Friday, September 27, 2024

ಮೊಬೈಲ್ ಟವರ್ ನಿಂದ ಕಳವು – ಪ್ರಕರಣ ದಾಖಲು

ವಿಟ್ಲ: ಮೊಬೈಲ್ ಟವರ್ ನ ಬ್ಯಾಟರಿ ಸಹಿತ ಬಿಡಿಭಾಗಗಳನ್ನು ಕಳವುಗೈದ ಘಟನೆ ಮಾಣಿ ಪೇಟೆಯಲ್ಲಿ ನಡೆದಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ತಡವಾಗಿ ಪ್ರಕರಣ ದಾಖಲಾಗಿದೆ.

ಬಂಟ್ವಾಳ ತಾಲೂಕು, ಮಾಣಿ ಗ್ರಾಮದ ಮಾಣಿ ನಿವಾಸಿ ಯಾದವ ಶೆಟ್ಟಿರವರು ದೂರುದಾರರಾಗಿದ್ದು, ನಾನು ಮಾಣಿಯ ಬಿಎಸ್ ಎನ್ ಎಲ್ ಟವರ್‌ ನ ಟೆಕ್ನಿಷಿಯನ್‌ ಆಗಿ ಕೆಲಸ ಮಾಡಿಕೊಂಡಿದ್ದು, ಮೇ. 13ರಂದು ಮಧ್ಯಾಹ್ನ ನನ್ನ ವ್ಯಾಪ್ತಿಯ ಮಾಣಿ ಗ್ರಾಮದ, ಮಾಣಿ ಮುಖ್ಯ ಪೇಟೆಯ, ಬಿಎಸ್‌ಎನ್‌ಎಲ್ ಟವರ್‌ ಗೆ ಭೇಟಿ ನೀಡಿದಾಗ ಎಂಕ್ಸಚೆಂಜ್‌ ನ ಒಳಗೆ ಇದ್ದ ೨೪ ಟವರ್‌ ಬ್ಯಾಟರಿ ಸಹಿತ ಇತರ ಬಿಡಿ ಭಾಗಗಳನ್ನು ಯಾರೋ ಕಳ್ಳರೂ ಕಳ್ಳತನ ಮಾಡಿಕೊಂಡು ಹೋಗಿರುವುದು ತಿಳಿದುಬಂದಿರುತ್ತದೆ. ಕಳವಾದ ವಸ್ತುಗಳು ಅಂದಾಜು ಮೊತ್ತ ರೂ. 2,30,240 ಆಗಿದೆ ಎಂದು ಯಾದವ ಶೆಟ್ಟಿಯವರು ಸೆ.೨೬ರಂದು ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

More from the blog

ಬಸ್ ಪಲ್ಟಿಯಾಗಿ ಹತ್ತಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯ

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಕೆ.ಎಸ್.ಆರ್‌.ಟಿ.ಸಿ.ಬಸ್ ಪಲ್ಟಿಯಾದ ಘಟನೆ ಬಿಸಿರೋಡು ವಿಲ್ಲಾಂಪುರ ರಾಜ್ಯ ಹೆದ್ದಾರಿಯ ವಗ್ಗದಲ್ಲಿ ನಡೆದಿದೆ. ವಗ್ಗ ಸಮೀಪದ ಕೊಪ್ಪಳ ಎಂಬಲ್ಲಿ ಘಟನೆ ನಡೆದಿದೆ. ಧರ್ಮಸ್ಥಳದ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ಕೆ.ಎಸ್.ಆರ್.ಟಿ.ಸಿ ಬಸ್ಸೊಂದು...

ಪುಂಜಾಲಕಟ್ಟೆ: ಅಂದರ್-ಬಹಾರ್ ಅದೃಷ್ಟದ ಆಟ ಆಡುತ್ತಿದ್ದ ವೇಳೆ ದಾಳಿ : 23 ಮಂದಿ ಅರೆಸ್ಟ್

ಬಂಟ್ವಾಳ: ಅಂದರ್ - ಬಹಾರ್ ಆಟ ಆಡುತ್ತಿದ್ದ ವೇಳೆ ದಾಳಿ ನಡೆಸಿದ ಪುಂಜಾಲಕಟ್ಟೆ ಎಸ್.ಐ.ನಂದಕುಮಾರ್ ನೇತ್ರತ್ವದ ತಂಡ 23 ಮಂದಿಯನ್ನು ಬಂಧಿಸಿ ,ಆಟದಲ್ಲಿ ಉಪಯೋಗಿಸಿದ ಹಣ ಸಹಿತ ಇತರ ವಸ್ತುಗಳನ್ನು ವಶಪಡಿಸಿಕೊಂಡ ಘಟನೆ...

ತಮ್ಮನನ್ನು ಕೊಂದ ಪ್ರಕರಣ, ಅಣ್ಣನಿಗೆ ಜೀವಾವಧಿ ಶಿಕ್ಷೆ.

ಬಂಟ್ವಾಳ: ತಮ್ಮನನ್ನು ಕೊಂದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಆರೋಪಿ ಅಣ್ಣನಿಗೆ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ ದಂಡ ವಿಧಿಸಿದ ಬಗ್ಗೆ ವರದಿಯಾಗಿದೆ. ‌‌ ಕನ್ಯಾನ ಗ್ರಾಮದ ನಂದರಬೆಟ್ಟು ನಿವಾಸಿ ಐತ್ತಪ್ಪ ನಾಯ್ಕ...

ಸಾಮರಸ್ಯ ಈದ್ ಸಂಭ್ರಮ : ಹಿಂದೂ ಬಾಂಧವರಿಂದ ಸಿಹಿ, ಐಸ್​​ಕ್ರೀಂ, ನೀರಿನ ಬಾಟಲಿ ವಿತರಣೆ

ವಿಟ್ಲ: ಬಂಟ್ವಾಳ ತಾಲೂಕಿನ ಮಾಣಿ ಜಂಕ್ಷನ್ ಮತ್ತು ಕೊಡಾಜೆಯಲ್ಲಿ ಮುಸ್ಲಿಮರಿಗೆ ಹಿಂದೂ ಬಾಂಧವರು ಸಿಹಿ, ಐಸ್​​ಕ್ರೀಂ, ನೀರಿನ ಬಾಟಲಿ ವಿತರಣೆ ಮಾಡಿ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ. ಮಾಣಿ ಜಂಕ್ಷನ್​​ನಲ್ಲಿ ಈದ್ ಮಿಲಾದ್ ಮೆರವಣಿಗೆ ನಡೆಯುತ್ತಿತ್ತು. ಈ...