ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲದ ಮಾಣಿ ಮಹಾ ಶಕ್ತಿ ಕೇಂದ್ರದ ಕಾರ್ಯಕಾರಿಣಿ ಸಭೆ ಮತ್ತು ಬಿಜೆಪಿ ಸದಸ್ಯತ್ವ ಅಭಿಯಾನದ ಮಾಹಿತಿ ಸಭೆಯು ಮಾಣಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಶ್ರೀ ಅರವಿಂದ ರೈ ಮೂರ್ಜೆಬೆಟ್ಟು ಇವರ ಅಧ್ಯಕ್ಷತೆಯಲ್ಲಿ ಕೆಲಿಂಜದ ಶ್ರೀನಿಕೇತನ ಸಭಾಂಗಣದಲ್ಲಿ ನಡೆಯಿತು .
ಸಭೆಯಲ್ಲಿ ಉಪಸ್ಥಿತಿರಿದ್ದ ದಕ್ಷಿಣ ಕನ್ನಡ ಸಂಸದ ಶ್ರೀ ಬ್ರಿಜೇಶ್ ಚೌಟ ಮಾತಾಡಿ ಮಾಣಿ ಮಹಾಶಕ್ತಿ ಕೇಂದ್ರ ವ್ಯಾಪ್ತಿಯಲ್ಲಿ ಬಿಜೆಪಿ ಪ್ರಬಲವಾಗಿದ್ದು ಪ್ರಸ್ತುತ ಸಂಘಟನಾ ಶಕ್ತಿ ದ್ವಿಗುಣವಾಗಿ ಮತ್ತಷ್ಟು ವೇಗ ಪಡೆದುಕೊಂಡಿದೆ ಎಂದರು. ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ಮಾತಾಡಿ “ಬಿಜೆಪಿ ಸದಸ್ಯತ್ವ ಅಭಿಯಾನ ಬೂತ್ ಮಟ್ಟದಲ್ಲಿ ಮನೆ ಮನೆ ಬೇಟಿಯೊಂದಿಗೆ ಆರಂಭವಾಗಿ ಮಾಣಿ ಮಹಾಶಕ್ತಿ ಕೇಂದ್ರದಲ್ಲಿ ಹತ್ತು ಸಾವಿರ ವರೆಗೆ ತಲುಪಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಬಂಟ್ವಾಳ ಬಿಜೆಪಿ ಮಂಡಲದ ಅಧ್ಯಕ್ಷರಾದ ಶ್ರೀ ಚೆನ್ನಪ್ಪ ಕೋಟ್ಯಾನ್, ಜಿಲ್ಲಾ ಬಿಜೆಪಿಯ ಉಪಾಧ್ಯಕ್ಷೇ ಪೂಜಾ ಪೈ,ಸದಸ್ಯತ್ವ ಅಭಿಯಾನದ ಸಂಚಾಲಕ ವಿಕಾಸ ಪುತ್ತೂರು, ಬೂತ್ ಚಲೋ ಅಭಿಯಾನದ ಜಿಲ್ಲಾ ಸಂಚಾಲಕರಾದ ಸಂದೇಶ ಶೆಟ್ಟಿ, ಮಂಡಲ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ, ಜಿಲ್ಲಾ ಪ್ರಮುಖ ಮಾಧವ ಮಾವೆ, ಮಂಡಲ ಉಪಾಧ್ಯಕ್ಷರಾದ ರವೀಶ್ ಶೆಟ್ಟಿ, ಮಂಡಲ ಉಪಾಧ್ಯಕ್ಷರೂ ಸಿಎ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಪುಷ್ಪರಾಜ್ ಚೌಟ, ಬಂಟ್ವಾಳ ಮಂಡಲ ಬಿಜೆಪಿ ರೈತ ಮೋರ್ಚ ಅಧ್ಯಕ್ಷ ಸನತ್ ಕುಮಾರ್ ರೈ ಉಪಸ್ಥಿತರಿದ್ದರು.
ಸಂಸದರನ್ನು ಮಾಣಿ ಮಹಾಶಕ್ತಿ ಕೇಂದ್ರದ ವತಿಯಿಂದ ಸನ್ಮಾನ ಮಾಡಲಾಯಿತು.
ಜಿಲ್ಲಾ ಉಪಾಧ್ಯಕ್ಷೇಯವರು ಮತ್ತು ಜಿಲ್ಲಾ ಸದಸ್ಯತ್ವ ಅಭಿಯಾನದ ಸಂಚಾಲಕರು ಬಿಜೆಪಿ ಸದಸ್ಯತ್ವದ ಬಗ್ಗೆ ಸಭೆಗೆ ಮಾಹಿತಿ ನೀಡಿದರು.ಶ್ರೀ ಮಾಧವ ಮಾವೆಯವರು ಮಾತಾಡಿ “ಗ್ರಾಮದ ಶಕ್ತಿಕೇಂದ್ರ ಪ್ರಮುಖರು ಬೂತ್ ಸಮಿತಿಯನ್ನು ಸಂಘಟನೆಯಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಬೇಕು ಎಂದು ಹೇಳಿ ವೀರಕಂಭ ಶಕ್ತಿಕೇಂದ್ರದ ಪ್ರಮುಖರ ಬಗ್ಗೆ ಉಲ್ಲೇಖ ಮಾಡಿದರು”. ಮಾಣಿ ಮಹಾ ಶಕ್ತಿಕೇಂದ್ರ ವ್ಯಾಪ್ತಿಯಲ್ಲಿಯ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರನ್ನು ಮತ್ತು ಬಿಜೆಪಿ ಬೂತ್ ಸಮಿತಿ ಅಧ್ಫಕ್ಷರು ,ಪ್ರದಾನ ಕಾರ್ಯದರ್ಶಿಗಳನ್ನು ಈ ಸಂದರ್ಭದಲ್ಲಿ ಶಾಲು ಹಾಕಿ ವೇದಿಕೆಯಲ್ಲಿ ಅಭಿನಂದಿಸಲಾಯಿತು.ಮಹಾ ಶಕ್ತಿಕೇಂದ್ರದ ಮಹಿಳಾ ಪ್ರಮುಖ್ ಶ್ರೀಮತಿ ಭವಾನಿ ಶೆಟ್ಟಿ, ಓಬಿಸಿ ಪ್ರಮುಖ್ ಶ್ರೀನಿವಾಸ ಪೆರಾಜೆ ವರದಿ ಓದಿದರು.
ಮಾಣಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ನಾಗೇಶ್ ಭಂಡಾರಿ ಸ್ವಾಗತಸಿದ್ದು ವಿಟ್ಲಪಡ್ನೂರು ಪಂಚಾಯತ್ ಅಧ್ಯಕ್ಷ ಜಯಂತ ವಂದಿಸಿದರು. ಗಣೇಶ ಶೆಟ್ಟಿ ಬಾರೆಬೆಟ್ಟು ಕಾರ್ಯಕ್ರಮವನ್ನು ನಿರೂಪಿಸಿದರು.