Saturday, August 10, 2024

ಕೇರಳದ ಯುವಕನನ್ನು ಮದುವೆಯಾದ ಮಂಗಳೂರಿನ ಹಿಂದೂ ಯುವತಿ

ಮಂಗಳೂರು: ನಗರದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಹಿಂದೂ ಧರ್ಮದ ವಿದ್ಯಾರ್ಥಿನಿಯೊಬ್ಬಳು ಕೇರಳದಲ್ಲಿ ಅನ್ಯ ಧರ್ಮದ ಯುವಕನೊಂದಿಗೆ ವಿವಾಹವಾದ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.ಕ್ರಿಮಿನಲ್‌ ಆರೋಪ ಹೊಂದಿರುವ ಈತ ಲವ್‌ ಜಿಹಾದ್‌ನಲ್ಲಿ ತೊಡಗಿದ್ದಾನೆ ಎಂದು ವಿಶ್ವ ಹಿಂದೂ ಪರಿಷತ್‌ ಆರೋಪಿಸಿದೆ. ವಿಹಿಂಪ ಮುಖಂಡ ಶರಣ್ ಪಂಪ್‌ವೆಲ್ ಸೋಶಿಯಲ್‌ ಮೀಡಿಯಾದಲ್ಲಿ ಯುವತಿಯ ತಂದೆಯ ಕ್ಷಮೆ ಕೋರಿದ್ದಾರೆ.

ಮಂಗಳೂರಿನ ವಿಸ್ಮಯ ಎನ್ನುವ ವಿದ್ಯಾರ್ಥಿನಿ ಕೇರಳದ ಅಶ್ಪಕ್‌ ಎನ್ನುವ ಯುವಕನ ಜತೆ ಮದುವೆಯಾಗಿದ್ದಾಳೆ. ಈ ಪ್ರಸಂಗ ಕೇರಳ ಹೈಕೋರ್ಟ್‌ ಮೆಟ್ಟಿಲೇರಿದ್ದು, ವಿವಾಹಕ್ಕೆ ಕೋರ್ಟ್‌ ಅನುಮತಿ ನೀಡಿದೆ.

ಕೇರಳದ ಕುಖ್ಯಾತ ಕ್ರಿಮಿನಲ್ ವಿರುದ್ಧ ಕೇಳಿಬಂದಿದ್ದ ಲವ್ ಜಿಹಾದ್ ಆರೋಪ ಕೇಸ್‌ಗೆ ಮತ್ತೊಂದು ಟ್ವಿಸ್ಟ್ ದೊರೆತಿದೆ. ತಂದೆ- ತಾಯಿ ಎಷ್ಟೇ ಒತ್ತಾಯಿಸಿದರೂ, ಹಿಂದೂ ಸಂಘಟನೆಗಳು ಹೋರಾಡಿದರೂ ಹಿಂದೂ ಯುವತಿ ವಿಸ್ಮಯ, ತನ್ನ ಪ್ರೇಮಿ ಮೊಹಮ್ಮದ್ ಅಶ್ಫಾಕ್‌ನನ್ನು ಮದುವೆಯಾಗಿದ್ದಾಳೆ. ಕೇರಳ ಹೈಕೋರ್ಟ್ ಇವರ ಮದುವೆಗೆ ಗ್ರೀನ್‌ ಸಿಗ್ನಲ್‌ ನೀಡಿದೆ.

ಕಾನೂನು ಹೋರಾಟದ ಮೂಲಕ ಮಗಳನ್ನು ವಾಪಸ್ ಕರೆತರುವುದಾಗಿ ವಿಸ್ಮಯ ತಂದೆಗೆ ವಿಎಚ್‌ಪಿ ಭರವಸೆ ನೀಡಿತ್ತು. ವಿಸ್ಮಯಳನ್ನು ಮಂಗಳೂರಿನ ಕೌನ್ಸೆಲಿಂಗ್ ಸೆಂಟರ್‌ಗೆ ವಿಎಚ್‌ಪಿ ಕಳುಹಿಸಿತ್ತು. ಆದರೆ ಮೊಹಮ್ಮದ್ ಅಶ್ಫಾಕ್‌ ಕೇರಳ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಹಾಕಿದ್ದ. ಕೇರಳ ಹೈಕೋರ್ಟ್ ಆಕೆಯನ್ನು ಕರೆತರುವಂತೆ ಆದೇಶ ನೀಡಿತ್ತು. ಹೀಗಾಗಿ ಅಶ್ಫಾಕ್ ಜೊತೆ ತೆರಳಿ ವಿಸ್ಮಯ ವಿವಾಹವಾಗಿದ್ದಾಳೆ.

ಕೇರಳದ ಕಾಸರಗೋಡಿನ ವಿದ್ಯಾನಗರ ನಿವಾಸಿಯಾಗಿರುವ ವಿಸ್ಮಯಿ ಅಶ್ಫಾಕ್ ಪ್ರಕರಣ‌ ಕರಾವಳಿಯಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಮಂಗಳೂರಿನ ಉಳ್ಳಾಲದ ಅತ್ತೆ ಮನೆಯಲ್ಲಿ ಇದ್ದುಕೊಂಡು ಮಂಗಳೂರಿನಲ್ಲಿ ಬಿಸಿಎ ಶಿಕ್ಷಣ ಪಡೆಯುತ್ತಿದ್ದ ವಿಸ್ಮಯಳನ್ನು ವಿದ್ಯಾನಗರದಲ್ಲಿದ್ದಾಗಲೇ ಅಶ್ಫಾಕ್ ಪ್ರೀತಿಯ ಬಲೆಗೆ ಬೀಳಿಸಿದ್ದ. ಎರಡು ತಿಂಗಳ ಪರಿಚಯದಲ್ಲೇ ಈತ ವಿಸ್ಮಯಳ ಬ್ರೇನ್‌ವಾಶ್ ಮಾಡಿದ್ದಾನೆ ಎಂದು ಆಕೆಯ ಹೆತ್ತವರು ಆರೋಪಿಸಿದ್ದಾರೆ. ಈತ ಕ್ರಿಮಿನಲ್ ರೆಕಾರ್ಡ್ ಹೊಂದಿದ್ದಾನೆ ಎನ್ನಲಾಗಿದೆ.

ಕಳೆದ ಜೂ.6 ರಂದು ಉಳ್ಳಾಲದಿಂದ ವಿಸ್ಮಯಳನ್ನು ಈತ ಕರೆದುಕೊಂಡು ಹೋಗಿದ್ದ. ಬಳಿಕ ವಿದ್ಯಾನಗರ ಠಾಣೆ ಪೊಲೀಸರು ಈಕೆಯನ್ನು ಪತ್ತೆ ಹಚ್ಚಿ ಮನೆಯವರ ಜೊತೆ ಕಳುಹಿಸಿದ್ದರು. ಮತ್ತೆ ಜೂ‌.30ರಂದು ಉಳ್ಳಾಲದಿಂದ ವಿಸ್ಮಯಳನ್ನು ಅಪಹರಿಸಿ ಕೊಚ್ಚಿಗೆ ಕರೆದುಕೊಂಡು ಹೋಗಿದ್ದ. ಈ ಬಗ್ಗೆ ವಿಸ್ಮಯಳ ತಂದೆ ವಿನೋದ್ ಉಳ್ಳಾಲ ಠಾಣೆಗೆ ಅಪಹರಣ ದೂರು ನೀಡಿದ್ದರು. ಬಳಿಕ ವಿದ್ಯಾನಗರ ಪೊಲೀಸರು ಪತ್ತೆ ಹಚ್ಚಿ ಮಂಗಳೂರಿನ ಕೌನ್ಸಿಲಿಂಗ್ ಕೇಂದ್ರದಲ್ಲಿ ಇರಿಸಿದ್ದರು.

ಆದರೆ ಅಶ್ಫಾಕ್ ಜೊತೆಗೆ ತೆರಳುವುದಾಗಿ ವಿಸ್ಮಯ ಹಠ ಹಿಡಿದಿದ್ದಳು. ಈಕೆಯ ಬ್ರೇನ್‌ ವಾಶ್‌ ಮಾಡಲಾಗಿದೆ ಎಂದು ಆರೋಪಿಸಿ ಅಶ್ಫಾಕ್ ವಿರುದ್ಧ ವಿಸ್ಮಯ ತಂದೆ ದೂರು ನೀಡಿದ್ದರು. ಕೇರಳದಲ್ಲಿ ವಿಸ್ಮಯ ಮತಾಂತರಕ್ಕೆ ಯತ್ನಿಸಲಾಗಿದೆ ಎಂದು ಆರೋಪಿಸಿದ್ದರು. ಬಳಿಕ ಮಂಗಳೂರಿನ ವಿಎಚ್‌ಪಿ ನಾಯಕರನ್ನು ಭೇಟಿಯಾಗಿ ಕಣ್ಣೀರು ಹಾಕಿದ್ದರು. ಕೊನೆಗೂ ವಿಸ್ಮಯ, ಅಶ್ಫಾಕ್ ಜೊತೆಗೆ ತೆರಳಿ ಆತನನ್ನು ವರಿಸಿದ್ದಾಳೆ.

