ಇರಾ ಗ್ರಾಮದ ಕುಕ್ಕಾಜೆ ತಾಜುಲ್ ಉಲಮಾ ಮಸೀದಿಯಲ್ಲಿ ಪ್ರತಿ ವಾರ ನಡೆಸಿಕೊಂಡು ಬರುತ್ತಿರುವ ಸ್ವಲಾತ್ ವಾರ್ಷಿಕವು ಆದಿತ್ಯವಾರ ಮಗ್ರಿಬ್ ನಮಾಝಿನ ಬಳಿಕ ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿ ಅಸಯ್ಯದ್ ಫಝಲ್ ಕೊಯಮ್ಮ ಕೂರತ್ ತಂಗಳ್ ನೇತೃತ್ವದಲ್ಲಿ ನಡೆಯಿತು.
ಈ ಸಂಧರ್ಭದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದ ತಂಗಳ್ ರವರು ಅಲ್ಲಾಹುವಿನ ಮೇಲೆ ಮಾಡುವ ಎಲ್ಲಾ ಕಡ್ಡಾಯ ಕರ್ಮಗಳನ್ನು ಮಾಡುವ ಮೊದಲು ಹ್ರದಯವನ್ನು ಶುದ್ದೀಕರಿಸಿ ಏಕಾಗ್ರತೆಯನ್ನು ಕಾಪಾಡಿಕೊಂಡು ಪ್ರಾರ್ಥನೆ ಮಾಡಿದಲ್ಲಿ ಮಾತ್ರ ಅಲ್ಲಾಹುವಿಗೆ ಸ್ವೀಕಾರಾರ್ಹವಾಗಿದೆ, ಪ್ರಸಕ್ತ ಸನ್ನಿವೇಶದಲ್ಲಿ ಮದುವೆ ಇನ್ನಿತರ ಕಾರ್ಯಕ್ರಮಗಳ ಹೆಸರಿನಲ್ಲಿ ನಡೆಯುವ ಆಡಂಬರ ದುಂದುವೆಚ್ಚಕ್ಕೆ ಸಮುದಾಯ ಕಡಿವಾಣ ಹಾಕಬೇಕಾದ ಅನಿವಾರ್ಯತೆಯ ಮಾತುಗಳ ಉಪದೇಶ ನೀಡಿದರು.
ಅಸಯ್ಯದ್ ಮುಶ್ತಾಕುಲ್ ರಹ್ಮಾನ್ ತಂಗಳ್ ಚಟ್ಟೆಕ್ಕಲ್ ಹಾಗೂ ಮುಹಮ್ಮದಲಿ ಸಖಾಫಿ ದಾರುಲ್ ಆಶ್ಹರಿಯ್ಯ ಸಂಧರ್ಬೊಚಿತವಾಗಿ ಉಪನ್ಯಾಸ ನೀಡಿದರು.
ಇರಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಎಂ ಬಿ ಉಮ್ಮರ್, ಮಂಚಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಇಬ್ರಾಹಿಂ ಜಿ ಎಂ, ಮಂಚಿ ಗ್ರಾಮ ಪಂಚಾಯತ್ ಸದಸ್ಯರಾದ ಮೊಹಮ್ಮದ್ ಕೆ,ಮಸೀದಿಯ ಅಧ್ಯಕ್ಷರಾದ ಅಬ್ಬಾಸ್ ಹಾಜಿ, ಪ್ರಧಾನ ಕಾರ್ಯದರ್ಶಿ ಅಝೀಝ್ ಕಾಪಿಕಾಡ್, SSF ಕಾಪಿಕಾಡ್ ಅಧ್ಯಕ್ಷರಾದ ಜಲೀಲುದ್ದಿನ್ ಡಿ, ಮಸೀದಿಯ ಇಮಾಮ್ ಮೊಹಮ್ಮದ್ ಮುಸ್ಲಿಯಾರ್, ಬಶೀರ್ ಮುಸ್ಲಿಯರ್ ಕುಕ್ಕಾಜೆ, ಶೇಖಬ್ಬ ಮುಸ್ಲಿಯಾರ್, ತೌಸೀಫ್ ಕಾಪಿಕಾಡ್ ಇನ್ನಿತರ ಧಾರ್ಮಿಕ ನಾಯಕರು ಉಪಸ್ಥಿತರಿದ್ದರು.
ಪವಿತ್ರ ಹಜ್ಜ್ ಯಾತ್ರೆ ಕೈಗೊಳ್ಳಲಿರುವ ಮೊಹಮ್ಮದ್ ಕಾಪಿಕಾಡ್ ಮತ್ತು ಉಮ್ಮರ್ ಸಿಂಗಾರಿಯವರಿಗೆ ವಿಶೇಷ ಪ್ರಾರ್ಥನೆ ನಡೆಸಲಾಯಿತು.
ಇರಾ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಬ್ದುಲ್ ರಝಕ್ ಕುಕ್ಕಾಜೆ ಧನ್ಯವಾದ ಸಲ್ಲಿಸಿದರು.
ಕೊನೆಯಲ್ಲಿ ತಬರ್ರುಖ್ ವಿತರಿಸಲಾಯಿತು.