Sunday, August 11, 2024

ಕಾರು- ಆಟೋರಿಕ್ಷಾ ಅಪಘಾತದಲ್ಲಿ ಮಹಿಳೆ ಮೃತಪಟ್ಟ ಪ್ರಕರಣ : ಕಾರು ಚಾಲಕನಿಗೆ ಶಿಕ್ಷೆ ಪ್ರಕಟ

ಬೆಳ್ತಂಗಡಿ: ಕಾರು ಹಾಗೂ ಆಟೋರಿಕ್ಷಾದ ನಡುವೆ ಸಂಭವಿಸಿದ ಅಪಘಾತದಲ್ಲಿ ಆಟೋದಲ್ಲಿದ್ದ ಮಹಿಳೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕನಿಗೆ ಶಿಕ್ಷೆ ಪ್ರಕಟವಾಗಿದೆ.

11-9-2016 ರಂದು ಸಂಜೆ 5.00 ಗಂಟೆಗೆ ಕಾರು ಕೆಎ.21 ಎನ್‌.7021 ನಂ.ನ ಕಾರನ್ನು ಉಪ್ಪಿನಂಗಡಿ ಕಡೆಯಿಂದ ಗುರುವಾಯನಕೆರೆ ಕಡೆಗೆ ಚಲಾಯಿಸಿ ಓವರ್‌ಟೇಕ್‌ ಮಾಡುವ ಸಮಯ ಉಪ್ಪಿನಂಗಡಿ ಕಡೆಗೆ ಹೋಗುತ್ತಿದ್ದ ಅಟೋರಿಕ್ಷಾ ಕೆಎ.21.5922 ಢಿಕ್ಕಿ ಹೊಡೆದ ಪರಿಣಾಮ ಅಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಬಿ.ಕೆ.ವೀಣಾ ಅವರು ತೀವ್ರ ಗಾಯಗೊಂಡು ಮಂಗಳೂರು ಎ.ಜೆ. ಅಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು ಅಪಾದಿತ ಕಾರು ಚಾಲಕ ಚಿದಾನಂದ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅದರಂತೆ 06.08.2024ರಂದು ಆರೋಪಿತ ಚಿದಾನಂದ ಅವರಿಗೆ ಕಲಂ 279 ನಲ್ಲಿ 1 ಸಾವಿರ ದಂಡ 1ತಿಂಗಳ ಸಾದ ಕಾರಾಗƒಹ ಶಿಕ್ಷೆ, ಕಲಂ 337 ರಂತೆ 1ಸಾವಿರ ದಂಡ 1ತಿಂಗಳ ಸಾದಾ ಕಾರಾಗೃಹ ಶಿಕ್ಷೆ, ಕಲಂ 338 ರಂತೆ 1 ಸಾವಿರ ದಂಡ 1 ತಿಂಗಳ ಸಾದಾ ಕಾರಾಗೃಹ ಶಿಕ್ಷೆ, ಕಲಂ 304(ಎ) ರಂತೆ 1000 ಸಾವಿರ ದಂಡ 2 ವರ್ಷ ಕಾರಾಗೃಹ ಶಿಕ್ಷೆ ತಪ್ಪಿದರೆ 1ತಿಂಗಳ ಹೆಚ್ಚಿನ ಕಾರಾಗೃಹ ಶಿಕ್ಷೆಯನ್ನು ಪ್ರಧಾನ ವ್ಯವಹಾರಿಕ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳು ಬೆಳ್ತಂಗಡಿ ನ್ಯಾಯಾಲಯವು ಆದೇಶಿಸಿದೆ.

ತನಿಖಾಧಿಕಾರಿ ನಾಗೇಶ್‌ ಕದ್ರಿ, ಸರಕಾರಿ ಅಭಿಯೋಜಕರಾದ ಕಿರಣ್‌ ಮತ್ತು ಹಾಲಿ ಅಶಿಕಾ ಮೇಡಮ್‌ ವಾದ ಮಂಡಿಸಿದ್ದು, ತನಿಖಾ ಸಹಾಯಕನಾಗಿ ವೆಂಕಟೇಶ್‌ ಸಹಕರಿಸಿದ್ದರು.

More from the blog

ವಿದ್ಯಾಭಾರತಿ ರಾಜ್ಯಮಟ್ಟದ ಕರಾಟೆ ಟೂರ್ನಮೆಂಟ್ ನಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಪ್ತಿ ಶೆಟ್ಟಿ ಪ್ರಥಮ

ಬೆಂಗಳೂರಿನಲ್ಲಿ‌ ನಡೆದ ವಿದ್ಯಾಭಾರತಿ ರಾಜ್ಯಮಟ್ಟದ ಕರಾಟೆ ಟೂರ್ನಮೆಂಟ್ ನಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಪ್ತಿ ಶೆಟ್ಟಿ ಪ್ರಥಮ ಸ್ಥಾನಗಳಿಸಿ ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾಳೆ. ಆಶಾ ಮತ್ತು ಗಿರೀಶ್ ಶೆಟ್ಟಿ ಇವರ...

ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಕಾರ್ಯವೈಖರಿಗೆ ಪ್ರಧಾನಿ ಮೋದಿ ಮೆಚ್ಚುಗೆ

ಬೆಳ್ತಂಗಡಿ: ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಶುಕ್ರವಾರ ಪಾರ್ಲಿಮೆಂಟ್ ಭವನದ ಪ್ರಧಾನ ಕಚೇರಿಯಲ್ಲಿ ಭೇಟಿಯಾಗಿ ಮೂರನೇ ಬಾರಿ ಪ್ರಧಾನಮಂತ್ರಿ ಆಯ್ಕೆಯಾಗಿರುವುದಕ್ಕೆ ಶುಭಕೋರಿದರು. ಶ್ರೀ...

ಕಂಟೈನರ್‌ ಲಾರಿ ಮಗುಚಿ ಬಿದ್ದು ಕಾರು ಅಪ್ಪಚ್ಚಿ

ಉಪ್ಪಿನಂಗಡಿ: ಕಾರಿನ ಮೇಲೆ ಕಂಟೈನರ್ ಲಾರಿಯೊಂದು ಮಗುಚಿ ಬಿದ್ದು ಅಪ್ಪಚ್ಚಿಯಾಗಿದ್ದು, ಪ್ರಯಾಣಿಕರು ಪವಾಡ ಸದೃಶವಾಗಿ ಪಾರಾದ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಬರ್ಚಿನಹಳ್ಳದಲ್ಲಿ ನಡೆದಿದೆ. ದಾವಣಗೆರೆ ಮೂಲದವರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ...

ಕರ್ತವ್ಯದಲ್ಲಿ ಸಂತೃಪ್ತಿ ಇದೆ- ರಘುಪತಿ ಕೆ ರಾವ್ 

ಪ್ರತಿಯೊಬ್ಬರೂ ಕೂಡ ತಾವು ಮಾಡುವ ಕರ್ತವ್ಯವನ್ನು ಸಂತೋಷದಿಂದ ಮಾಡಿದರೆ ಖಂಡಿತವಾಗಿಯೂ ಸಂತೃಪ್ತಿ ಸಿಕ್ಕೇ ಸಿಗುತ್ತದೆ. ಅಂತಹ ಸಂತೃಪ್ತಿಯು ಶಿಕ್ಷಣ ಕ್ಷೇತ್ರದಲ್ಲಿ ನಾನು ಮಾಡಿರುವ ಕರ್ತವ್ಯದ ಅವಧಿಯಲ್ಲಿ ನನಗೆ ದೊರಕಿದೆ ಎಂದು ತುಂಬ ಮನದಿಂದ...