Monday, September 23, 2024

ಬಸ್ ಪಲ್ಟಿಯಾಗಿ ಹತ್ತಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯ

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಕೆ.ಎಸ್.ಆರ್‌.ಟಿ.ಸಿ.ಬಸ್ ಪಲ್ಟಿಯಾದ ಘಟನೆ ಬಿಸಿರೋಡು ವಿಲ್ಲಾಂಪುರ ರಾಜ್ಯ ಹೆದ್ದಾರಿಯ ವಗ್ಗದಲ್ಲಿ ನಡೆದಿದೆ.
ವಗ್ಗ ಸಮೀಪದ ಕೊಪ್ಪಳ ಎಂಬಲ್ಲಿ ಘಟನೆ ನಡೆದಿದೆ.
ಧರ್ಮಸ್ಥಳದ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ಕೆ.ಎಸ್.ಆರ್.ಟಿ.ಸಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೊಂಡಕ್ಕೆ ಉರುಳಿ ಬಿದ್ದಿದೆ.
ಘಟನೆಯಲ್ಲಿ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದೆ, ಸ್ಥಳೀಯ ಯುವಕರು ಬಸ್ಸಿನಿಂದ ಪ್ರಯಾಣಿಕರನ್ನು ಹೊರಗೆ ತೆಗೆಯಲು ಸಹಕರಿಸಿದ್ದಾರೆ. ಮಂಗಳೂರು ವಿಭಾಗಕ್ಕೆ ಸೇರಿದ ಬಸ್ಸು ಅದಾಗಿದ್ದು, ಪಲ್ಟಿಯಾಗುವುದಕ್ಕೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಬಂಟ್ವಾಳ ಸಂಚಾರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

More from the blog

ಕೆ.ಎಸ್.ಆರ್‌.ಟಿ.ಸಿ.ಬಸ್ ಪಲ್ಟಿ : ಹಲವರಿಗೆ ಗಾಯ

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಕೆ.ಎಸ್.ಆರ್‌.ಟಿ.ಸಿ.ಬಸ್ ಪಲ್ಟಿಯಾದ ಘಟನೆ ಬಿಸಿರೋಡು ವಿಲ್ಲಾಂಪುರ ರಾಜ್ಯ ಹೆದ್ದಾರಿಯ ವಗ್ಗದಲ್ಲಿ ನಡೆದಿದೆ. ವಗ್ಗ ಸಮೀಪದ ಕೊಪ್ಪಳ ಎಂಬಲ್ಲಿ ಘಟನೆ ನಡೆದಿದೆ.   ಧರ್ಮಸ್ಥಳದ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ಕೆ.ಎಸ್.ಆರ್.ಟಿ.ಸಿ ಬಸ್ಸೊಂದು...

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ: ಅಳಿಕೆ ಶಾಲೆ ಚಾಂಪಿಯನ್ 

ವಿಟ್ಲ: ಕನ್ಯಾನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಹಿರಿಯರ ವಿಭಾಗದಲ್ಲಿ ಆರು ಪ್ರಥಮ, ನಾಲ್ಕು ದ್ವಿತೀಯ ಹಾಗೂ ಒಂದು ತೃತೀಯ ಸ್ಥಾನದೊಂದಿಗೆ ಶ್ರೀ ಸತ್ಯಸಾಯಿ ಲೋಕಸೇವಾ ಹಿರಿಯ ಪ್ರಾಥಮಿಕ ಶಾಲೆ, ಅಳಿಕೆಗೆ...

ಸೆ.25ರಂದು SKSSF ಮದೀನಾ ಪ್ಯಾಶನ್ ಕಾರ್ಯಕ್ರಮ 

ವಿಟ್ಲ: ಪ್ರವಾದಿ ಮುಹಮ್ಮದ್ ಪೈಗಂಬರ್ ಸ್ವಲ್ಲಲ್ಲಾಹು ಅಲೈಹಿ ವಸಲಮ್ಮರ ಜನ್ಮದಿನ ಪ್ರಯುಕ್ತ ಪ್ರತೀ ವರ್ಷ SKSSF ದಕ್ಷಿಣ ಕನ್ನಡ ಜಿಲ್ಲಾ ವೆಸ್ಟ್ ಸಮಿತಿ ಹಮ್ಮಿಕೊಳ್ಳುವ ಮದೀನಾ ಪ್ಯಾಶನ್ ಕಾರ್ಯಕ್ರಮ ಈ ವರ್ಷ SKSSF...

ಕೃಷಿ ಪಂಪ್‌ಸೆಟ್‌ ಗಳಿಗೆ ಆಧಾರ್‌ ಲಿಂಕ್‌ : ಇಂದು ಕೊನೇ ದಿನ

ಬೆಂಗಳೂರು: ರಾಜ್ಯದ ಕೃಷಿ ಪಂಪ್‌ಸೆಟ್‌ಗಳಿಗೆ ರೈತರು ತಮ್ಮ ಆಧಾರ್‌ ಜೋಡಣೆ ಮಾಡಿಕೊಳ್ಳಲು ಸೆ.23 ರಂದು ಕೊನೆಯ ದಿನವಾಗಿದ್ದು, ಹೀಗೆ ಜೋಡಣೆ ಮಾಡಿಕೊಳ್ಳದವರಿಗೆ ಬರುವ ತಿಂಗಳ ಸಹಾಯಧನ ಬಿಡುಗಡೆಯಲ್ಲಿ ತೊಂದರೆಯಾಗುವ ಸಾಧ್ಯತೆ ಇದೆ. 10 ಎಚ್‌ಪಿವರೆಗಿನ...