Monday, August 12, 2024

ತಹಶೀಲ್ದಾರ್ ಅರ್ಚನಾ ಭಟ್ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕುಂದುಕೊರತೆ ಸಭೆ

ಬಂಟ್ವಾಳ: ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡದ ಕುಂದುಕೊರತೆ ಸಭೆ ಬಂಟ್ವಾಳ ತಹಶಿಲ್ದಾರ್ ಅರ್ಚನಾ ಭಟ್ ಅವರ ಅಧ್ಯಕ್ಷತೆಯಲ್ಲಿ ಅ.12 ರಂದು ಸೋಮವಾರ ಬಿಸಿರೋಡಿನ ಡಾ|ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಮಂಗಳೂರಿನ ಮಹಾನಗರಪಾಲಿಕೆ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಉಚಿತವಾಗಿ ಕುಡಿಯುವ ನೀರು ನೀಡಲಾಗುತ್ತಿದೆ , ಆದರೆ ಮಂಗಳೂರಿಗೆ ನೀರು ಒದಗಿಸುವ ನಮಗೆ ಉಚಿತವಾಗಿ ನೀರು ಕೊಡುತ್ತಿಲ್ಲ,ಯಾಕೆ ಎಂದು ವಿಶ್ವನಾಥ ಚೆಂಡ್ತಿಮಾರ್ ಕೇಳಿದರು. ಮಹಾನಗರ ಪಾಲಿಕೆ ವ್ಯಾಪ್ತಿ ಮತ್ತು ಗ್ರಾಮಪಂಚಾಯತ್ ಮಟ್ಟದ ನಿಯಮಗಳು ವ್ಯತ್ಯಾಸವಿದೆ,ಸರಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸವಾಗಿದೆ ಎಂದು ತಿಳಿಸಿದರು. ಬಂಟ್ವಾಳ ನಗರೋತ್ತಾನ ಕ್ರಿಯಾ ಯೋಜನೆಯ ಬಗ್ಗೆ ಪುರಸಭೆ ಸ್ಪಷ್ಟವಾದ ಮಾಹಿತಿ ನೀಡುತ್ತಿಲ್ಲ,ಪ್ರತಿ ಸಭೆಯಲ್ಲಿ ಕ್ರೀಯಾ ಯೋಜನೆಯ ತಯಾರಿಸಿದ್ದೇವೆ, ಜಿಲ್ಲಾ ಯೋಜನಾ ಕಚೇರಿಗೆ ಕೈ ತೋರಿಸುವುದು ಕಂಡು ಬಂದಿದ್ದು ಇದು ನ್ಯಾಯನಾ? ಎಂದು ಪ್ರಶ್ನಿಸಿದರು.

 

ಪ್ರತಿ ಮೂರು ತಿಂಗಳಿಗೊಮ್ಮೆ ಕುಂದುಕೊರತೆಗಳ ಬಗ್ಗೆ ಸಭೆ ಕರೆಯಬೇಕು, ಮತ್ತು ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಸಭೆಯಲ್ಲಿ ಹಾಜರಿರಬೇಕು ಎಂದು ಗಂಗಾಧರ ಅವರು ಹಿಂದಿನ ಸಭೆಯಲ್ಲಿ ತಿಳಿಸಿದ್ದರು.ಆದರೆ ಎರಡು ಮನವಿಗೆ ಸ್ಪಂದಿಸಿದ ಅಧಿಕಾರಿಗಳ ವಿರುದ್ದ ಗಂಗಾಧರ ಅವರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಪುರಸಭೆ ಇಲಾಖೆ ನಮ್ಮ ಅಭಿವೃದ್ಧಿಗೆ ನಯಪೈಸೆ ಅನುದಾನ ನೀಡಿದೆ ನಮ್ಮನ್ನು ಕತ್ತಲಲ್ಲಿ ಇಟ್ಟಿದೆ, ಸಭೆಯಲ್ಲಿ ನಡೆಯುವ ನಿರ್ಣಯಗಳು ಕೇವಲ ದಾಖಲಾತಿ ಮಾತ್ರವೇ ಹೊರತು ಕಾರ್ಯರೂಪಕ್ಕೆ ತರಲು ಅಧಿಕಾರಿಗಳಿಗೆ ಮನಸ್ಸಿಲ್ಲ ಎಂದು ಆರೋಪ ಮಾಡಿದರು.

 

ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಹೊನ್ಮಪ್ಪ‌ ಕುಂದರ್ ಆರೋಪ ಮಾಡಿದರು. ಸ್ಥಳೀಯ ಪ್ರತಿಭೆಗಳಿಗೆ ನಿಯಮಾನುಸಾರವಾಗಿ ನೇಮಕಾತಿ ಪ್ರಕ್ರಿಯೆ ಮಾಡದೆ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಕ್ರಮ ವ್ಯವಸ್ಥೆಯ ಮೂಲಕ ನೇಮಕಾತಿ ಮಾಡಿದ್ದಾರೆ ಇದರ ವಿರುದ್ದ ಡಿ.ಡಿ.ಪಿ.ಐ.ಗೆ ಪತ್ರ ಬರೆಯುತ್ತೇವೆ ಎಂದು ಅವರು ತಿಳಿಸಿದರು.

ಅಡ್ಯನಡ್ಕ ಸಂಚಾರಿ ಆಸ್ಪತ್ರೆಗೆ ವಾಹನವಿಲ್ಲದೆ ಅಲ್ಲಿನ ವೈದ್ಯರು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲವಾದ್ದರಿಂದ ಗುಡ್ಡಗಾಡು ಪ್ರದೇಶದ ನಮ್ಮ ಸಮುದಾಯಕ್ಕೆ ಸರಿಯಾದ ಸಮಯಕ್ಕೆ ಔಷಧಿ ಸಿಗದೆ ಅನ್ಯಾಯವಾಗಿದೆ ಎಂದು ತಿಳಿಸಿದರು. ಹಳೆಯ ವಾಹನಕ್ಕೆ 15 ವರ್ಷವಾದ ಹಿನ್ನೆಲೆಯಲ್ಲಿ ವಾಹನವನ್ನು ಗುಜರಿಗೆ ಸರಕಾರದ ನಿಯಮದಂತೆ ನೀಡಿದ್ದಾರೆ. ಆದರೆ ಬದಲಾಗಿ ಇಲಾಖೆ ಹೊಸ ವಾಹನವನ್ನು ನೀಡಿಲ್ಲ ಯಾಕೆ ಎಂದು ಅಶೋಕ್ ಪ್ರಶ್ನೆ ಮಾಡಿದರು.

ಸರಕಾರಿ ಶಾಲೆಗಳ ಮೈದಾನದಲ್ಲಿ ಖಾಸಗಿ ಕಾರ್ಯಕ್ರಮಗಳಿಗೆ ಯಾಕೆ ನೀಡಬೇಕು ,ಸರಕಾರದ ಸ್ಪಷ್ಟವಾದ ಅದೇಶವಿದ್ದರು ಇಲ್ಲಿನ ಬಿ.ಇ.ಒ.ಯಾಕೆ ನೀಡುತ್ತಿದ್ದಾರೆ. ಬಡವರ ಮಕ್ಕಳು ಹೋಗುವ ಸರಕಾರಿ ಶಾಲೆಗಳ ಮೈದಾನದಲ್ಲಿ ಖಾಸಗಿ ಕಾರ್ಯಕ್ರಮಗಳು ನಡೆಯುವುದರಿಂದ ಮಕ್ಕಳ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುವ ಸಾಧ್ಯಗಳು ಇವೆ.ಅದ್ದರಿಂದ ಈ ಬಗ್ಗೆ ಕಠಿಣವಾದ ನಿರ್ಣಯವನ್ನು ತೆಗೆದುಕೊಳ್ಳಲು ಮನವಿ ಮಾಡಿದರು.

ಮಂಚಿಕಜೆ ಎಂಬಲ್ಲಿ ಗಾಂಜಾ ಸೇವನೆ ಮಾಡಿ ಯುವಕರು ಸಾರ್ವಜನಿಕವಾಗಿ ತೊಂದರೆ ನೀಡುವುದು ಜಾಸ್ತಿಯಾಗಿದ್ದು,ಈ ಬಗ್ಗೆ ಪೋಲೀಸ್ ಇಲಾಖೆ ಕ್ರಮವಹಿಸುವಂತೆ ತಿಳಿಸಿದರು.

ಭಜನೆ, ಯೂಟ್ಯೂಬ್ ಚಾನೆಲ್ ಮತ್ತು ಟ್ಯಾಬ್ಲೋ ಗಳಲ್ಲಿ ಕೀಳು ಮಟ್ಟದ ಪದಗಳ ಬಳಕೆ ಮಾಡದಂತೆ ಕ್ರಮವಹಿಸುವಂತೆ ಮನವಿ ಮಾಡಿದರು

ಅಂಬೇಡ್ಕರ್ ಭವನ ನಿರ್ಮಾಣವಾದ ಬಳಿಕ ಇದೇ ಮೊದಲ ಬಾರಿಗೆ ಎಂಬಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದುಕೊರತೆಗಳ ಸಭೆ ಭವನದಲ್ಲಿ ನಡೆಯಿತು.

