Friday, September 20, 2024

ಅಮ್ಟೂರು- ಕರಿಂಗಾನ ರಸ್ತೆಯ ಬದಿಯಲ್ಲಿರುವ ಅಪಾಯಕಾರಿ ಹೊಂಡ: ಮುಚ್ಚುವಂತೆ ಸಾರ್ವಜನಿಕರ ಒತ್ತಾಯ

ಬಂಟ್ವಾಳ: ಅಮ್ಟೂರು- ಕರಿಂಗಾನ ಕ್ರಾಸ್ ರಸ್ತೆಯಲ್ಲಿ ಸಂಚಾರ ಮಾಡುವ ವಾಹನ ಸವಾರರಿಗೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದ್ದು, ರಸ್ತೆಯ ದುರಸ್ತಿ ಮಾಡಿಕೊಡಿ ಎಂದು ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.

ಅಮ್ಟೂರು ಕರಿಂಗಾನ ರಸ್ತೆ ಸುಮಾರು ಆರು ಕಿ.ಮೀ ಇದ್ದು, ರಸ್ತೆಯ ಉದ್ದಕ್ಕೂ ಅಲ್ಲಲ್ಲಿ ಹೊಂಡಗಳಿಂದ ಕೂಡಿದ್ದು, ಅಪಾಯಕಾರಿಯಾಗಿದೆ. ರಸ್ತೆಯ ಇಕ್ಕೆಲಗಳ ಮಣ್ಣು ಮಳೆಗೆ ಕರಗಿ ಹೋಗಿದ್ದು, ದ್ವಿಚಕ್ರವಾಹನ ಸವಾರರು ಜೀವಭಯದಲ್ಲಿ ಸಂಚಾರ ಮಾಡುತ್ತಿದ್ದಾರೆಯಂತೆ.

ಕರಿಂಗಾಣದಲ್ಲಿ ಶಾಲೆ,ಹಾಗೂ ಚರ್ಚ್ ಇದ್ದು, ಗ್ರಾಮೀಣ ಭಾಗದ ಅನೇಕರು ಇದೇ ರಸ್ತೆಯನ್ನು ಆಶ್ರಯಿಸಿಕೊಂಡಿದ್ದಲ್ಲದೆ, ಹೆದ್ದಾರಿ ಸಂಪರ್ಕದ ಪ್ರಮುಖ ಕೊಂಡಿಯಾಗಿ ಈ ರಸ್ತೆ ಪಾತ್ರವಹಿಸುತ್ತದೆ.

ಪಸ್ತುತದ ದಿನಗಳಲ್ಲಿ ಬಿಸಿರೋಡು- ಅಡ್ಡಹೊಳೆವರಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು,ಹೆದ್ದಾರಿಯಲ್ಲಿ ಸಂಚಾರ ಮಾಡುವುದೇ ದುಸ್ತರವಾಗಿದೆ. ಈ ಕಾರಣಕ್ಕಾಗಿ ಬಿಸಿರೋಡಿನಿಂದ ಕಲ್ಲಡ್ಕವರೆಗೆ ಪುತ್ತೂರು, ವಿಟ್ಲ ಮತ್ತು ಉಪ್ಪಿನಂಗಡಿ ಭಾಗಕ್ಕೆ ತೆರಳುವ ವಾಹನ ಸವಾರರು ಬಿಸಿರೋಡಿನಿಂದ ನೇರವಾಗಿ ಪಾಣೆಮಂಗಳೂರು ಮೂಲಕ ಮಾರ್ನಬೈಲಿಗೆ ಅಲ್ಲಿಂದ ಕರಿಂಗಾನ ಮತ್ತು ಅಮ್ಟೂರು ಕ್ರಾಸ್ ಮೂಲಕ ಕಲ್ಲಡ್ಕ ಪೇಟೆಗೆ ಬರುತ್ತಾರೆ. ಹಾಗಾಗಿ ಈ ರಸ್ತೆ ಇತ್ತೀಚಿನ ಎರಡು ವರ್ಷಗಳಿಂದ ಬಹುಬೇಡಿಕೆಯ ರಸ್ತೆಯಾಗಿದ್ದು,ವಾಹನ ಸಂಚಾರದ ಸಂಖ್ಯೆ ಯಲ್ಲಿ ಹೆಚ್ಚಳವಾಗಿದೆ. ಇದರ ಜೊತೆ ಅಕ್ರಮ ಕಲ್ಲು ಮತ್ತು ಮರಳು ಸಾಗಾಣಿಕೆ ಮಾಡುವ ಘನಗಾತ್ರದ ವಾಹನಗಳು ಇದೇ ರಸ್ತೆಯ ಮೂಲಕ ಸಂಚಾರ ಮಾಡುತ್ತಿದೆ. ಅಕ್ರಮವಾಗಿ ಬೇರೆ ಬೇರೆ ವಸ್ತುಗಳ ಸಾಗಾಣಿಕೆ ‌ಮಾಡುವ ವಾಹನಗಳು ಅತೀ ವೇಗದಿಂದ ಸಂಚಾರ ಮಾಡುವುದರಿಂದ ಅಪಘಾತಕ್ಕೆ ಕಾರಣವಾಗಬಹುದು ಈ ಬಗ್ಗೆ ಯೂ ಪೋಲೀಸ್ ಇಲಾಖೆ ಹೆಚ್ಚಿನ ಮುತುರ್ವಜಿಯನ್ನು ವಹಿಸಿಕೊಂಡು ಕ್ರಮಕೈಗೊಳ್ಳುಬೇಕು ಎಂದು ಒತ್ತಾಯಿಸಿದ್ದಾರೆ.

