Monday, August 12, 2024

ಮೆಲ್ಕಾರಿನಲ್ಲಿ ಕೆ.ಎನ್.ಆರ್.ಸಿ.ಕಂಪೆನಿಯ ವಾಹನಗಳನ್ನು ಸಾರ್ವಜನಿಕರು ತಡೆದು ಪ್ರತಿಭಟನೆ

ಬಂಟ್ವಾಳ: ಮಳೆ ಬಂದರೆ ಕೆಸರು, ಮಳೆ ನಿಂತರೆ ಧೂಳು…. ಇದು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭವಾದಂದಿನಿಂದ ನಡೆದು ಬಂದ ಹಾದಿ…ಇನ್ನೂ ಕಾಮಗಾರಿ ಮುಗಿಯುವವರೆಗೂ ತಪ್ಪಿದ್ದಲ್ಲ.
ಗುತ್ತಿಗೆ ವಹಿಸಿಕೊಂಡ ಕೆ.ಎನ್.ಆರ್.ಸಿ.ಕಂಪೆನಿ ಮಾತು ತಪ್ಪಿದರೂ ಇಲ್ಲಿನ ಸಮಸ್ಯೆ ಮಾತ್ರ ತಪ್ಪಿಲ್ಲ…ನಿತ್ಯ ನಿರಂತರವಾಗಿ ಕಳೆದ ಅನೇಕ ವರ್ಷಗಳಿಂದ ಸಮಸ್ಯೆಯಿಂದ ಬಳಲಿ ರೊಚ್ಚಿಗೆದ್ದ ಸಾರ್ವಜನಿಕರು ಕಂಪೆನಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿ ಎಚ್ಚರಿಕೆ ನೀಡಿದ ಘಟನೆ ಅ.12 ರಂದು ಸೋಮವಾರ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮೆಲ್ಕಾರಿನಲ್ಲಿ ನಡೆದಿದೆ.


ಮಂಗಳೂರು – ಬೆಂಗಳೂರು ಜೊತೆಗೆ ಕೋಣಾಜೆ ಯುನಿವರ್ಸಿಟಿ ಸಂಪರ್ಕದ ಕೇಂದ್ರ ಸ್ಥಾನವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮೆಲ್ಕಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಅವಾಂತರದಿಂದ ನಿತ್ಯ ಗೋಳು ತಪ್ಪಿದ್ದಲ್ಲ. ಮಳೆ ಬಂದರೆ ಕೆಸರು ತುಂಬಿದರೆ, ಮಳೆ ನಿಂತರೆ ದೂಳು ಸಮಸ್ಯೆ . ಇದಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಕಂಪೆನಿ ವಿಫಲವಾದ ಹಿನ್ನೆಲೆಯಲ್ಲಿ ,ತಾಳ್ಮೆಯನ್ನು ಕಳೆದಕೊಂಡ ಇಲ್ಲಿನ ವ್ಯಾಪಾರಸ್ಥರು, ಅಂಗಡಿ ಮಾಲಕರು, ಮತ್ತು ಸಾರ್ವಜನಿಕರು ಒಮ್ಮತದಿಂದ ಕಂಪೆನಿಯ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ.
ಮಳೆಗಾಲದಲ್ಲಿ ಹೊಂಡಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ಸಂಚಾರ ಮಾಡುವಂತಿಲ್ಲ ,ಇದು ಒಂದು ಭಾಗವಾದರೆ, ಇಲ್ಲಿನ ಅಂಗಡಿಗಳಿಗೆ , ಪಾದಾಚಾರಿಗಳಿಗೆ ಹಾಗೂ ಬೈಕ್ ಸವಾರರ ಮೇಲೆ ಗುಂಡಿಯ ಕೆಸರು ನೀರು ಎರಚಿ ಕೆಸರುನೀರಿನ ಸ್ನಾನ ಮಾಡಿಸಿದ ಕಂಪೆನಿಯ ಬಗ್ಗೆ ಜನ ಆಕ್ರೋಶ ವ್ಯಕ್ತಪಡಿಸಿದರು. ಇದೀಗ ಎರಡು ದಿನಗಳಿಂದ ಮಳೆ ನಿಂತ ಪರಿಣಾಮ ಮಣ್ಣು ಮಿಶ್ರಿತ ರಸ್ತೆಯಲ್ಲಿ ದೂಳು ಏಳುತ್ತಿದ್ದು ಅಂಗಡಿ ಮಾಲಕರು ವ್ಯಾಪಾರ ಮಾಡುವಂತಿಲ್ಲ,ಹತ್ತಿರದ ಮನೆಯವರು ವಾಸ ಮಾಡುವಂತಿಲ್ಲ. ನಿತ್ಯ ದೂಳಿನಿಂದ ಸ್ಥಳೀಯ ನಿವಾಸಿಗಳು ಕೆಮ್ಮು ಸಹಿತ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗುವ ಸಾಧ್ಯತೆಗಳಿವೆ ಎಂದು ಸಾರ್ವಜನಿಕರು ಆಳಲು ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಪಷ್ಟವಾದ ದಿನದಂದು ಸಮಸ್ಯೆ ಬಗೆಹರಿಸುವ ಬಗ್ಗೆ ಮಾತು ಕೊಟ್ಟ ಬಳಿಕವೇ ತಡೆದ ವಾಹನಗಳನ್ನು ಹೋಗಲು ಬಿಡುವುದು ಎಂಬ ತಾಕೀತು ಹಾಕಿದ್ದರು.
ಕೊನೆಗೆ ಕಂಪೆನಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಒಂದು ವಾರದೊಳಗೆ ಅಂದರೆ ಅ.18 ರಂದು ಸೋಮವಾರದ ಬಳಿಕ ಮೆಲ್ಕಾರಿನಲ್ಲಿ ರಸ್ತೆಗೆ ಡಾಮರು ಹಾಕಿ ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ವ್ಯಾಪಾರ ಕೇಂದ್ರವಾಗಿ ಬೆಳೆಯುತ್ತಿರುವ ಮೆಲ್ಕಾರಿನಲ್ಲಿ ಅವೈಜ್ಞಾನಿಕ ಮಾದರಿಯಲ್ಲಿ ಅಂಡರ್ ಪಾಸ್ ಮಾಡಿ ಇಲ್ಲಿನ ವ್ಯಾಪರಿಗಳಿಗೆ ಅನ್ಯಾಯ ಮಾಡಿದ್ದಾರೆ ಎಂಬ ಆರೋಪವನ್ನು ಈ ಹಿಂದೆ ಮಾಡಿದ್ದರು.

More from the blog

ಬಂಟ್ವಾಳ: ಮಳೆ ಬಂದರೆ ಕೆಸರು, ಮಳೆ ನಿಂತರೆ ಧೂಳು.... ಇದು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭವಾದಂದಿನಿಂದ ನಡೆದು ಬಂದ ಹಾದಿ...ಇನ್ನೂ ಕಾಮಗಾರಿ ಮುಗಿಯುವವರೆಗೂ ತಪ್ಪಿದ್ದಲ್ಲ. ಗುತ್ತಿಗೆ ವಹಿಸಿಕೊಂಡ ಕೆ.ಎನ್.ಆರ್.ಸಿ.ಕಂಪೆನಿ ಮಾತು ತಪ್ಪಿದರೂ ಇಲ್ಲಿನ ಸಮಸ್ಯೆ...

ಖಾಸಗಿ ಬಸ್ – ದ್ವಿಚಕ್ರ ವಾಹನದ ನಡುವೆ ಅಪಘಾತ : ಸವಾರನಿಗೆ ಗಾಯ   

ವಿಟ್ಲ : ಖಾಸಗಿ ಬಸ್ ಮತ್ತು ದ್ವಿಚಕ್ರ ವಾಹನ ಮಧ್ಯೆ ಡಿಕ್ಕಿ ಸಂಭವಿಸಿದ ಘಟನೆ ವಿಟ್ಲ-ಸಾಲೆತ್ತೂರು-ಮುಡಿಪು ರಸ್ತೆಯ ಕಟ್ಟತ್ತಿಲ ಎಂಬಲ್ಲಿ ನಡೆದಿದೆ. ಈ ಘಟನೆಯಲ್ಲಿ ದ್ವಿಚಕ್ರ ವಾಹನಕ್ಕೆ ಹಾನಿಯಾಗಿದ್ದು, ಸವಾರ ಸ್ಥಳೀಯ ನಿವಾಸಿ ಮೂಸಂಬಿಲ್...

ತಹಶೀಲ್ದಾರ್ ಅರ್ಚನಾ ಭಟ್ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕುಂದುಕೊರತೆ ಸಭೆ

ಬಂಟ್ವಾಳ: ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡದ ಕುಂದುಕೊರತೆ ಸಭೆ ಬಂಟ್ವಾಳ ತಹಶಿಲ್ದಾರ್ ಅರ್ಚನಾ ಭಟ್ ಅವರ ಅಧ್ಯಕ್ಷತೆಯಲ್ಲಿ ಅ.12 ರಂದು ಸೋಮವಾರ ಬಿಸಿರೋಡಿನ ಡಾ|ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಿತು. ಮಂಗಳೂರಿನ ಮಹಾನಗರಪಾಲಿಕೆ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು...

ಧ್ವನಿ ಬೆಳಕು ಸಂಯೋಜಕರ ಒಕ್ಕೂಟ (ರಿ.) ಬಂಟ್ವಾಳ ತಾಲೂಕು ಇದರ 8ನೇ ಮಹಾಸಭೆ ಮತ್ತು ರಕ್ತದಾನ ಶಿಬಿರ

ಧ್ವನಿ ಬೆಳಕು ಸಂಯೋಜಕರ ಒಕ್ಕೂಟ ರಿ. ಬಂಟ್ವಾಳ ತಾಲೂಕು ಇದರ 8ನೇ ಮಹಾಸಭೆ ಮತ್ತು ರಕ್ತದಾನ ಶಿಬಿರ ಇಂದು ಬೆಳಗ್ಗೆ ಲಯನ್ಸ್ ಕ್ಲಬ್ ಬಿ. ಸಿ ರೋಡ್ ನಲ್ಲಿ ನಡೆಯಿತು. ಇದರಲ್ಲಿ K.M.C ಆಸ್ಪತ್ರೆ...