Friday, October 4, 2024

ಪಟಾಕಿ ಮಾರಾಟ ಲೈಸನ್ಸ್‌ಗೆ ಅರ್ಜಿ ಆಹ್ವಾನ

ಮಂಗಳೂರು: ದೀಪಾವಳಿ ಮತ್ತು ತುಳಸಿ ಪೂಜೆ ಹಬ್ಬಗಳ ಸಂದರ್ಭದಲ್ಲಿ ಅಕ್ಟೋಬರ್ 30ರಿಂದ ನವೆಂಬರ್ 2ರವರೆಗೆ ಹಾಗೂ ನವೆಂಬರ್ 12 ಮತ್ತು 13 ರವರೆಗೆ ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಪಟಾಕಿ ಸುಡುಮದ್ದು ಮಾರಾಟ ಮಾಡಲು ತಾತ್ಕಾಲಿಕ ಸುಡುಮದ್ದು ಪರವಾನಿಗೆಯನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ಅಕ್ಟೋಬರ್ 4ರಿಂದ 16ರವರೆಗೆ ರೂ. 200/- ಬ್ಯಾಂಕ್ ಚಲನ್ ಮೂಲಕ ಸರಕಾರಕ್ಕೆ ಪಾವತಿಸಿ ಪಡೆದುಕೊಳ್ಳಬೇಕು. ಅರ್ಜಿ ಮತ್ತು ದಾಖಲೆಗಳನ್ನು ಅಕ್ಟೋಬರ್ 25ರೊಳಗೆ ಸಲ್ಲಿಸಬೇಕು. ನಿಗದಿತ ದಿನಾಂಕದ ನಂತರ ಯಾವುದೇ ಕಾರಣಕ್ಕೂ ಅರ್ಜಿಯನ್ನು ನೀಡಲಾಗುವುದಿಲ್ಲ.

ಅರ್ಜಿ ಸ್ವೀಕರಿಸಿದ ನಂತರ ಅರ್ಜಿದಾರರು ಅಗ್ನಿಶಾಮಕ ಇಲಾಖೆ, ಸ್ಥಳೀಯ ಸಂಸ್ಥೆ ಹಾಗೂ ವ್ಯಾಪ್ತಿಯ ಪೊಲೀಸ್ ಠಾಣೆಯಿಂದ ನೇರವಾಗಿ ನಿರಾಕ್ಷೇಪಣಾ ಪತ್ರ ಪಡೆಯಬೇಕು.

ಸಲ್ಲಿಸಿದ ಅರ್ಜಿಯನ್ನು ನಿಯಮಾನುಸಾರವಾಗಿ ಪರಿಶೀಲಿಸಿ ತಾತ್ಕಾಲಿಕ ಸುಡುಮದ್ದು ಪರವಾನಿಗೆಯನ್ನು ನಿಗದಿತ ಶುಲ್ಕ (ರೂ.500/-) ಬ್ಯಾಂಕ್ ಗೆ ಪಾವತಿಸಿ ಪರವಾನಿಗೆಯನ್ನು ಪಡೆಯಬೇಕು. ತಾತ್ಕಾಲಿಕ ಮಳಿಗೆಗಳನ್ನು ತೆರೆಯುವ ಸಂದರ್ಭದಲ್ಲಿ ಮೂಲ ಪರವಾನಿಗೆಯನ್ನು ಕಡ್ಡಾಯವಾಗಿ ಮಳಿಗೆಯ ಮುಂಭಾಗದಲ್ಲಿ ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಬೇಕು. ಪರವಾನಿಗೆದಾರರು ಕಡ್ಡಾಯವಾಗಿ ಮಳಿಗೆಗಳಲ್ಲಿ ಹಾಜರಿರಬೇಕು.