ಕ್ಷಮೆ ಕೇಳಿದ ಶರಣ್ ಪಂಪವೆಲ್

‘ಕ್ಷಮಿಸಿ ವಿನೋದ್ ರವರೇ, ನಿಮ್ಮ ಮಗಳನ್ನು ಉಳಿಸಲು ನಮ್ಮಿಂದ ಸಾಧ್ಯವಾಗಿಲ್ಲ’. ಕೇರಳ ಹೈಕೋರ್ಟ್ ಆದೇಶದಂತೆ ವಿಸ್ಮಯಳನ್ನು ನಟೋರಿಯಸ್ ಕ್ರಿಮಿನಲ್ ಮೊಹಮ್ಮದ್ ಆಶ್ಫಕ್​​ ಮದುವೆಯಾಗಿದ್ದಾನೆ ಎಂದು ಫೇಸ್​ಬುಕ್​ನಲ್ಲಿ ಫೋಸ್ಟ್​ ಹಾಕಿದ್ದಾರೆ.

More from the blog

ಬೆಂಗಳೂರು-ಮಂಗಳೂರು ರೈಲು ಮಾರ್ಗದಲ್ಲಿ ಮತ್ತೆ ಭೂಕುಸಿತ… ರೈಲು ಸಂಚಾರ ಸ್ಥಗಿತ

ಸಕಲೇಶಪುರ: ರೈಲ್ವೆ ಹಳಿ ಮೇಲೆ ಮತ್ತೆ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿತವಾಗಿದ್ದು ಮರಗಳ ಸಮೇತವಾಗಿ ರೈಲ್ವೆ ಹಳಿ ಮೇಲೆ ಮಣ್ಣು ಕುಸಿದಿರುವ ಘಟನೆ ತಾಲೂಕಿನ ಬಾಳ್ಳುಪೇಟೆ ಸಮೀಪ ಕಿಲೋಮೀಟರ್ ಸಂಖ್ಯೆ 42/43 ರ...

ಅಗಸ್ಟ್ 11 ರಂದು ಅಖಂಡ ಭಾರತ ಸಂಕಲ್ಪ ದಿನ ವಾಹನ ಜಾಥಾ ಮತ್ತು ಸಭಾ ಕಾರ್ಯಕ್ರಮ

ವಿಟ್ಲ ತಾಲೂಕು ಹಿಂದು ಜಾಗರಣ ವೇದಿಕೆ ಇದರ ಆಶ್ರಯದಲ್ಲಿ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ, 1947ರ ಆಗಸ್ಟ್ 14ರ ಮಧ್ಯರಾತ್ರಿ ಭಾರತ ತ್ರಿಖಂಡವಾಗಿ ಕತ್ತರಿಸಲ್ಪಟ್ಟ ಆ ಕರಾಳ ರಾತ್ರಿಯ ದುರಂತವನ್ನು ನೆನಪಿಸುತ್ತಾ,...

ಆ. 14 ರಂದು ವಿ.ಹಿಂ.ಪ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಕಲ್ಲಡ್ಕ ಪ್ರಖಂಡದ ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆ

ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಕಲ್ಲಡ್ಕ ಪ್ರಖಂಡ ಇದರ ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆಯ 14-08-2024 ನೇ ಬುಧವಾರ ಸಂಜೆ ಗಂಟೆ 5.00 ಕ್ಕೆ ಪಂಜಿನ ಮೆರವಣಿಗೆ ಕಲ್ಲಡ್ಕ...

ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದಲ್ಲಿ ನಾಗರಪಂಚಮಿ ಆಶ್ಲೇಷ ಬಲಿ 

ವಿಟ್ಲ: ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದಲ್ಲಿ ನಾಗರಪಂಚಮಿ ಪ್ರಯುಕ್ತ ಆಶ್ಲೇಷ ಬಲಿ ನಡೆಯಿತು. ಶ್ರೀ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮಿಗಳವರು ನಾಗರ ಪಂಚಮಿಯ ಸಂದೇಶ ನೀಡಿ, ನಂಬಿಕೆಯ ಮೇಲೆ ಜೀವನವಿದೆ. ಪ್ರಕೃತಿಯಲ್ಲಿ ದೇವರಿದ್ದಾನೆ ಎಂಬ...