Monday, July 22, 2024

ಕನ್ಯಾನ ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದಲ್ಲಿ ಗುರು ವಂದನೆ, ಪಾದ ಪೂಜೆ 

ವಿಟ್ಲ: ಕನ್ಯಾನ ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದಲ್ಲಿ ಗುರು ಪೂರ್ಣಿಮೆಯ ಅಂಗವಾಗಿ ಪರಮಪೂಜ್ಯ ಶ್ರೀ ಮಹಾಬಲೇಶ್ವರ ಸ್ವಾಮೀಜಿಯವರ ಪಾದ ಪೂಜೆ , ಗುರು ವಂದನಾ ಕಾರ್ಯಕ್ರಮ ನಡೆಯಿತು.

ಗುರು ವಂದನೆ, ಪಾದ ಪೂಜೆ ಸ್ವೀಕರಿಸಿದ ಬಳಿಕ ಆಶೀರ್ವಚನ ನೀಡಿದ ಸ್ವಾಮೀಜಿ, ಭಾರತೀಯತೆಯಲ್ಲಿ

ಗುರು ಸ್ಥಾನ ಎಲ್ಲಕ್ಕಿಂತಲೂ ಶ್ರೇಷ್ಠ ವೆನಿಸಿದೆ. ಒಳಗಣ್ಣು ತೆರೆದಾಗ ಜ್ಞಾನ ಸಾಕ್ಷಾತ್ಕಾರ ಸಿಗಲು ಸಾಧ್ಯ. ಪ್ರೀತಿಯಿಂದ ಜನ ಮನವನ್ನು ಗೆಲ್ಲಬಹುದು. ಸಾರ್ಥಕ ಬದುಕಿನ ಇಚ್ಛೆಯಿದ್ದಾಗ ಮುನ್ನಡೆಯಲು ಸಾಧ್ಯ. ಭಾರತೀಯ ಮಹಾನ್ ಋಷಿ ಮುನಿ ಪರಂಪರೆ ಸತ್ವ, ಶಕ್ತಿ ಎಲ್ಲೆಡೆ ಪಸರಿಸಲಿ. ಭಾರತ ಜಗತ್ತಿಗೆ ಮಹಾಗುರುವಾಗಲಿ ಎಂದು ಸಂದೇಶ ನೀಡಿದರು.

 

ಸಮಾರಂಭದಲ್ಲಿ ಗುರು ವಂದನೆ ನಡೆಸಿದ ಬಳಿಕ ಮಾತನಾಡಿದ ಶ್ರೀ ಚಾಮುಂಡೇಶ್ವರಿ ದೇವಿ ಟ್ರಸ್ಟ್ ನ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಸಣ್ಣಗುತ್ತು ಅಳಿಕೆ ಮಾತನಾಡಿ ಗುರು ಮತ್ತು ಗುರಿ ಇದ್ದಾಗ ಬದುಕು ಯಶಸ್ಸು. ಗುರು ಕಾರುಣ್ಯದಲ್ಲಿ ಆನಂದ, ನೆಮ್ಮದಿ ಪಡೆಯಲು ಸಾಧ್ಯ ಎಂದು ತಿಳಿಸಿದರು.

 

ಮಾತೃ ಮಂಡಳಿ ಸಮಿತಿ ಅಧ್ಯಕ್ಷೆ ಸುಜಾತಾ, ಯುವ ಸೇವಾ ಸಮಿತಿ ಅಧ್ಯಕ್ಷ ಶಾಂತಪ್ಪ ಬೇಂಗರೆ ಪಡ್ಪು, ಮನೋಜ್ ಕುಮಾರ್ ಬನಾರಿ ಉಪಸ್ಥಿತರಿದ್ದರು.

ಟ್ರಸ್ಟ್ ಕಾರ್ಯದರ್ಶಿ ಶ್ರೀ ಚಂದ್ರಶೇಖರ ಕಣಿಯೂರು ಆಶಯ ಗೀತೆ ಹಾಡಿದರು. ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು.

ಗುರು ಭಕ್ತರಿಂದ ಪೂಜ್ಯ ಸ್ವಾಮೀಜಿಯವರಿಗೆ ಗುರು ವಂದನೆ ನಡೆದು ಅನುಗ್ರಹ ಮಂತ್ರಾಕ್ಷತೆ ನೀಡಲಾಯಿತು.