ಈ ಹಿಂದೆ ತಾಲೂಕು ಪಂಚಾಯತ್ ನ ಎಸ್‌.ಜಿ.ಎಸ್.ವೈ ಸಭಾಂಗಣದಲ್ಲಿ ನಡೆಯುತ್ತಿತ್ತು.

ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಜಯಶ್ರೀ,

ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರ ಮನೀಶ್,ಬಂಟ್ವಾಳ ನಗರ ಪೋಲೀಸ್ ‌ಇನ್ಸ್ ಪೆಕ್ಟರ್ ಆನಂತಪದ್ಮನಾಭ ಉಪಸ್ಥಿತರಿದ್ದರು.

More from the blog

ಧ್ವನಿ ಬೆಳಕು ಸಂಯೋಜಕರ ಒಕ್ಕೂಟ (ರಿ.) ಬಂಟ್ವಾಳ ತಾಲೂಕು ಇದರ 8ನೇ ಮಹಾಸಭೆ ಮತ್ತು ರಕ್ತದಾನ ಶಿಬಿರ

ಧ್ವನಿ ಬೆಳಕು ಸಂಯೋಜಕರ ಒಕ್ಕೂಟ ರಿ. ಬಂಟ್ವಾಳ ತಾಲೂಕು ಇದರ 8ನೇ ಮಹಾಸಭೆ ಮತ್ತು ರಕ್ತದಾನ ಶಿಬಿರ ಇಂದು ಬೆಳಗ್ಗೆ ಲಯನ್ಸ್ ಕ್ಲಬ್ ಬಿ. ಸಿ ರೋಡ್ ನಲ್ಲಿ ನಡೆಯಿತು. ಇದರಲ್ಲಿ K.M.C ಆಸ್ಪತ್ರೆ...

ಕಾರು- ಆಟೋರಿಕ್ಷಾ ಅಪಘಾತದಲ್ಲಿ ಮಹಿಳೆ ಮೃತಪಟ್ಟ ಪ್ರಕರಣ : ಕಾರು ಚಾಲಕನಿಗೆ ಶಿಕ್ಷೆ ಪ್ರಕಟ

ಬೆಳ್ತಂಗಡಿ: ಕಾರು ಹಾಗೂ ಆಟೋರಿಕ್ಷಾದ ನಡುವೆ ಸಂಭವಿಸಿದ ಅಪಘಾತದಲ್ಲಿ ಆಟೋದಲ್ಲಿದ್ದ ಮಹಿಳೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕನಿಗೆ ಶಿಕ್ಷೆ ಪ್ರಕಟವಾಗಿದೆ. 11-9-2016 ರಂದು ಸಂಜೆ 5.00 ಗಂಟೆಗೆ ಕಾರು ಕೆಎ.21 ಎನ್‌.7021 ನಂ.ನ...

ವಿದ್ಯಾಭಾರತಿ ರಾಜ್ಯಮಟ್ಟದ ಕರಾಟೆ ಟೂರ್ನಮೆಂಟ್ ನಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಪ್ತಿ ಶೆಟ್ಟಿ ಪ್ರಥಮ

ಬೆಂಗಳೂರಿನಲ್ಲಿ‌ ನಡೆದ ವಿದ್ಯಾಭಾರತಿ ರಾಜ್ಯಮಟ್ಟದ ಕರಾಟೆ ಟೂರ್ನಮೆಂಟ್ ನಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಪ್ತಿ ಶೆಟ್ಟಿ ಪ್ರಥಮ ಸ್ಥಾನಗಳಿಸಿ ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾಳೆ. ಆಶಾ ಮತ್ತು ಗಿರೀಶ್ ಶೆಟ್ಟಿ ಇವರ...

ಕಂಟೈನರ್‌ ಲಾರಿ ಮಗುಚಿ ಬಿದ್ದು ಕಾರು ಅಪ್ಪಚ್ಚಿ

ಉಪ್ಪಿನಂಗಡಿ: ಕಾರಿನ ಮೇಲೆ ಕಂಟೈನರ್ ಲಾರಿಯೊಂದು ಮಗುಚಿ ಬಿದ್ದು ಅಪ್ಪಚ್ಚಿಯಾಗಿದ್ದು, ಪ್ರಯಾಣಿಕರು ಪವಾಡ ಸದೃಶವಾಗಿ ಪಾರಾದ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಬರ್ಚಿನಹಳ್ಳದಲ್ಲಿ ನಡೆದಿದೆ. ದಾವಣಗೆರೆ ಮೂಲದವರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ...