ಬಂಟ್ವಾಳ ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ 2023.24 ನೇ ಸಾಲಿನ ಮಹಾಸಭೆ ಕುಲಾಲ ಸಮುದಾಯ ಭವನ ಪೊಸಳ್ಳಿಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಸಮಾಜದ ಮುಖಂಡರಾದ ಪ್ರಸಿದ್ಧ ವಕೀಲರು ಮಂಗಳೂರು ವಿಶ್ವ ವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಸುರೇಶ್ ಕುಲಾಲ್ ಬಿ ನಾವೂರು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ ಹಿರಿಯರ ಸಂಘಟನೆ ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತದೆ ಅವರ ನೋವು ನಲಿವು ಜೀವನಾನುಭಾವ ನಮಗೆ ದಾರಿ ದೀಪ ಮಾತ್ರವಲ್ಲ ಮನೆಯಲ್ಲಿ ಎಲ್ಲರಿಗೂ ಅವರ ಸಮಾಯೋಚಿತ ಮಾರ್ಗದರ್ಶನವಿದ್ದಾಗ ಮಾತ್ರ ಯಶಸ್ವಿ ಜೀವನನಡೆಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಇನ್ನೊರ್ವ ಅತಿಥಿ ಕರ್ನಾಟಕ ರಾಜ್ಯ ಕುಲಾಲ ಕುಲಾಲ /ಕುಂಬಾರ ಯುವವೇದಿಕೆ ಹಾಗೂ ಮಹಿಳಾ ಸಂಘಟನೆಗಳ ಒಕ್ಕೂಟ (ರಿ ) ಇದರ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷರಾದ ನಿತೀಶ್ ಪಲ್ಲಿ ಕಂಡ ಮಾತನಾಡಿ ನಮ್ಮದು ಸಮಾಜದ ಎಲ್ಲಾ ಕಾರ್ಯಕ್ರಮದಲ್ಲೂ ಜೊತೆಯಾಗಿ ಸಾಗುತ್ತಿದ್ದು ಮುಂದಕ್ಕೂ ಅವರ ಮಾರ್ಗದರ್ಶನ, ಆಶೀರ್ವಾದ ಅಗತ್ಯವಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ 72ವರ್ಷ ತುಂಬಿದ ಸದಸ್ಯರಾದ ಸೋಮಯ ಹನೈನಡೆ, ರೋಹಿಣಿ ಪಾಂಗಾಳ, ಭಾಸ್ಕರ್ ಬಿ ಸಿ ರೋಡ್, ಸುಂದರ ಮೂಲ್ಯ ಕೊಂಗ್ರಬೆಟ್ಟು, ತಿಮ್ಮಪ್ಪ ಮೂಲ್ಯ ಅಲ್ಲಿಪಾದೆ, ಜಾನಕಿ ನಾರಾಯಣ ಗೂಡಿನಬಳಿ, ವಿಠ್ಠಲ ಮೂಲ್ಯ ಜಕ್ರಿಬೆಟ್ಟು, ಚಿನ್ನಯ ಸಾಲಿಯಾನ್ ಚೇಳೂರು, ರತ್ನಾವತಿ ಬಿ ಸಿ ರೋಡ್, ಮಾಲತಿ ಚಂದಪ್ಪ ಉಪ್ಪಿನಂಗಡಿ, ವಿಶ್ವನಾಥ ಮರ್ದೋಳಿ, ಚಂದಪ್ಪ ಬಂಜನ್ ಮಿತ್ತಬೈಲ್, ಎ ಶಿವಪ್ಪ ಕೊಡಂಗೆ, ದಿನಕರ ಪೂಂಜರಕೋಡಿ, ಸುಂದರ ಮೂಲ್ಯ ಸೌತೆಹಳ್ಳಿ, ನಾರಾಯಣ ಸಾಲಿಯಾನ್ ಕೇಳ್ದೋಡಿ, ವಿಶ್ವನಾಥ ಬಂಗೇರ ಅಲ್ಲಿಪಾದೆ, ಜಯಂತಿ ಸುಲ್ತಾನ್ ಕಟ್ಟೆ ನಾವೂರು, ಶ್ರೀನಿವಾಸ ಸಿದ್ದಕಟ್ಟೆ ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ 604 ಗಳಿಸಿದ ಕು. ಕೃತಿ ಮತ್ತು ಮುಖ್ಯ ಅತಿಥಿ ಹಾಗೂ ವಿಶ್ವ ವಿದ್ಯಾನಿಲಯ ಸಿಂಡಿಕೇಟ್ ಸದಸ್ಯರಾದ ಸುರೇಶ್ ಕುಲಾಲ್ ಬಿ ನಾವೂರು ಹಾಗೂ ರೋಟರಿ ಕ್ಲಬ್ ಬಿ ಸಿ ರೋಡ್ ಸಿಟಿ ಇದರ ಅಧ್ಯಕ್ಷ ಹಾಗೂ ಸಂಘದ ಗೌರವಾಧ್ಯಕ್ಷರಾದ ಶೇಷಪ್ಪ ಮಾಸ್ಟರ್ ಹಾಗೂ ಭಾರತಿ ಶೇಷಪ್ಪ ದಂಪತಿ ಗಳನ್ನು ಸನ್ಮಾನಿಸಲಾಯಿತು.
ಸನ್ಮಾನಿತರ ಪರಿಚಯವನ್ನು ಕಾರ್ಯಕಾರಿ ಸಮಿತಿ ಸದಸ್ಯರಾದ ವಿಶ್ವನಾಥ ಸಾಲಿಯಾನ್, ಶಾಂಭವಿ ಹನೈನಡೆ, ರೋಹಿಣಿ, ರತ್ನಾವತಿ,ದಿನಕರ ಪೂಂಜರಕೋಡಿ, ಸಂಘಟನಾ ಕಾರ್ಯದರ್ಶಿ ಕಿಟ್ಟು ಮೂಲ್ಯ,ಜೊತೆ ಕಾರ್ಯದರ್ಶಿ ಶ್ರೀನಿವಾಸ ಸಜಿಪ ಮಾಡಿದರು.
ಹಾಲಿ ವರ್ಷದಲ್ಲಿ ನಮ್ಮನ್ನಗಲಿದ ರುಕ್ಮಯ ಮೂಲ್ಯ ಬಾಳೆಹಿತ್ಲು, ಸದಾಶಿವ ಬೊಂಡಾಳ, ಸಂಜೀವ ಮೂಲ್ಯ ಬಡ್ಡಕಟ್ಟೆ, ತಿಮ್ಮಪ್ಪ ಮೂಲ್ಯ ನೆಟ್ಲಮುಡ್ನೂರ್ ಇವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.ಸಂಘದ ಅಧ್ಯಕ್ಷರಾದ ಸೋಮಯ ಹನೈನಡೆ ಮಾತನಾಡಿ ಇಂತಹ ಸಂಘದ ಅಧ್ಯಕ್ಷನಾಗಿರಲು ನನಗೆ ಹೆಮ್ಮೆಯಾಗುತ್ತಿದೆ. ಹಿರಿಯ ನಾಗರಿಕರ ನೋವು ನಲಿವಿನಲ್ಲಿ ಪಾಲ್ಗೊಂಡು ಇಂತಹ ಸಾಧಕ ಹಿರಿಯರಿಗೆ ಸನ್ಮಾನ ಮಾಡುತ್ತಿರುವುದು ನನಗೆ ಹೆಮ್ಮೆ ಯಾಗಿದೆ. ಈ ಸಂಘ ಮುಂದೆಯೂ ಯಶಸ್ವಿ ಯಾಗಿ ಕಾರ್ಯ ನಿರ್ವಹಿಸಲಿ ಎಂದು ಅಭಿಪ್ರಾಯ ಪಟ್ಟರು. ಸನ್ಮಾನಿತರಲ್ಲಿ ಎ ಶಿವಪ್ಪ ಕೊಡಂಗೆ, ದಿನಕರ ಪೂಂಜರ ಕೊಡಿ, ಸುಂದರ ಮೂಲ್ಯ ಕೊಂಗ್ರಬೆಟ್ಟು ತಮ್ಮ ಅನಿಸಿಕೆ ಹಂಚಿಕೊಂಡರು. ನಾರಾಯಣ ಮಾಸ್ಟರ್ ಸಂಘದ ಅಭಿವೃದ್ಧಿಗೆ ಸಲಹೆ ಸೂಚನೆ ನೀಡಿದರು. ವೇದಿಕೆಯಲ್ಲಿ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷರಾದ ಕೃಷ್ಣಪ್ಪ ಬಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಸಂಘದ ಗೌರವಾಧ್ಯಕ್ಷರಾದ ಶೇಷಪ್ಪ ಮಾಸ್ಟರ್ ಪ್ರಾಸ್ತವಿಕವಾಗಿ ಮಾತನಾಡಿ ಹಿರಿಯ ನಾಗರಿಕರಿಗೆ ಸಿಗುವ ಸೌಲಭ್ಯ ದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯದರ್ಶಿ ಪದ್ಮನಾಭ ಎಂ ವರದಿ ಮಂಡಿಸಿ, ಕೋಶಾಧಿಕಾರಿ ಸೋಮಪ್ಪ ಮೂಲ್ಯ ಲೆಕ್ಕ ಪತ್ರ ಮಂಡಿಸಿದರು. ಸಂಘಟನಾ ಕಾರ್ಯದರ್ಶಿ ಕಿಟ್ಟು ಮೂಲ್ಯ ಸ್ವಾಗತಿಸಿ ಓಬಯ್ಯ ಮೂಲ್ಯ ವಂದಿಸಿದರು.
ಭಾರತೀ ಶೇಷಪ್ಪ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷರಾದ ಶೀನ ಮೂಲ್ಯ ಅಲ್ಲಿಪಾದೆ, ಕಾರ್ಯಕಾರಿ ಸಮಿತಿ ಸದಸ್ಯರಾದ ಕೃಷ್ಣಪ್ಪ ಬಡ್ಡಕಟ್ಟೆ, ನೀಲಪ್ಪ ಸಾಲಿಯಾನ್ ತುಂಬೆ,ವಿಠಲ ಮೂಲ್ಯ ಜಕ್ರಿ ಬೆಟ್ಟು,ರಾಮ ಮೂಲ್ಯ ಮರ್ದೋಳಿ ಸಹಕರಿಸಿದರು