Tuesday, August 13, 2024

ಪಂಚಾಯತ್ ರಾಜ್ ನೀತಿ: ಉನ್ನತ ಮಟ್ಟದ ಅಧಿಕಾರಿಗಳಿಂದ ತಪ್ಪು ನಡೆ: ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆಯಿಂದ ಸಚಿವರು ಭೇಟಿಗೆ ಸಿದ್ಧತೆ

ವಿಟ್ಲ: ಪ್ರತೀ ಗ್ರಾಮ ಪಂಚಾಯಿತಿಗಳಿಗೆ ಸರ್ಕಾರ ಸಂವಿಧಾನ ಬದ್ಧ ಅಧಿಕಾರವನ್ನು ನೀಡಿದ್ದು, ಕೆಲವು ವ್ಯವಸ್ಥೆಯಲ್ಲಿ ಐ.ಎ.ಎಸ್. ಅಧಿಕಾರಿಗಳು ತಪ್ಪು ದಾರಿಯಲ್ಲಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದಾರೆ. ಚುನಾಯಿತ ಪ್ರತಿನಿಧಿಗಳ ವಿರೋಧವಿದ್ದರೂ, ಹಿರಿಯ ಅಧಿಕಾರಿಗಳ ಒತ್ತಡಕ್ಕೆ ತಳಮಟ್ಟದ ಅಧಿಕಾರಿಗಳು ತಪ್ಪು ದಾಖಲೆಗಳನ್ನು ಮಾಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ವಿಶೇಷ ನಿಯೋಗ ಸಚಿವ ಪ್ರಿಯಾಂಕ ಖರ್ಗೆ ಅವರನ್ನು ಭೇಟಿ ಮಾಡಿ ಆದೇಶದ ಸಾಧಕ ಬಾಧಕದ ಬಗ್ಗೆ ಚರ್ಚೆ ನಡೆಸಲಿದ್ದೇವೆ ಎಂದು ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಹೇಳಿದರು.

ಅವರು ವಿಟ್ಲದಲ್ಲಿ ಸುದ್ದಿಗೋಷ್ಠಿ ನಡೆಸಿ ಹಲವಾರು ವಿಚಾರಗಳ ಬಗ್ಗೆ ವಿವರ ನೀಡಿದರು.

ಸರ್ಕಾರದ ಮಟ್ಟದ ಹಾಗೂ ಜಿಲ್ಲಾ ಮಟ್ಟದ ಐ.ಎ.ಎಸ್. ಅಧಿಕಾರಿಗಳು ಪಂಚಾಯಿತಿಗಳಿಗೆ ಸ್ವಂತದ ಹಣವನ್ನು ನೀಡಿ ಎಂಬ ಆದೇಶವನ್ನು ಸುತ್ತೋಲೆಗಳ ಮೂಲಕ ನೀಡುತ್ತಿದ್ದಾರೆ. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸಂಘಟನೆ ಕೆಲಸ ಮಾಡುತ್ತಿದ್ದು, ಲೋಪ ದೋಷಗಳನ್ನು ಗುರುತಿಸಿ ಸರ್ಕಾರದ ಗಮನ ಸೆಳೆಯುವ ಕೆಲಸವನ್ನು ಮಾಡಲಾಗುತ್ತಿದೆ. ಬಿಜೆಪಿ ಸರ್ಕಾರ ಇರುವ ಸಂದರ್ಭದಲ್ಲಿ ನಿಯೋಗ ಹೋಗಿ ಸರ್ಕಾರದ ಗಮನ ಸೆಳೆದು ಪರಿಹಾರ ಕಂಡುಕೊಳ್ಳಲಾಗಿದೆ. ಇತ್ತೀಚೆಗೆ ಗ್ರಾಮೀಣಾಭಿವೃದ್ಧಿ ಸಚಿವರನ್ನು ಮಂಗಳೂರಿಗೆ ಕರೆಸಿ ಸಮಾವೇಶ ನಡೆಸಿ ಹಲವಾರು ಬೇಡಿಕೆಯನ್ನು ಇಟ್ಟಿದ್ದು, ಅದರಲ್ಲಿ ಗ್ರಾಮ ಪಂಚಾಯಿತಿಗೆ ೨೬ ಇಲಾಖೆ ಹಸ್ತಾಂತರ ಮಾಡುವ ಕೆಲಸ ಪ್ರಗತಿಯಲ್ಲಿದೆ. ಪಂಚತಂತ್ರ ೨ ಅಳವಡಿಸುವ ಸಂದರ್ಭ ಕಟ್ಟಡ ಸಂಖ್ಯೆಯ ಬಿಟ್ಟು ಹೋಗಿರುವುದನ್ನು ಸೇರ್ಪಡೆಗೆ ಅವಕಾಶ ನೀಡಿ ಸದ್ಯ ಗ್ರಾಮ ಪಂಚಾಯಿತಿ ವ್ಯವಸ್ಥೆಯಲ್ಲಿ ಜಾರಿಯಲ್ಲಿದೆ. ವಸತಿ ಯೋಜನೆಗಳು ಕೆಲವು ಹಂತದಲ್ಲಿ ನಿಂತು ಹೋಗಿದ್ದು, ಅದಕ್ಕೆ ಮತ್ತೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

