Friday, October 4, 2024

ರಾಷ್ಟ್ರೀಯ ಸೇವಾ ಯೋಜನೆಯ ಸ್ವಚ್ಛತಾ ಆಂದೋಲನದ ಸಮಾರೋಪ ಸಮಾರಂಭ

ಶ್ರೀರಾಮ ಪದವಿ ವಿಭಾಗದಿಂದ ರಾಷ್ಟ್ರೀಯ ಸೇವಾ ಯೋಜನೆಯ ಸ್ವಚ್ಛತಾ ಆಂದೋಲನದ ಸಮಾರೋಪ ಸಮಾರಂಭ ಮತ್ತು ಕ್ರೀಡಾ ಸಂಘದ ಉದ್ಘಾಟನೆ , ಬೀಚ್ ಫೆಸ್ಟ್ ಕಾರ್ಯಕ್ರಮವು ಮಂಗಳೂರಿನ ತಣ್ಣೀರು ಬಾವಿಯಲ್ಲಿ ನಡೆಯಿತು.

ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾದ ಡಾ| ಪ್ರಭಾಕರ್ ಭಟ್ ಕಲ್ಲಡ್ಕ ಇವರು ಕಾರ್ಯಕ್ರಮಕ್ಕೆ ಶುಭಹಾರೈಕೆ ಮಾಡುತ್ತ ಸಮುದ್ರಕ್ಕೆ ಕ್ಷೀರಾಭಿಷೇಕ ಮಾಡುವುದರ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು, ಬಳಿಕ ಅರವಿಂದ್ ಬೆಂಗ್ರೇ ಸಾಮಾಜಿಕ ಕಾರ್ಯಕರ್ತರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಪ್ರಾಚಾರ್ಯರಾದ ಕೃಷ್ಣಪ್ರಸಾದ್ ಕಾಯರ್ ಕಟ್ಟೆ, ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಯತಿರಾಜ್ ಪಿ, ಸಹ ಯೋಜನಾಧಿಕಾರಿ ವರ್ಷಾ,ಮತ್ತು ಕ್ರೀಡಾ ಸಂಘದ ನಿರ್ದೇಶಕರಾದ ಪ್ರಶಾಂತ್ ಸೋಮಯಾಜಿ ,ಉಪಪ್ರಾಂಶುಪಾಲೆ ಸುಕನ್ಯಾ ಸಿ ಉಪಸ್ಥಿತರಿದ್ದರು. ಕಲಾ ವಿಭಾಗದ ಮುಖ್ಯಸ್ತರಾದ ಶ್ರೀಮತಿ ಜಯಲಕ್ಷ್ಮಿ ಮಾತಾಜಿ ಕಾರ್ಯಕ್ರಮವನ್ನು ನಿರ್ವಹಿಸಿದರು.

ರಾಷ್ಟ್ರೀಯ ಸೇವಾ ಯೋಜನೆಯ ಸ್ವಚತಾ ಹೀ ಸೇವಾ ಕಾರ್ಯಕ್ರಮವು 17-09-2024 ರಿಂದ 03-10-2024 ರವರೆಗಿನ ನಡೆದು ಸಮುದ್ರ ಕಿನಾರೆ ಯಲ್ಲಿನ ಕಸ , ಪ್ಲಾಸ್ಟಿಕ್ ಹೆಕ್ಕಿ ಶುಚಿಗೊಳಿಸುವ ಮೂಲಕ ತೆರೆಕಂಡಿತು. ಬಳಿಕ ಮರಳು ಶಿಲ್ಪ, ವಾಲಿಬಾಲ್, ಥ್ರೋ ಬಾಲ್, ಓಟಗಳು ಮುಂತಾದ ಆಟಗಳನ್ನು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದು ವಿಜೇತರಿಗೆ ಬಹುಮಾನವನ್ನು ನೀಡಿ ಗೌರವಿಸಲಾಯಿತು.

More from the blog

ಅ.10ರಂದು ಮಾಣಿ ಗ್ರಾಮ ದೈವಗಳ ವಾರ್ಷಿಕ ನೇಮೋತ್ಸವದ ಗೊನೆ ಮುಹೂರ್ತವ

ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಶಂಭುಗ ಬಾಲಮಂಟಮೆಯಲ್ಲಿ ಇದೇ ಬರುವ ಅ.10ರಂದು ಗುರುವಾರ ನಡೆಯಲಿರುವ ಗ್ರಾಮ ದೈವಗಳ ವಾರ್ಷಿಕ ನೇಮೋತ್ಸವದ ಗೊನೆ ಮುಹೂರ್ತವು ತಂತ್ರಿಗಳಾದ ಪಳನೀರು ಅನಂತ ಭಟ್ಟರ ಪೌರೋಹಿತ್ಯದಲ್ಲಿ ಗಣಹೋಮ ಇತ್ಯಾದಿ...

ಅ.6ರಂದು ದಸರಾ ಕ್ರೀಡೋತ್ಸವ, ಅ.9ರಂದು ಶ್ರೀ ಶಾರದಾ ಪೂಜಾ ಮಹೋತ್ಸವ

ಬಂಟ್ವಾಳ : ಬಂಟ್ವಾಳ ತಾ. ಇರ್ವತ್ತೂರುಪದವು ಶ್ರೀ ಶಾರದೋತ್ಸವ ಸೇವಾ ಸಮಿತಿ ವತಿಯಿಂದ 8ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವ ಪ್ರಯುಕ್ತ ಮೂಡುಪಡುಕೋಡಿ ಸ.ಹಿ.ಪ್ರಾ.ಶಾಲಾ ಮೈದಾನದಲ್ಲಿ ಶಾಶ್ವತ ಬಯಲು ರಂಗ ಮಂದಿರ...

ಬಂಟ್ವಾಳ ಜಮೀಯ್ಯತುಲ್ ಫಲಾಹ್ ವತಿಯಿಂದ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ

ಬಂಟ್ವಾಳ: ವಿದ್ಯಾರ್ಥಿಗಳು, ಯುವಸಮಾಜ ಸಿವಿಲ್ ಸರ್ವಿಸ್ ಪರೀಕ್ಷೆಗೆ ಶ್ರಮವಹಿಸಿ ತರಬೇತು ಪಡೆಯುವುದರ ಜೊತೆಗೆ ಅದರಲ್ಲಿ ತೇರ್ಗಡೆ ಹೊಂದಿ ದೇಶದ ಉನ್ನತ ಹುದ್ದೆಯಲ್ಲಿ ಕಾಣುವಂತಾಗಬೇಕು. ಯುವಸಂಪತ್ತು ದೇಶದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು...

ಸಮನ್ವಯ ಶಿಕ್ಷಕರ ಸಂಘದ ವತಿಯಿಂದ ಬ್ಯಾರಿ ಭಾಷಾ ದಿನಾಚರಣೆ

ಬಂಟ್ವಾಳ : ಮಾತೃ ಭಾಷೆಯಲ್ಲಿ ಸಂವಹನ ಕಡಿಮೆಯಾದಾಗ ಮೂಲ ಪದಗಳು ಕಣ್ಮರೆಯಾಗಿ ಭಾಷಾ ಸಂರಚನೆಗೆ ಧಕ್ಕೆಯಾಗುತ್ತದೆ , ಆ ಮೂಲಕ ಭಾಷೆ ಅಳಿವಿನ ಹಾದಿ ಹಿಡಿಯುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯ...