ಬಂಟ್ವಾಳ: ಬಾಂಗ್ಲಾ ದೇಶದಲ್ಲಿ ನಡೆಯುವ ಹಿಂದೂಗಳ ನರಮೇಧವನ್ನು ಖಂಡಿಸಿ ಹಿಂದೂ ಹಿತರಕ್ಷಣೆ ಸಮಿತಿ ವತಿಯಿಂದ ಬಿಸಿರೋಡಿನ ಬಸ್ ನಿಲ್ದಾಣದ ಸಮೀಪ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಮಾನವ ಸರಪಳಿಯ ನಿರ್ಮಿಸಿ ಪ್ರತಿಭಟನೆ ನಡೆಸಿದರು.
ಆರ್.ಎಸ್.ಎಸ್.ನ ಹಿರಿಯ ಮುಖಂಡ ಡಾ| ಪ್ರಭಾಕರ್ ಭಟ್ ಕಲ್ಲಡ್ಕಮಾತನಾಡಿ, ಹಿಂದೂಗಳನ್ನು ಉದ್ದೇಶಪೂರ್ವಕವಾಗಿ ಹತ್ಯೆ ಮಾಡಲಾಗುತ್ತಿದೆ, ನಾವು ಅವರ ಬೆಂಬಲವಾಗಿ ನಿಲ್ಲಬೇಕು ಎಂದು ಅವರು ತಿಳಿಸಿದರು. ಅಲ್ಲಿ ಬಾಂಗ್ಲಾ ಹಿಂಸಾತ್ಮಕ ಕೃತ್ಯ ಕೇವಲ ಹಿಂದೂಗಳ ಮೇಲಿನ ದ್ವೇಷದಿಂದ ಎಂಬುದು ಇದೀಗ ಬಹಿರಂಗಗೊಂಡಿದೆ. ಅಲ್ಲಿನ ಹಿಂದೂಗಳು ಮತಾಂತರಗೊಳ್ಳುವ ತನಕ ಹಿಂಸೆನಯನ್ನು ನೀಡುತ್ತಿದ್ದಾರೆ. ಅಲ್ಪಸಂಖ್ಯಾತ ರಾಷ್ಟ್ರವಾಗಿ ಮಾಡುವ ಸಂಚನ್ನು ಹೊಂದಿರುವುದು ಸ್ಪಷ್ಟವಾಗಿದೆ. ತುರ್ತಪರಿಸ್ಥಿತಿ ಸಂದರ್ಭದಲ್ಲಿ ಈ ಜಿಲ್ಲೆಯಲ್ಲಿಯೂ ಹಿಂದೂಗಳ ಮೇಲೆ ಆಕ್ರಮಣಗಳು ನಡೆದಿವೆ ಎಂಬುದನ್ನು ನೆನಪಿಸಿಕೊಂಡ ಅವರು ಇವತ್ತಿನ ಪರಿಸ್ಥಿತಿಯಲ್ಲಿ ಭಯೋತ್ಪಾದಕರಿಗೆ ಸಹಕಾರ ನೀಡುವ ಅನೇಕ ಜನಪ್ರತಿನಿಧಿಗಳು ನಮ್ಮ ಜಿಲ್ಲೆಯಲ್ಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂ ಸಮಾಜ ಜಾಗೃತರಾಗಬೇಕಾಗಿದೆ,ಹಿಂದೂಗಳ ಸಂಖ್ಯೆಯನ್ನು ಜಾಸ್ತಿಮಾಡಿಕೊಂಡು ಸಂಘಟಿತರಾಗಬೇಕಾಗಿದೆ.
ಹಿಂದೂಗಳ ಮೇಲೆ ಅಕ್ರಮಣಗಳು ನಡೆದಾಗ ಒಂದಾಗಿ ಪ್ರತಿಭಟಿಸುವ ಬಗ್ಗೆ ಶಪಥ ಮಾಡಬೇಕು ಎಂದು ತಿಳಿಸಿದರು. ಜಿಲ್ಲೆಯಲ್ಲಿ ಕಾನೂನುಬಾಹಿರವಾಗಿ ಮಾಡುವ ಎಲ್ಲಾ ಚಟುವಟಿಕೆಗಳಿಗೆ ಸರಕಾರ ಸಹಕಾರ ನೀಡುತ್ತಿದ್ದು, ಮತಕ್ಕೆ ಬೇಕಾಗಿ ಬಹುಸಂಖ್ಯಾತ ಹಿಂದೂಗಳಿಗೆ ಅನ್ಯಾಯ ಮಾಡುವುದು ಹಿಂದೂಗಳಿಗೆ ಅರ್ಥವಾಗುತ್ತದೆ ಎಂದು ತಿಳಿಸಿದರು. ಹಿಂದೂಗಳಿಗೆ ಮಾಡುವ ಅನ್ಯಾಯ ನಿಲ್ಲಿಸಿ, ಸ್ವಂತ ಕಾಲ ಮೇಲೆ ನಿಲ್ಲುವ ಅವಕಾಶ ನೀಡಿ ಎಂದು ಅವರು ತಿಳಿಸಿದರು.
ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಸಹಿತ ಪರಿವಾರ ಸಂಘಟನೆಯ ಎಲ್ಲಾ ಪ್ರಮುಖರು ಬಿಜೆಪಿ ಪ್ರಮುಖರು ಹಾಜರಿದ್ದರು.