿಂದ ಬಜ್ಪೆ ಪೇಟೆ ತನಕ ಕಾಲ್ನಡಿಗೆಯಲ್ಲಿ ಧನ ಸಂಗ್ರಹಿಸಿ ಅಹಸಕ್ತರ ಪಾಲಿಗೆ ನೆರವಾದರು.
ಈ ಕಾರ್ಯದಲ್ಲಿ ರಾಮ್ ಸೇನೆಯ ಹಲವು ಕಾರ್ಯಕರ್ತರು ಭಾಗವಹಿಸಿ ಸಮಾಜಕ್ಕೆ ಒಂದು ಅತ್ಯುತ್ತಮ ಸಂದೇಶವನ್ನು ಕೊಡುವ ಮೂಲಕ ಗಮನ ಸೆಳೆದರು .
ಈ ಸಂಧರ್ಭದಲ್ಲಿ ಈ ಕಾರ್ಯದ ನೇತೃತ್ವ ವಹಿಸಿದ್ದ ಸಂದೇಶ್ ಕಲ್ಲಾಡಿ ಹಾಗೂ ಚಂದ್ರಹಾಸ್ ಪೂಜಾರಿ ಮಂಗ್ಲಿಚಾರ್ ಇವರು ಜೊತೆಗಿದ್ದರು .