೯/೧೧ ಇದ್ದ ಸಮಸ್ಯೆಯ ಬಗ್ಗೆ ಧ್ವನಿಯೆತ್ತಿ, ಸ್ಥಳೀಯ ಸಂಸ್ಥೆ ಪ್ರತಿನಿಧಿ ಮಂಜುನಾಥ ಭಂಡಾರಿ, ಸಭಾಧ್ಯಕ್ಷ ಯು.ಟಿ. ಖಾದರ್, ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಶಾಸಕ ಅಶೋಕ್ ಕುಮಾರ್ ರೈ ಗಮನಕ್ಕೆ ತಂದು, ವಿಧಾನ ಪರಿಷತ್, ವಿಧಾನ ಸಭೆಯಲ್ಲಿ ಚರ್ಚೆಯನ್ನು ನಡೆಸಿ, ವಿಧಾನ ಸಭಾ ಅಧ್ಯಕ್ಷರು ಅಗತ್ಯ ವ್ಯವಸ್ಥೆಯನ್ನು ಮಾಡಿದ್ದಾರೆ. ಸದ್ಯ ನಗರ ಸಭೆಯ ತಾಲೂಕು ವ್ಯಾಪ್ತಿಗೆ ಬರುವ ಕೆಲಸವಾಗಿದೆಯಾದರೂ, ಇನ್ನೂ ಸರಳೀಕರಣವಾಗಿ ಪಂಚಾಯಿತಿ ವ್ಯಾಪ್ತಿಗೆ ಬರಬೇಕೆಂಬ ಬೇಡಿಕೆ ಜನರಿಂದ ಇದೆ. ಉಡುಪಿಯಲ್ಲಿ ಜಿಲ್ಲಾ ಪಂಚಾಯಿತಿಯಿಂದ ಮಾನ್ಯವಾದ ಮೂರು ಮಂದಿ ಆರ್ಕಿಟೆಕ್ ಗಳು ನಕ್ಷೆ ಮಾಡಿ ಅದಕ್ಕೆ ಅಪ್ರೂವಲ್ ಪಡೆದರೆ, ೨೫ ಸೆಂಟ್ಸ್ ಗ್ರಾಮ ಪಂಚಾಯಿತಿ ಹಾಗೂ ೧ಎಕ್ರೆ ವರೆಗೆ ತಾಲೂಕು ಪಂಚಾಯಿತಿಗೆ ಹೋಗುವ ವ್ಯವಸ್ಥೆಯಿತ್ತು. ಸರ್ಕಾರ ಈ ಬಗ್ಗೆ ಪುನರ್ ವಿಮರ್ಶೆ ಮಾಡಿ ಅದೇ ಮಾದರಿಯನ್ನು ಅಳವಡಿಸಿ ಕೊಂಡರೆ ಜನರಿಗೆ ಸುಲಭವಾಗಲಿದೆ ಎಂದು ತಿಳಿಸಿದರು.

ಹಣಕಾಸಿನ ದುರುಪಯೋಗವಾದರೆ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಹೊಣೆಗಾರರು ಎಂಬ ಆದೇಶವನ್ನು ಮಾಡಿದ್ದು, ಇದರಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಗೊಂದಲಗಳಿದೆ. ಸದ್ಯದ ವ್ಯವಸ್ಥೆಯಲ್ಲಿ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಶಿಕ್ಷಣದ ಮಿತಿ ಇರುವುದಿಲ್ಲ. ಎಲ್ಲವೂ ಆನ್ ಲೈನ್ ವ್ಯವಸ್ಥೆಯಿದ್ದು, ಹೆಚ್ಚಿನವರಿಗೆ ಕಂಪ್ಯೂಟರ್ ಜ್ಞಾನವಿರುವುದಿಲ್ಲ. ಅಧಿಕಾರಿಗಳು ತಯಾರಿಸಿದ ದಾಖಲೆಗಳಿಗೆ ತಂಬ್ ನೀಡುವ ಕೆಲಸವನ್ನು ಅಧ್ಯಕ್ಷರು ಮಾಡಬೇಕಾಗಿದೆ. ಸದಸ್ಯರು ಯಾವುದೇ ಪಾವತಿ ವ್ಯವಹಾರದಲ್ಲಿ ಬಾಗಿಗಳಾಗಿರುವುದಿಲ್ಲ. ಹೀಗಿರುವಾಗ ಅವರನ್ನು ಹೊಣೆ ಮಾಡುವುದರಿಂದ ನಿರಪರಾಧಿಗಳು ಅಪರಾಧಿಗಳಾಗುವ ಸಾಧ್ಯತೆ ಇದ್ದು, ನಡವಳಿಯನ್ನು ವಿಮರ್ಷೆ ಮಾಡುವ ಅವಶ್ಯಕತೆ ಇದೆ ಎಂದು ತಿಳಿಸಿದರು.

ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಪೂಜಾರಿ ಸಣ್ಣಗುತ್ತು, ಪಾಣೆಮಂಗಳೂರು ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ಸಂದೇಶ್ ಬಿಕ್ನಾಜೆ, ವಿಟ್ಲ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ಹಸೈನಾರ್ ನೆಲ್ಲಿಗುಡ್ಡೆ ಉಪಸ್ಥಿತರಿದ್ದರು.

More from the blog

400 ಕೆವಿ ವಿದ್ಯುತ್ ಪ್ರಸರಣ ಮಾರ್ಗ ನಿರ್ಮಾಣ ಗುತ್ತಿಗೆ ಕಂಪೆನಿಯಿಂದ ಸುಳ್ಳು ಸುದ್ದಿ – ರೈತ ಸಂಘ ಹಸಿರು ಸೇನೆ ಆರೋಪ

ವಿಟ್ಲ: ರೈತರ ಬದುಕಿಗೆ ಕಂಟಕ ಪ್ರಾಯವಾಗಿರುವ ೪೦೦ಕೆವಿ ವಿದ್ಯುತ್ ಪ್ರಸರಣ ಮಾರ್ಗಕ್ಕೆ ಕಳೆದ ನಾಲ್ಕು ವರ್ಷಗಳಿಂದ ಕೃಷಿಕರಿಂದ ಪ್ರಬಲ ವಿರೋಧ ವ್ಯಕ್ತವಾಗುತ್ತಿದೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಲ್ಲಿವರೆಗೆ ಒಂದೇ ಒಂದು...

ಬಂಟ್ವಾಳ ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿ ವೃದ್ಧಿ ಸಂಘ (ರಿ) ಇದರ ಮಹಾಸಭೆ 

ಬಂಟ್ವಾಳ ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ 2023.24 ನೇ ಸಾಲಿನ ಮಹಾಸಭೆ ಕುಲಾಲ ಸಮುದಾಯ ಭವನ ಪೊಸಳ್ಳಿಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸಮಾಜದ ಮುಖಂಡರಾದ ಪ್ರಸಿದ್ಧ ವಕೀಲರು ಮಂಗಳೂರು ವಿಶ್ವ ವಿದ್ಯಾನಿಲಯದ ಸಿಂಡಿಕೇಟ್...

ಹಿಂ.ಜಾ. ವೇದಿಕೆ ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ವಾಹನ ಜಾಥಾ ಮತ್ತು ಸಭಾ ಕಾರ್ಯಕ್ರಮ

ಕಲ್ಲಡ್ಕ: ಹಿಂದೂ ಜಾಗರಣ ವೇದಿಕೆ ಕಲ್ಲಡ್ಕದಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ವಾಹನ ಜಾಥಾ ಮತ್ತು ಸಭಾ ಕಾರ್ಯಕ್ರಮ ಆ.11 ನೇ ಆದಿತ್ಯವಾರ ನಡೆಯಿತು. ಮಧ್ಯಾಹ್ನ ಮಾಣಿ ಶ್ರೀ ರಾಜರಾಜೇಶ್ವರಿ ಭಜನಾ ಮಂದಿರ,...

ಬಾಂಗ್ಲಾದಲ್ಲಿ ನಡೆಯುವ ಹಿಂದೂಗಳ ನರಮೇಧವನ್ನು ಖಂಡಿಸಿ, ಹಿಂದೂ ಹಿತರಕ್ಷಣಾ ಸಮಿತಿಯಿಂದ ಬಿಸಿರೋಡಿನಲ್ಲಿ ಪ್ರತಿಭಟನೆ

ಬಂಟ್ವಾಳ: ಬಾಂಗ್ಲಾ ದೇಶದಲ್ಲಿ ನಡೆಯುವ ಹಿಂದೂಗಳ ನರಮೇಧವನ್ನು ಖಂಡಿಸಿ ಹಿಂದೂ ಹಿತರಕ್ಷಣೆ ಸಮಿತಿ ವತಿಯಿಂದ ಬಿಸಿರೋಡಿನ ಬಸ್ ನಿಲ್ದಾಣದ ಸಮೀಪ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಮಾನವ ಸರಪಳಿಯ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಆರ್.ಎಸ್.ಎಸ್.ನ ಹಿರಿಯ...