ಬಂಟ್ವಾಳ: ಇಲ್ಲಿನ ಎಸ್ .ವಿ .ಎಸ್ ದೇವಳ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ “ಆಟಿಡೊಂಜಿ ದಿನ” ಕಾರ್ಯಕ್ರಮ ವೈಶಿಷ್ಠಪೂರ್ಣವಾಗಿ ಆಚರಿಸಿದ್ದು,ಶಾಲಾ ವಿದ್ಯಾರ್ಥಿಗಳಿಂದ ತುಳು ಸಂಸ್ಕೃತಿ ಮೇಳೈಸಿತು.
ಶಾಲೆಯ 9 ನೇ ತರಗತಿಯ ವಿದ್ಯಾರ್ಥಿನಿ ಸ್ವಸ್ತಿ ಎಸ್.ರೈ ಆಟಿತಿಂಗಳ ಹಿನ್ನಲೆ,ಆಚರಣೆ,ಈ ಸಂದರ್ಭ ತುಳುವರ ಸಂಪ್ರದಾಯ,ಆಚಾರ,ವಿಚಾರವನ್ನು ಎಳೆಎಳೆಯಾಗಿ ವಿವರಿಸಿದಳು.
ಸುಮಾರು ಒಂದು ತಾಸುಗಳ ಕಾಲ ನಿರರ್ಗಳವಾಗಿ ತುಳುವಿನಲ್ಲೇ ಮಾತನಾಡಿದ ವಿದ್ಯಾರ್ಥಿನಿ ಸ್ವಸ್ತಿ ಎಸ್ ರೈ ಮಾತುಗಾರಿಕೆ ವೇದಿಕೆಯಲ್ಲಿದ್ದ ಅತಿಥಿಗಳು,ಶಿಕ್ಷಕ,ಶಿಕ್ಷಕಿಯರು ಕೂಡ ನಿಬ್ಬೆರಗಾದರು.
ತುಳು ಭಾಷೆ ಅತ್ಯಂತ ಶ್ರೇಷ್ಠವಾದುದು,ನಮ್ಮ ಹಿರಿಯರು ಹಾಕಿಕೊಟ್ಟಿರುವ ಕಟ್ಟುಪಾಡು,ಸಂಪ್ರದಾಯ,ತುಳು ಸಂಸ್ಕೃತಿಯನ್ನು ಉಳಿಸುವ ಕೆಲಸ ನಮ್ಮಂತಹ ಪೀಳಿಗೆಯಿಂದಾಗಬೇಕು ಎಂದು ವಿದ್ಯಾರ್ಥಿ ಸ್ವಸ್ತಿ ಎಸ್ ರೈ ಕರೆ ನೀಡಿದಳು.
ಶಾಲಾ ಸಂಚಾಲಕರಾದ ಭಾಮಿ ನಾಗೇಂದ್ರನಾಥ್ ಶೆಣೈ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಆಡಳಿತ ಮಂಡಳಿಯ ಸದಸ್ಯರಾದ ಬಿ ಯೆಚ್ ಗಿರೀಶ್ ಪೈ, ಬಿ ವೆಂಕಟ್ರಮಣ ಶೆಣೈ, ಪಿ ಪ್ರಕಾಶ ಕಿಣಿ, ಭಾಮೀ ಲಕ್ಷ್ಮಣ್ ಶೆಣೈ . ಮುಖ್ಯೋಪಾಧ್ಯಾಯಿನಿ ರೋಶನಿ ತಾರಾ ಡಿ ಸೋಜಾ, ಜಾನಕಿ ರಾಜೇಶ್ ವೇದಿಕೆಯಲ್ಲಿದ್ದರು.
ವೇದಿಕೆಯನ್ನು ತುಳು ಸಂಸ್ಕೃತಿಗೆ ಪೂರಕವಾಗಿ ನಿರ್ಮಿಸಲಾಗಿತ್ತು
ಶಿಕ್ಷಕ- ಶಿಕ್ಷಕಿಯರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು ವಿದ್ಯಾರ್ಥಿಗಳಿಂದ ತುಳುಜಾನಪದ ನೃತ್ಯ,ಆಟಿಕಳಂಜ ಕುಣಿತ,ತುಳು ಸಂಸ್ಖೃತಿಯನ್ನು ಬಿಂಬಿಸುವ ವಿವಿಧ ವಸ್ತುಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.ಮಕ್ಕಳು ತುಳು ಸಂಸ್ಕೃತಿ ಬಟ್ಟೆಯನ್ನು ಧರಿಸಿ ಮಿಂಚಿದರು. ಹಾಗೆಯೇ ಮಕ್ಕಳು ತಮ್ಮ,ತಮ್ಮ ಮನೆಯಲ್ಲಿ ತಯಾರಿಸಿ ತಂದಿದ್ದ ಆಟಿತಿಂಗಳ ವಿವಿಧ ಬಗೆಯ ತಿಂಡಿ,ತಿನಸನ್ನು ಮಕ್ಕಳು, ಅತಿಥಿಗಳು, ಗಣ್ಯರು,ಶಿಕ್ಷಕ,ಶಿಕ್ಷಕಿಯರು,ಸಿಬ್ಬಂದಿಗಳು ಸವಿದರು. ಶನಿವಾರ ಎಸ್ .ವಿ. ಎಸ್ ದೇವಳ ಆಂಗ್ಲ ಮಾಧ್ಯಮ ಶಾಲೆ ವಠಾರದಲ್ಲಿ ವಿದ್ಯಾರ್ಥಿ ಸಮೂಹದಿಂದ ತುಳುಸಂಸ್ಕೃತಿಯ ಅನಾವರಣಗೊಂಡಿತು.
10 ನೇತರಗತಿಯ ವಿದ್ಯಾರ್ಥಿನಿ ದೀಕ್ಷಾ ಸ್ವಾಗತಿಸಿ,
ಶಹನಾ ವಂದಿಸಿದಳು ,ಕೃಪಾ
ಕಾರ್ಯಕ್ರಮ ನಿರೂಪಿಸಿದಳು.