More from the blog

ಲೋಕಕಲ್ಯಾಣಾರ್ಥಕ್ಕಾಗಿ ಉಡುಪಿಯ ಶಂಕರಾಪುರ ಮಠದ ಸ್ವಾಮೀಜಿಯವರಿಂದ 108 ಕ್ಷೇತ್ರಗಳಿಗೆ ಪ್ರದಕ್ಷಿಣೆ….

ಬಂಟ್ವಾಳ; ಲೋಕಕಲ್ಯಾಣಾರ್ಥವಾಗಲು ಸ್ವಾಮೀಜಿಯೋರ್ವರು ತೀರ್ಥ ಯಾತ್ರೆ ಕೈಗೊಂಡಿದ್ದು, 38 ನೇ ದಿನವಾದ ಜುಲೈ 22 ರಂದು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಶಂಕರಾಪುರ ಉಡುಪಿಯ ಸಾಯಿ ಮುಖ್ಯ ಪ್ರಾಣ ದೇವಸ್ಥಾನದ...

ಬಿಜೆಪಿ ಬಂಟ್ವಾಳ ಮಹಿಳಾ ಮೋರ್ಚಾದ ವತಿಯಿಂದ ಗುರುಪೂಜೆ ಮತ್ತು ಗುರುದಕ್ಷಿಣೆ ಕಾರ್ಯಕ್ರಮ

ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಹಿಳಾ ಮೋರ್ಚಾದ ವತಿಯಿಂದ ನಡೆದ ಗೊಳ್ತಮಜಲ್ ಮಹಾ ಶಕ್ತಿ ಕೇಂದ್ರದ ಕಲ್ಲಡ್ಕ ಶ್ರೀ ರಾಮ ಮಂದಿರದಲ್ಲಿ ಗುರುಪೂಜೆ ಮತ್ತು ಗುರುದಕ್ಷಿಣೆ ಕಾರ್ಯಕ್ರಮದಲ್ಲಿ ಮಾರ್ಗದರ್ಶಕರಾದ ಡಾಕ್ಟರ್ ಕಮಲ ಪ್ರಭಾಕರ್...

ಮಾಣಿ ಕುಲಾಲ ಸೇವಾ ಸಂಘದ ಆಶ್ರಯದಲ್ಲಿ ಪ್ರಥಮ ವರ್ಷದ ಕುಲಾಲ ಬಾಂಧವರ ಕೆಸರ್‌ಡ್ ಒಂಜಿ ದಿನ

ಬಂಟ್ವಾಳ: ಮಾಣಿ ಕುಲಾಲ ಸೇವಾ ಸಂಘದ ಆಶ್ರಯದಲ್ಲಿ ಪ್ರಥಮ ವರ್ಷದ ಕುಲಾಲ ಬಾಂಧವರ ಕೆಸರ್‌ಡ್ ಒಂಜಿ ದಿನ ಕಾರ್ಯಕ್ರಮ ಸತ್ತಿಕಲ್ಲುನಲ್ಲಿ ನಡೆಯಿತು. ಕೆದಿಲ ಗ್ರಾ.ಪಂ.ಮಾಜಿ ಸದಸ್ಯ ಶ್ಯಾಮ್‌ಪ್ರಸಾದ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಕೆದಿಲ ಶ್ರೀ...

ರಾಹುಲ್ ಗಾಂಧಿ ವಿರುದ್ಧ ಅಪಪ್ರಾಚಾರ… ಪೊಳಲಿಯಲ್ಲಿ ಮಾಜಿ ಸಚಿವ ರಮಾನಾಥ್ ರೈ ಪ್ರಾರ್ಥನೆ

ಬಂಟ್ವಾಳ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಅವರ ಬಗ್ಗೆ ಮತ್ತು ಹೇಳಿಕೆಯ ವಿಚಾರವಾಗಿ ಸುಳ್ಳು ಅಪಪ್ರಚಾರ ಮಾಡುವವರಿಗೆ ದೇವರು ಸರಿಯಾದ ಉತ್ತರವನ್ನು ಕೊಡುತ್ತಾರೆ ಎಂದು ಮಾಜಿ ಸಚಿವ...