ವಿಟ್ಲ: ಜಲೀಲ್ ಕರೋಪಾಡಿ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳ ಸಹಿತ ನಾಲ್ವರನ್ನು ಕೊಡಗು ಜಿಲ್ಲೆಯ ಸೋಮವಾರಪೇಟೆ ಪೊಲೀಸರು ವಶಕ್ಕೆ ಪಡೆದಿರುವುದಾಗಿ ಮಾಹಿತಿ ಲಭಿಸಿದೆ.
ವೀರಕಂಬ ನಿವಾಸಿ ಕುಸುಮಾಕರ, ಗಣೇಶ ಹಾಗೂ ಕರೋಪಾಡಿ ಜಲೀಲ್ ಕೊಲೆ ಪ್ರಕರಣದ ಆರೋಪಿಗಳಾದ ರೋಶನ್ , ಸತೀಶ್ ಪಿಲಿಂಗುರಿ ಪೊಲೀಸ್ ವಶವಾದವರಾಗಿದ್ದಾರೆ.
ಸೋಮವಾರ ಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಒಂಟಿ ಮಹಿಳೆಯ ಕಣ್ಣಿಗೆ ಮೆಣಸಿನ ಹುಡಿ ಎರಚಿ ಲಕ್ಷಾಂತರ ರೂಪಾಯಿ ದರೋಡೆಗೈದ ಪ್ರಕರಣ ದಲ್ಲಿ ಇವರುಗಳು ಆರೋಪಿಗಳಾಗಿದ್ದಾರೆ ಎಂದು ಮಾಹಿತಿ ಲಭಿಸಿದೆ. ಸೋಮವಾರ ಪೇಟೆ ಪೊಲೀಸರು ವಿಟ್ಲ ಠಾಣಾ ಪೊಲೀಸರ ಸಹಕಾರದಲ್ಲಿ ಕಾರ್ಯಾಚರಣೆ ನಡೆಸಿದ್ದರೆನ್ನಲಾಗಿದೆ.