 

ದೀಪಾವಳಿಯ ಮತ್ತು ತುಳಸಿ ಪೂಜೆಯ ಸಂದರ್ಭದಲ್ಲಿ ಪಟಾಕಿ ಮಾರಾಟ ಮಾಡುವ ಪರವಾನಗಿಯು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮತ್ತು ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಯಾವುದೇ ಸಮಯದಲ್ಲೂ ರದ್ದುಗೊಳಿಸುವ ಷರತ್ತಿಗೆ ಒಳಪಟ್ಟಿರುತ್ತದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

More from the blog

ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿಯಾಗಿ ಕಿಶೋರ್ ಕುಮಾರ್ ಭಂಡಾರಿ ಬೊಟ್ಯಾಡಿ ಫೈನಲ್…..

ಬಂಟ್ವಾಳ: ಕೋಟ ಶ್ರೀನಿವಾಸ ಪೂಜಾರಿ ಅವರ ತೆರವಾದ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಕಿಶೋರ್ ಕುಮಾರ್ ಭಂಡಾರಿ ಬೊಟ್ಯಾಡಿ ಅವರನ್ನು ಘೋಷಣೆ ಮಾಡಲಾಗಿದೆ. ಯುವಮೋರ್ಚಾ ಜಿಲ್ಲಾಧ್ಯಕ್ಷನಾಗಿ ಮಿಂಚಿದ ಇವರು...

ಡ್ರಿಂಕ್ ಆಂಡ್ ಡ್ರೈವ್: ಕಾರು ಚರಂಡಿಗೆ,ಮೂವರಿಗೆ ಗಾಯ….

ಬಂಟ್ವಾಳ: ಚಾಲಕನ ನಿಯಂತ್ರಣ ಕಳೆದುಕೊಂಡು ಕಾರೊಂದು ಚರಂಡಿಗೆ ಬಿದ್ದು ಚಾಲಕ ಸೇರಿದಂತೆ ಮೂವರು ಗಾಯಗೊಂಡ ಘಟನೆ ಜಕ್ರಿ ಬೆಟ್ಟು ಮಣ್ಣಾಪು ಎಂಬಲ್ಲಿ ಇಂದು ಸಂಜೆ ನಡೆದಿದೆ. ಘಟನೆಯಲ್ಲಿ ಕೇರಳ ನಿವಾಸಿಗಳಾದ ಅರುಣ್, ಪ್ರಮೋದ್ ಮತ್ತು...

ವಿಧಾನ ಪರಿಷತ್ ( MLC ) ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಜಿ.ಪಂ.ಮಾಜಿ‌ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಸ್ಪರ್ಧೆ ಬಹುತೇಕ ಖಚಿತ…..

ಬಂಟ್ವಾಳ: ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಒಮ್ಮತದ ಅಭ್ಯರ್ಥಿಯಾಗಿ ದ.ಕ.ಜಿಲ್ಲೆಯ ಯುವ ಸಮರ್ಥ ನಾಯಕನಾಗಿರುವ ಯುವಕರ ಕಣ್ಮಣಿಯಾಗಿರುವ ಜಿ.ಪಂ.ನ. ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆಯವರು ಸ್ಪರ್ಧೆ ಮಾಡುವುದು ಬಹುತೇಕ...

ಬಸ್ ಪಲ್ಟಿಯಾಗಿ ಹತ್ತಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯ

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಕೆ.ಎಸ್.ಆರ್‌.ಟಿ.ಸಿ.ಬಸ್ ಪಲ್ಟಿಯಾದ ಘಟನೆ ಬಿಸಿರೋಡು ವಿಲ್ಲಾಂಪುರ ರಾಜ್ಯ ಹೆದ್ದಾರಿಯ ವಗ್ಗದಲ್ಲಿ ನಡೆದಿದೆ. ವಗ್ಗ ಸಮೀಪದ ಕೊಪ್ಪಳ ಎಂಬಲ್ಲಿ ಘಟನೆ ನಡೆದಿದೆ. ಧರ್ಮಸ್ಥಳದ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ಕೆ.ಎಸ್.ಆರ್.ಟಿ.ಸಿ ಬಸ್ಸೊಂದು...