ಹಿಂದು ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಇದರ ಆಶ್ರಯದಲ್ಲಿ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ 1947ರ ಆಗಸ್ಟ್ 14ರ ಮಧ್ಯರಾತ್ರಿ ಭಾರತ ತ್ರಿಖಂಡವಾಗಿ ಕತ್ತರಿಸಲ್ಪಟ್ಟ ಆ ಕರಾಳ ರಾತ್ರಿಯ ದುರಂತವನ್ನು ನೆನಪಿಸುತ್ತಾ, ಕಳೆದುಹೋದ ಭಾಗಗಳೆಲ್ಲವನ್ನೂ ಮತ್ತೆ ಒಂದುಗೂಡಿಸುವರೇ ಜನಜಾಗೃತಿಗಾಗಿ ಸಂಜೆ ಗಂಟೆ 6-30ಕ್ಕೆ ಬಿ.ಸಿ.ರೋಡ್ ಕೈಕಂಬದ ಪೊಳಲಿ ದ್ವಾರದ ಬಳಿಯಿಂದ ಹೊರಟು ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣ ಗುರು ವೃತ್ತವಾಗಿ ‘ಸ್ಪರ್ಶ ಕಲಾ ಮಂದಿರ’ದ ವರೆಗೆ ಬೃಹತ್ ಪಂಜಿನ ಮೆರವಣಿಗೆ 14-8-2024ನೇ ಗುರುವಾರ ರಾತ್ರಿ ಗಂಟೆ 7-30ಕ್ಕೆ ಬಂಟ್ವಾಳದ ಬಿ. ಸಿ. ರೋಡ್‌ನ ‘ಸ್ಪರ್ಶ ಕಲಾ ಮಂದಿರ’ ನಡೆಯಲಿದೆ.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆತ್ರಕೆರೆ ಹೊಳ್ಳರ ಬೈಲು ಶ್ರೀ ಶ್ರವ್ಯಾ ಗೋ ಮಂದಿರದ ಅಧ್ಯಕ್ಷರು ನಾರಾಯಣ ಹೊಳ್ಳ, ಗೌರವ ಉಪಸ್ಥಿತಿಯನ್ನು ನಿವೃತ್ತ ಭಾರತೀಯ ಭೂ ಸೇನೆ ಸುಬೇದಾರ್ ದಯಾನಂದ ಬಿ. ಎಸ್, ದಿಕ್ಕೂಚಿ ಭಾಷಣವನ್ನು ಬೆಳಗಾವಿ ಜಿಲ್ಲೆಯ ಹುಕ್ಕೇರಿ ಇಂಚಗೇರಿ ಮಠ ಸುಕ್ಷೇತ್ರ ಕ್ಯಾರಗುಡ್ಡದ ಪರಮಪೂಜ್ಯ ಅಭಿನವ ಮಂಜುನಾಥ ಮಹಾಸ್ವಾಮಿಗಳು ವಹಿಸಲಿದ್ದಾರೆ.