ರಸ್ತೆಯ ನಿರ್ಮಾಣ ಕಾರ್ಯ ಜಿಲ್ಲಾ ಪಂಚಾಯತ್ ಮೂಲಕ ಆಗಿದೆಯಾದರೂ ಬಳಿಕದ ನಿರ್ವಹಣೆ ಗ್ರಾ.ಪಂ.ಗೆ ಬರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ದುರಸ್ತಿ ಕಾರ್ಯಕ್ಕೆ ಹಣ ಒದಗಿಸಿಕೊಡುವಂತೆ ಸರಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಸ್ಥಳೀಯ ಗ್ರಾ.ಪಂ.ರಸ್ತೆಯ ಸಮಸ್ಯೆಯ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಅಗತ್ಯವಾಗಿ ಗುಂಡಿಗಳನ್ನು ಮುಚ್ಚುವ ವ್ಯವಸ್ಥೆ ಕಲ್ಪಿಸಬೇಕಾಗಿ ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.

More from the blog

ಬಿಜೆಪಿ ಸಂಘಟನಾ ಶಕ್ತಿ ದ್ವಿಗುಣ: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ

ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲದ ಮಾಣಿ ಮಹಾ ಶಕ್ತಿ ಕೇಂದ್ರದ ಕಾರ್ಯಕಾರಿಣಿ ಸಭೆ ಮತ್ತು ಬಿಜೆಪಿ ಸದಸ್ಯತ್ವ ಅಭಿಯಾನದ ಮಾಹಿತಿ ಸಭೆಯು ಮಾಣಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಶ್ರೀ ಅರವಿಂದ...

ಸರ್ಕಾರಿ ನ್ಯೂ ಇಂಡಿಯಾ ಅಶ್ಯೂರೆನ್ಸ್​ನಲ್ಲಿ ಉದ್ಯೋಗ… ಆಯ್ಕೆ ಆದವರಿಗೆ 80 ಸಾವಿರ ರೂ. ಸಂಬಳ

ಭಾರತ ಸರ್ಕಾರದ ಸಂಸ್ಥೆಯಾದ ನ್ಯೂ ಇಂಡಿಯಾ ಅಶ್ಯೂರೆನ್ಸ್ (ಎನ್​​ಎಐಸಿಎಲ್​) ಇಲಾಖೆ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ನ್ಯೂ ಇಂಡಿಯಾ ಅಶ್ಯೂರೆನ್ಸ್ ಇಲಾಖೆ ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 6 ರಂದು ನೋಟಿಫಿಕೇಶನ್ ರಿಲೀಸ್...

ನಮ್ಮ ಜವನೆರ್ ಸೇವಾ ಟ್ರಸ್ಟ್ (ರಿ.)ರಾಯಿ ಇದರ ನೂತನ ಕಛೇರಿ ಉದ್ಘಾಟನೆ

ನಮ್ಮ ಜವನೆರ್ ಸೇವಾ ಟ್ರಸ್ಟ್ (ರಿ.)ರಾಯಿ ಇದರ ನೂತನ ಕಛೇರಿ ಉದ್ಘಾಟನೆ ಇಂದು ರಾಯಿ ಪಂಚಾಯತ್ ಕಟ್ಟದಲ್ಲಿ ನಡೆಯಿತು ಕಾರ್ಯಕ್ರಮ ದ ಉದ್ಘಾಟನೆಯನ್ನು save life ಚಾರಿಟೇಬಲ್ ಮುಖ್ಯಸ್ಥ ಅರ್ಜುನ್ ಬಂಡರ್ಕರ್ ನೆರೆವರಿಸಿದರು ಕಾರ್ಯಕ್ರಮ...

47ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ

ಕಲ್ಲಡ್ಕ ಶ್ರೀ ಶಾರದ ಸೇವಾ ಪ್ರತಿಷ್ಠಾನದ ಆಶ್ರಯದಲ್ಲಿ ಅಕ್ಟೋಬರ್ 9 ಬುಧವಾರದಿಂದ 12 ಶನಿವಾರದವರೆಗೆ ನಾಲ್ಕು ದಿನ ಜರುಗುವ 47ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು...