ಬಂಟ್ವಾಳ: ಮಾಣಿ ಕುಲಾಲ ಸೇವಾ ಸಂಘದ ಆಶ್ರಯದಲ್ಲಿ ಪ್ರಥಮ ವರ್ಷದ ಕುಲಾಲ ಬಾಂಧವರ ಕೆಸರ್‌ಡ್ ಒಂಜಿ ದಿನ ಕಾರ್ಯಕ್ರಮ ಸತ್ತಿಕಲ್ಲುನಲ್ಲಿ ನಡೆಯಿತು.
ಕೆದಿಲ ಗ್ರಾ.ಪಂ.ಮಾಜಿ ಸದಸ್ಯ ಶ್ಯಾಮ್‌ಪ್ರಸಾದ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಕೆದಿಲ ಶ್ರೀ ಉಳ್ಳಾಕುಲು, ಧೂಮಾವತಿ, ಮಲರಾಯ ದೈವಸ್ಥಾನದ ಅಧ್ಯಕ್ಷ ಕೃಷ್ಣ ಕಾರ್ಯಕ್ರಮ ಉದ್ಘಾಟಿಸಿದರು.
ಕುಲಾಲ ಸೇವಾ ಸಂಘ ಮಾಣಿಯ ಮಾಜಿ ಅಧ್ಯಕ್ಷರಾದ ಬಾಬು ಕುಲಾಲ್ ಕಜೆ, ಭೋಜ ನಾರಾಯಣ ಮೂಲ್ಯ, ವೆಂಕಪ್ಪ ಕುಲಾಲ ಮುಲಾರ್, ಗೌರವಾಧ್ಯಕ್ಷ ರಾಮಚಂದ್ರ ಮಾಸ್ಟರ್, ಅಧ್ಯಕ್ಷ ಮೋಹನ್ ಕಜೆ, ಕಟ್ಟಡ ಸಮಿತಿ ಅಧ್ಯಕ್ಷ ಹರಿಯಪ್ಪ ಮೂಲ್ಯ ಶಂಭುಗ, ಕಾರ್ಯದರ್ಶಿ ಉಮೇಶ್ ಕುಲಾಲ್ ಬರಿಮಾರು, ಮಹಿಳಾ ಘಟಕದ ಕಾರ್ಯದರ್ಶಿ ಶೋಭಾ ಕುಲಾಲ್ ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ವಿಶ್ವನಾಥ ಕುಲಾಲ್ ಸ್ವಾಗತಿಸಿದರು. ಉಪಾಧ್ಯಕ್ಷ ಚಂದ್ರಶೇಖರ ಕುಲಾಲ್ ವಂದಿಸಿದರು. ಗೋಪಾಲ್ ಮಾಸ್ಟರ್ ಹಾಗೂ ಮಹೇಶ್ ಕುಲಾಲ್ ಕಾರ್ಯಕ್ರಮ ನಿರ್ವಹಿಸಿದರು. ವಿವಿಧ ಆಟೋಟ ಸ್ಪರ್ಧೆಗಳು ನಡೆದವು.