Tuesday, August 13, 2024

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ 9 ನೇ ಬಾರಿ ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಪ್ರಶಸ್ತಿ

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘವು ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿಂದ ಕೊಡಲ್ಪಡುವ ಸಾಧನ ಪ್ರಶಸ್ತಿಗೆ ಒಂಭತ್ತನೆ ಭಾರಿಗೆ ಆಯ್ಕೆಯಾಗಿರುತ್ತದೆ.

2023-24 ನೇ ಸಾಲಿನಲ್ಲಿ ಸಹಕಾರ ಸಂಘವು 41709 ಸದಸ್ಯತನದೊಂದಿಗೆ, ರೂ.188.78 ಕೋಟಿ ಠೇವಣಿ, ರೂ.155.63 ಕೋಟಿ ಸಾಲ, ರೂ.212.24 ಕೋಟಿ ದುಡಿಯುವ ಬಂಡವಾಳದೊಂದಿಗೆ ರೂ.3.84 ಕೋಟಿ ನಿವ್ವಳ ಲಾಭ ಗಳಿಸಿರುತ್ತದೆ. 2023-24 ನೇ ಸಾಲಿನಲ್ಲಿ ರೂ.11.28 ಕೋಟಿ ವ್ಯವಹಾರ ನಡೆಸಿರುತ್ತದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಾತ್ರವಲ್ಲದೇ ಸಾಮಾಜಿಕ ಚಟುವಟಿಕೆಗಳನ್ನು ತನ್ನನ್ನು ತಾನು ತೊಡಗಿಸಿಕೊಂಡಿದೆ. ಸ್ವಂತ ಕೇಂದ್ರ ಕಚೇರಿ ಸುಮಾರು 5 ಕೋಟಿ ಮೊತ್ತದ ಶ್ರೀ ಗುರುಸಾನಿಧ್ಯ ವಾಣಿಜ್ಯ ಸಂಕೀರ್ಣ ಜು.13 ರಂದು ಲೋಕರ್ಪಣೆಗೊಂಡಿದ್ದು ಇದರ ಎರಡನೇ ಮಡಿಯಲ್ಲಿ ಆಡಳಿತ ಕಚೇರಿಯನ್ನು ಹೊಂದಿರುತ್ತದೆ

2023-24ನೇ ಸಾಲಿನಲ್ಲಿ ಸಂಘವು ತನ್ನ ಕಾರ್ಯವ್ಯಾಪ್ತಿಯಲ್ಲಿ ಸಾಧಿಸಿರುವ ವಿಶಿಷ್ಠ ಸಾಧನೆಯನ್ನು ಗಮನಿಸಿ 2023-24 ನೇ ಸಾಲಿನ ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಮಹಾಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಡಾ| ಎಂ.ಎನ್ ರಾಜೇಂದ್ರ ಕುಮಾರ್ ಹಾಗೂ ಆಡಳಿತ ಮಂಡಳಿ ನಿರ್ದೇಶಕರ ಸಮ್ಮುಖದಲ್ಲಿ ಸಾಧನ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ ಎಂದು ಶ್ರೀ ಗುರುದೇವ ವಿವಿಧೋದ್ಧೇಶ ಸಹಕಾರ ಸಂಘದ ಅಧ್ಯಕ್ಷರಾದ ಎನ್ ಪದ್ಮನಾಭ ತಿಳಿಸಿರುತ್ತಾರೆ.

More from the blog

ಪಂಚಾಯತ್ ರಾಜ್ ನೀತಿ: ಉನ್ನತ ಮಟ್ಟದ ಅಧಿಕಾರಿಗಳಿಂದ ತಪ್ಪು ನಡೆ: ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆಯಿಂದ ಸಚಿವರು ಭೇಟಿಗೆ ಸಿದ್ಧತೆ

ವಿಟ್ಲ: ಪ್ರತೀ ಗ್ರಾಮ ಪಂಚಾಯಿತಿಗಳಿಗೆ ಸರ್ಕಾರ ಸಂವಿಧಾನ ಬದ್ಧ ಅಧಿಕಾರವನ್ನು ನೀಡಿದ್ದು, ಕೆಲವು ವ್ಯವಸ್ಥೆಯಲ್ಲಿ ಐ.ಎ.ಎಸ್. ಅಧಿಕಾರಿಗಳು ತಪ್ಪು ದಾರಿಯಲ್ಲಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದಾರೆ. ಚುನಾಯಿತ ಪ್ರತಿನಿಧಿಗಳ ವಿರೋಧವಿದ್ದರೂ, ಹಿರಿಯ ಅಧಿಕಾರಿಗಳ...

400 ಕೆವಿ ವಿದ್ಯುತ್ ಪ್ರಸರಣ ಮಾರ್ಗ ನಿರ್ಮಾಣ ಗುತ್ತಿಗೆ ಕಂಪೆನಿಯಿಂದ ಸುಳ್ಳು ಸುದ್ದಿ – ರೈತ ಸಂಘ ಹಸಿರು ಸೇನೆ ಆರೋಪ

ವಿಟ್ಲ: ರೈತರ ಬದುಕಿಗೆ ಕಂಟಕ ಪ್ರಾಯವಾಗಿರುವ ೪೦೦ಕೆವಿ ವಿದ್ಯುತ್ ಪ್ರಸರಣ ಮಾರ್ಗಕ್ಕೆ ಕಳೆದ ನಾಲ್ಕು ವರ್ಷಗಳಿಂದ ಕೃಷಿಕರಿಂದ ಪ್ರಬಲ ವಿರೋಧ ವ್ಯಕ್ತವಾಗುತ್ತಿದೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಲ್ಲಿವರೆಗೆ ಒಂದೇ ಒಂದು...

ಬಂಟ್ವಾಳ ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿ ವೃದ್ಧಿ ಸಂಘ (ರಿ) ಇದರ ಮಹಾಸಭೆ 

ಬಂಟ್ವಾಳ ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ 2023.24 ನೇ ಸಾಲಿನ ಮಹಾಸಭೆ ಕುಲಾಲ ಸಮುದಾಯ ಭವನ ಪೊಸಳ್ಳಿಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸಮಾಜದ ಮುಖಂಡರಾದ ಪ್ರಸಿದ್ಧ ವಕೀಲರು ಮಂಗಳೂರು ವಿಶ್ವ ವಿದ್ಯಾನಿಲಯದ ಸಿಂಡಿಕೇಟ್...

ಹಿಂ.ಜಾ. ವೇದಿಕೆ ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ವಾಹನ ಜಾಥಾ ಮತ್ತು ಸಭಾ ಕಾರ್ಯಕ್ರಮ

ಕಲ್ಲಡ್ಕ: ಹಿಂದೂ ಜಾಗರಣ ವೇದಿಕೆ ಕಲ್ಲಡ್ಕದಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ವಾಹನ ಜಾಥಾ ಮತ್ತು ಸಭಾ ಕಾರ್ಯಕ್ರಮ ಆ.11 ನೇ ಆದಿತ್ಯವಾರ ನಡೆಯಿತು. ಮಧ್ಯಾಹ್ನ ಮಾಣಿ ಶ್ರೀ ರಾಜರಾಜೇಶ್ವರಿ ಭಜನಾ ಮಂದಿರ,...