ಬಂಟ್ವಾಳ: ನವರಾತ್ರಿ ಹಬ್ಬದ ಸಂದರ್ಭದಲ್ಲಿ ಮಳೆರಾಯನ ಆರ್ಭಟ ಕಂಡು ಬಂದಿದ್ದು, ಕಳೆದ ಎರಡು ದಿನಗಳಿಂದ ಸಿಡಿಲು ಮಿಂಚು ಸಹಿತ ಗಾಳಿ ಮಳೆಯಾಗುತ್ತಿದೆ.
ಇಂದು ಸಂಜೆ ವೇಳೆ ಮಿಂಚು ಸಿಡಿಲು ಗಾಳಿಮಳೆಯಾಗಿದ್ದು ತಾಲೂಕಿನ ಅನೇಕ ಕಡೆಗಳಲ್ಲಿ ಹಾನಿಯಾಗಿರುವ ಬಗ್ಗೆ ತಾಲೂಕು ಅಡಳಿತ ಮಾಹಿತಿ ನೀಡಿದೆ.
ಕೇಪು ಗ್ರಾಮದ ಕೋಡಂದೂರು ಎಂಬಲ್ಲಿ ಜಯರಾಮ ನಾಯ್ಕ ಎಂಬುವವರ ಮನೆಗೆ ಸಿಡಿಲು ಬಡಿದು ಹಾನಿ ಆಗಿರುತ್ತದೆ.ಅಳಿಕೆ ಗ್ರಾಮದ ನಾರಾಯಣ ಮೂಲ್ಯ ಎಂಬವರ ಮನೆಗೆ ಸಿಡಿಲು ಬಡಿದು ಭಾಗಶಃ ಹಾನಿಯಾಗಿದೆ.ನರಿಕೊಂಬು ಗ್ರಾಮದ ಮಾರುತಿನಗರ ಎಂಬಲ್ಲಿ ಆಶಾ ಉಮೇಶ್ ನಾಯ್ಕ ಎಂಬವರ ವಾಸ್ತವ್ಯದ ಮನೆ ಮೇಲೆ ತೆಂಗಿನ ಮರ ಬಿದ್ದು ಮನೆಗೆ ಹಾನಿಯಾಗಿರುತ್ತದೆ. ಈ ಮೂರು ಮನೆಗಳಿಗೆ ಹಾನಿಯಾಗಿದ್ದು ಯಾವುದೇ ಜೀವಕ್ಕೆ ಅಪಾಯವಾಗಿರುವುದಿಲ್ಲ ಎಂದು ತಿಳಿಸಿದ್ದಾರೆ.