ಬಂಟ್ವಾಳ; ಲೋಕಕಲ್ಯಾಣಾರ್ಥವಾಗಲು ಸ್ವಾಮೀಜಿಯೋರ್ವರು ತೀರ್ಥ ಯಾತ್ರೆ ಕೈಗೊಂಡಿದ್ದು, 38 ನೇ ದಿನವಾದ ಜುಲೈ 22 ರಂದು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಶಂಕರಾಪುರ ಉಡುಪಿಯ ಸಾಯಿ ಮುಖ್ಯ ಪ್ರಾಣ ದೇವಸ್ಥಾನದ ಸ್ವಾಮೀಜಿಯವರಾದ ಶ್ರೀಸಾಯಿ ಈಶ್ವರ ಗುರೂಜಿ ಅವರು 108 ಕ್ಷೇತ್ರಕ್ಕೆ ಬೇಟಿ ನೀಡಿ ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ.
ದೇಶದ ರಕ್ಷಣೆಯ ಜೊತೆ ಗೋರಕ್ಷಣೆಯಾಗಬೇಕು, ದೇಶವನ್ನು ಕಾಯುವ ಯೋಧರಿಗೆ ಮತ್ತು ಅವರ ಕುಟುಂಬದವರಿಗೂ ರಕ್ಷಣೆ ಸಿಗಬೇಕಾಗಿದೆ.
ಇವತ್ತು ಹಿಂದೂ ಧರ್ಮದ ಅನೇಕರು ಬೇರೆ ಬೇರೆ ಮತಗಳಿಗೆ ಮತಾಂತರಯಾಗುವುತ್ತಿರುವುದು ಕಂಡು ಬಂದಿರುವುದು ನಮಗೆಲ್ಲಾ ತಿಳಿದಿರುವ ವಿಚಾರವಾಗಿದ್ದು,ಅವರಿಗೆ ನಾವು ಬುದ್ದಿ ಹೇಳಿದರು ಬದಲಾವಣೆ ಸಾಧ್ಯವಿಲ್ಲ . ಅವರನ್ನು ತಡೆಯುವುದು ನಮ್ಮಿಂದ ಆಗುವುದಿಲ್ಲ, ಅ ದೃಷ್ಟಿಯಿಂದ ಮಹಾ ಸಂಕಲ್ಪ ಮಾಡಿದ್ದೇವೆ, 108 ದಿನ 108 ಕ್ಷೇತ್ರಗಳಿಗೆ ಬೇಟಿ ನೀಡಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸುವುದು, ಅಲ್ಲಿಯ ಮುಖ್ಯಸ್ಥ ರಿಗೆ ಒಂದು ಮನವಿ ಮಾಡುತ್ತೇವೆ.ಪ್ರತಿ ನಿತ್ಯ ಬೆಳಿಗ್ಗೆ ಅಥವಾ ಸಂಜೆ ಪೂಜೆ ಆದ ಬಳಿಕ ದೇಶಕ್ಕಾಗಿ ಯೋದರಿಗಾಗಿ
ಹಾಗೂ ಯಾರು ಮತಾಂತರ ಆಗುತ್ತಾರಾ ಅಂತವರ ಮನಸ್ಸನ್ನು ಪರಿವರ್ತನೆಗಾಗಿ ದೇವರೇ ನೀನೆ ಪ್ರೇರಣೆ ಯನ್ನು ನೀಡು ಎಂದು 108 ದಿನ 108 ಪ್ರದಕ್ಷಿಣೆ ಮಾಡುತ್ತೇವೆ.ಇವತ್ತಿಗೆ 38 ನೇ ದಿನ ಇಂದು ಪೊಳಲಿಯಲ್ಲಿ ಲೋಕಕಲ್ಯಾಣಕ್ಕೆ ಪ್ರಾರ್ಥನೆ ಮಾಡಿದ್ದೇವೆ ಎಂದು ತಿಳಿಸಿದರು.
ಮಠದ ಟ್ರಸ್ಟಿ ಗೀತಾಂಜಲಿ ಸುವರ್ಣ, ಬಿಜೆಪಿ ನಿಕಟಪೂರ್ವ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್.ಶೆಟ್ಟಿ, ಬಂಟ್ವಾಳ ತಾ.ಪಂ.ಮಾಜಿ ಸದಸ್ಯ ಯಶವಂತ ಪೊಳಲಿ ಮತ್ತಿತರರು ಉಪಸ್ಥಿತರಿದ್ದರು.