ಬಂಟ್ವಾಳ : ತ್ರಿಭಾಷಾ ಸೂತ್ರದ ಮೂಲಕ ಸಮಾಜದ ಪರಿವರ್ತನೆ ಸಾಧ್ಯ ಎಂದು ಪ್ರತಿಪಾದಿಸಿ, ಮಹಿಳೆಯರಿಗೆ ಕರಕುಶಲ ಸ್ವಾವಲಂಬಿ ಬದುಕು ಕಟ್ಟುವಲ್ಲಿ ಉತ್ತೇಜನ ನೀಡಿದ ನಾರಾಯಣ ಗುರುಗಳು ಜಗದ ಪರಿವರ್ತನೆಯ ಹರಿಕಾರರು ಎಂದು ಯುವವಾಹಿನಿ ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ಪ್ರೇಮನಾಥ್ ಕರ್ಕೇರಾ ಗುರುಸಂದೇಶ ನೀಡಿದರು.
ಅವರು ಬಂಟ್ವಾಳ ತಾಲೂಕಿನ ರಾಯಿ ರಾಕೇಶ್ ಜತ್ತನ್ ಇವರ ಮನೆಯಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಗುರುತತ್ವವಾಹಿನಿ 13 ನೇ ಮಾಲಿಕೆಯಲ್ಲಿ ಮಾತನಾಡಿದರು
ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷರಾದ ದಿನೇಶ್ ಸುವರ್ಣ ರಾಯಿ,ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ, ನಿರ್ದೇಶಕರಾದ ಮಹೇಶ್ ಬೊಳ್ಳಾಯಿ, ಉದಯ್ ಮೇನಾಡ್, ಮಾಜಿ ಅಧ್ಯಕ್ಷರಾದ, ಪ್ರೇಮನಾಥ್ ಕರ್ಕೇರ, ರಾಜೇಶ್ ಸುವರ್ಣ, ಸದಸ್ಯರಾದ ನಾಗೇಶ್ ಪೂಜಾರಿ ಏಲಬೆ,ಯತೀಶ್ ಬೊಳ್ಳಾಯಿ, ಹರೀಶ್ ಅಜೆಕಲ, ಸೂರಜ್ ತುಂಬೆ, ಪ್ರಶಾಂತ್ ಏರಮಲೆ , ರತ್ನಾಕರ್ ಸಿದ್ಧಕಟ್ಟೆ,ಹಸ್ತ್ ರಾಯಿ, ಅರ್ಜುನ್ ಅರಳ,ಶಾಜಲ್ ರಾಯಿ, ಸುದೀಪ್ ರಾಯಿ, ಮಲ್ಲಿಕಾ ಪಚ್ಚಿನಡ್ಕ, ಸತೀಶ್ ಕೊಯ್ಲ, ಯಶೋಧರ ಕಡಂಬಲ್ಕೆ,ಮತ್ತಿತರರು ಉಪಸ್ಥಿತರಿದ್ದರು,
ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರಾದ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ ವಂದಿಸಿದರು.